“ದುಶ್ಚಟ ಮುಕ್ತ ಯುವಜನತೆ ದೇಶದ ಸಂಪತ್ತು’
Team Udayavani, Aug 12, 2018, 6:00 AM IST
ಉಡುಪಿ: ನಮ್ಮ ದೇಶದಲ್ಲಿ ಯುವಜನತೆ ಹೆಚ್ಚು ಇದ್ದಾರೆ. ಆದರೆ ಈ ಯುವಜನತೆ ದುಶ್ಚಟ ಮುಕ್ತವಾಗಿದ್ದರೆ ಮಾತ್ರ ದೇಶದ ಸಂಪತ್ತಾಗುತ್ತಾರೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಪೊಲೀಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರಸ್ ಕ್ಲಬ್ ಸಹಯೋಗದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗಿರುವ ಮಾದಕ ವ್ಯಸನ ವಿರೋಧಿ ಮಾಸಾಚರಣೆಯನ್ನು ಆ.11ರಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಪರೀಕ್ಷಿಸುವ ಕುತೂಹಲ: ಮಾದಕ ವ್ಯಸನಕ್ಕೆ ಕಾರಣ ಸಾಮಾನ್ಯವಾಗಿ 18-30 ವಯಸ್ಸಿನವರಲ್ಲಿ ಹೊಸತನ್ನು ಆವಿಷ್ಕರಿಸುವ, ಪರೀಕ್ಷಿಸುವ ಕುತೂಹಲ ಇರುತ್ತದೆ. ಇದು ಅವರಲ್ಲಿರುವ ಶಕ್ತಿ. ಆದರೆ ಅವರಿಗೆ ಸರಿಯಾದ ತಿಳಿವಳಿಕೆ ಇಲ್ಲದೆ ಆ ಶಕ್ತಿ ಕೆಟ್ಟ ಕೆಲಸಗಳಿಗೆ ಬಳಕೆಯಾಗುವ, ಡ್ರಗ್ಸ್‌ನಂತಹ ಮಾದಕ ವ್ಯಸನಕ್ಕೆ ಬಲಿಯಾಗುವ ಅಪಾಯ ಇರುತ್ತದೆ. ಈ ಶಕ್ತಿಯ ಸದುಪಯೋಗವಾಗಿ ಅವರು ದೇಶದ ಸಂಪತ್ತಾಗಬೇಕಾದರೆ ಅವರಿಗೆ ತಿಳಿವಳಿಕೆ ನೀಡಿ ಉತ್ತಮ ದಾರಿ ತೋರಿಸಬೇಕು. ಈ ನಿಟ್ಟಿನಲ್ಲಿ ಸಮಾಜ, ಇಲಾಖೆಗಳ ಜವಾಬ್ದಾರಿಯೂ ಇದೆ. ಇಂತಹ ಯುವಶಕ್ತಿ ಜಿಲ್ಲಾಡಳಿತ, ಪೊಲೀಸ್ ಜತೆ ಜತೆಗೆ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಯಾಗಬೇಕು. ಮುಖ್ಯವಾಹಿನಿಯಲ್ಲಿ ತೊಡಗಿಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ಶಿಕ್ಷೆಯ ಭಯ ಮೂಡಲಿ
ಮುಖ್ಯ ಅತಿಥಿಯಾಗಿದ್ದ ಮನೋ ರೋಗ ತಜ್ಞ ಡಾ| ಪಿ.ವಿ.ಭಂಡಾರಿ ಅವರು ಮಾತನಾಡಿ, ಗಾಂಜಾದಂತಹ ಮಾದಕ ವಸ್ತುಗಳು, ಇತರ ಕೆಲವು ಮಾತ್ರೆಗಳು ದೊರೆಯದಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷೆಯ ಭಯ ಹುಟ್ಟಿಸುವ ಜತೆಗೆ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಸ್ವಯಂನಿಯಂತ್ರಣ ಅಗತ್ಯ
ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ. ನಿಂಬರಗಿ ಅವರು ಮಾತನಾಡಿ, ಸಾಮಾನ್ಯವಾಗಿ ಮಾದಕ ವ್ಯಸನವು ಶ್ರೀಮಂತ ಮತ್ತು ಅತೀ ಕಡುಬಡ ಕುಟುಂಬದ ಯುವಜನರಲ್ಲಿ ಹೆಚ್ಚು ಕಂಡುಬರುತ್ತದೆ. ಹಣದ ಅಹಂಕಾರ, ಶಿಕ್ಷಣದ ಕೊರತೆಯೂ ಮಾದಕ ವ್ಯಸನಕ್ಕೆ ಕಾರಣ. ಆರಂಭದಲ್ಲಿ ಉಂಟಾಗುವ ಕುತೂಹಲ, ಅನಂತರ ವ್ಯಸನವಾಗುತ್ತದೆ. ನಮ್ಮ ದೇಶದಲ್ಲಿ ಡ್ರಗ್ಸ್‌ಗಳನ್ನು ಔಷಧವಾಗಿ ಬಳಸಲು ಮಾತ್ರ ಅನುಮತಿ ಇದೆ. ಯುವಜನತೆ ದುಶ್ಚಟ ಮುಕ್ತವಾಗ ಬೇಕಾದರೆ ಸ್ವಯಂನಿಯಂತ್ರಣ ಕೂಡ ಅಗತ್ಯ ಎಂದು ಹೇಳಿದರು.
ಅಪರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಉಪಸ್ಥಿತರಿದ್ದರು. ಡಾ| ಪಿ.ವಿ.ಭಂಡಾರಿ ಅವರೊಂದಿಗೆ ಸಂವಾದ ಜರಗಿತು. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಫೇಸ್‌ಬುಕ್ ಪೇಜ್‌ಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಅಲ್ಲದೆ ಮಾದಕ ವ್ಯಸನದ ದುಷ್ಪರಿಣಾಮ ಮತ್ತು ಕುಟುಂಬದವರು ಅನುಭವಿಸುವ ನೋವಿನ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಚಿತ್ರ ಪ್ರದರ್ಶನಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಕಿರುಚಿತ್ರ ರಚನೆ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ಡಿವೈಎಸ್‌ಪಿ ಕುಮಾರಸ್ವಾಮಿ ಸ್ವಾಗತಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು. ಪ್ರಸ್‌ಕ್ಲಬ್ ಸಂಚಾಲಕ ನಾಗರಾಜ ರಾವ್ ವರ್ಕಾಡಿ ವಂದಿಸಿದರು.
ಡ್ರಗ್ಸ್‌ನಿಂದ ಸಾವು
ಡ್ರಗ್ಸ್‌ನಿಂದ ಸಾವು ಕೂಡ ಸಂಭವಿಸುತ್ತದೆ. ಡ್ರಗ್ಸ್ ಡೋಸೇಜ್ ಜಾಸ್ತಿಯಾದಾಗ, ಒಂದೇ ಇಂಜೆಕ್ಷನ್‌ನ್ನು ಹಲವರು ಬಳಕೆಯಾಗಿ ಹೆಪಟೈಟಸ್ ಸಿ, ಎಚ್‌ಐವಿಯಂತಹ ಕಾಯಿಲೆಗಳು ಹರಡುವುದರಿಂದ ಸಾವನ್ನಪ್ಪುವ ಅಪಾಯ ಇದೆ. ಒಮ್ಮೆ ವ್ಯಸನಿಗಳಾದರೆ ಅದರಿಂದ ಮುಕ್ತರಾಗುವ ಸಾಧ್ಯತೆಗಳು ಶೇ.20ರಿಂದ 30ರಷ್ಟು ಮಾತ್ರ. ಶಿಕ್ಷಕರು ಮತ್ತು ಹೆತ್ತವರು ತಮ್ಮ ವಿದ್ಯಾರ್ಥಿಗಳು/ ಮಕ್ಕಳ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಅವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಗೆಳೆಯರ ಒತ್ತಾಯ, ಮೋಜು ಮತ್ತು ಹೊಸ ಅನುಭವ ಪಡೆಯುವ ಕುತೂಹಲ ಮೊದಲಾದವು ಮಾದಕ ದ್ರವ್ಯಗಳ ಸೇವನೆ ಆರಂಭಿಸಲು ಕಾರಣವಾಗುತ್ತವೆ. ಪೊಲೀಸ್ ಇಲಾಖೆ, ಮಾದಕ ವಸ್ತು ನಿಯಂತ್ರಣ ಇಲಾಖೆ ಮೊದಲಾದ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ.
– ಡಾ| ಪಿ.ವಿ.ಭಂಡಾರಿ, ಮನೋವೈದ್ಯರು
ಮಾದಕವ್ಯಸನ ವಿರೋಧಿ ಮಾಸಾಚರಣೆಯ ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.