Padubidri ಫಾರ್ಚೂನ್ ಸೇಫ್ಟಿ ಗ್ಲಾಸ್ ನ ನೂತನ ಘಟಕ “ಇನ್ಸುಲೇಟೆಡ್ ಗ್ಲಾಸ್’ ಉದ್ಘಾಟನೆ
Team Udayavani, Nov 20, 2023, 6:14 PM IST
ಉಡುಪಿ: ಶ್ರೀ ದೇವಿ ಗ್ಲಾಸ್ ಹೌಸ್ ಸಂಸ್ಥೆಯ ಪಡುಬಿದ್ರಿ ನಂದಿಕೂರು ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಫಾರ್ಚೂನ್ ಸೇಫ್ಟಿ ಗ್ಲಾಸ್‌ನ ನೂತನ ಘಟಕ “ಇನ್ಸುಲೇಟೆಡ್ ಗ್ಲಾಸ್’ (ಡಿಜಿಯು) ಉದ್ಘಾಟನೆ ಸೋಮವಾರ ನಡೆಯಿತು.
ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ದೀಪ ಪ್ರಜ್ವಲಿಸಿ ಮಾತನಾಡಿ, ಬದುಕಿನಲ್ಲಿ ನಿರಂತರ ಪರಿಶ್ರಮ ಮತ್ತು ಪ್ರಾಮಾಣಿಕ ದುಡಿಮೆಯಿಂದ ಯಶಸ್ಸನ್ನು ತಮ್ಮದಾಗಿಸಿಕೊಳ್ಳಬಹುದು. ಯಾವಾತ ತನ್ನ ಬದುಕಿನ ಜತೆಗೆ ಹತ್ತು ಮಂದಿಯ ಬದುಕಿಗೆ ಸಹಕಾರಿಯಾಗುತ್ತಾನೋ ಅದು ಮಾತ್ರ ನಿಜವಾದ ಬದುಕು ಎನಿಸಲಿದೆ.
ಬದುಕಿಗಾಗಿ ಆಯ್ದುಕೊಂಡ ಉದ್ಯಮದ ಮೂಲಕ ನೂರಾರು ಮಂದಿಗೆ ಉದ್ಯೋಗ ನೀಡಿ ಅವರಿಗೆ ಆಸರೆಯಾಗಿ ನಡೆಸುವ ಬದುಕು ಸಾರ್ಥಕವಾಗಲಿದೆ. ಉದ್ಯಮ ಇನ್ನಷ್ಟು ಅಭಿವೃದ್ಧಿ ಹೊಂದುವುದರೊಂದಿಗೆ ಸಾವಿರಾರು ಜನರ ಬದುಕಿಗೆ ದಾರಿದೀಪವಾಗಿ ಮೇಲ್ಮಟ್ಟಕ್ಕೆ ಏರಲಿ ಎಂದು ಆಶೀರ್ವಚನ ನೀಡಿದರು.
ಉದ್ಘಾಟಿಸಿದ ಮಾಂಡವಿ ಬಿಲ್ಡರ್ ಆ್ಯಂಡ್ ಡೆವಲಪರ್ನ ಆಡಳಿತ ನಿರ್ದೇಶಕ ಡಾ| ಜೆರ್ರಿ ವಿನ್ಸೆಂಟ್ ಡಯಾಸ್ ಅವರು, ಉದ್ಯಮದ ಮೂಲಕ ಉತ್ತಮ ಗುಣಮಟ್ಟದ ಸೇವೆ ನೀಡಿದಾಗ ಇನ್ನಷ್ಟು ಗ್ರಾಹಕರನ್ನು ಸಂಪಾದಿಸಲು ಸಾಧ್ಯವಿದೆ. ಯಾವುದೇ ಸೇವೆಯನ್ನು ಸಮಯಕ್ಕೆ ಸರಿಯಾಗಿ ನೀಡಿದಾಗ ಅದಕ್ಕೆ ಮೌಲ್ಯ ದೊರೆಯುತ್ತದೆ. ಆದುದರಿಂದ ಸಮಯದ ಬದ್ಧತೆಯೊಂದಿಗೆ ಸಾಮಾಜಿಕ ಕಳಕಳಿ, ಸತ್ಯ, ನಿಷ್ಠೆ, ಕಠಿನ ಪರಿಶ್ರಮದಿಂದ ವ್ಯವಹಾರ ನಡೆಸಿದಾಗ ಉದ್ಯಮ ಸರ್ವತೋಮುಖವಾಗಿ ಬೆಳೆದು ಸಮಾಜಮುಖಿಯಾಗಲಿದೆ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಶನಲ್ ಕೌನ್ಸಿಲ್ ಸದಸ್ಯ ಕುಮಾರಚಂದ್ರ ಮಾತನಾಡಿ, ಉತ್ಪಾದನ ಸಾಮಗ್ರಿಗಳಿಗೆ ಉತ್ತಮ ಮಾರುಕಟ್ಟೆ ದೊರಕಿದರೆ ಉದ್ಯಮ ಯಶಸ್ಸಿನ ಪಥದೆಡೆಗೆ ಸಾಗಲಿದೆ. ಗುಣಮಟ್ಟದ ಉತ್ಪನ್ನಗಳಿಗೆ ಸದಾ ಬೇಡಿಕೆ ಲಭಿಸಲಿದೆ ಎಂದರು.
ಉಡುಪಿ ಎ.ಜಿ.ಅಸೋಸಿಯೇಟ್ಸ್‌ನ ಎಂ. ಗೋಪಾಲ ಭಟ್, ಆರ್ಕಿಟೆಕ್ಟ್ ಯೋಗೀಶ್ಚಂದ್ರಧರ, ಮಂಗಳೂರು ಕ್ರೆಡೈ ಅಧ್ಯಕ್ಷ ವಿನೋದ್ ಎ.ಆರ್.ಪಿಂಟೋ, ಮಂಗಳೂರು ಎಸಿಸಿಇ (ಐ)ನ ವಿಜಯವಿಷ್ಣು ಮಯ್ಯ, ಮಂಗಳೂರು ನಾರ್ದರ್ನ್ ಸ್ಕೈ ಪ್ರಾಪರ್ಟೀಸ್ ಪ್ರೈ.ಲಿ.ನ ನಿರ್ದೇಶಕಿ ಕ್ರಿತಿನ್ ಅಮೀನ್, ಉಡುಪಿ ಎಸಿಇ ಟೆಕ್ನೋ ಕ್ರಾಫ್ಟ್ನ ಆರ್ಕಿಟೆಕ್ಟ್ ರಮಣಿ ಹಂದೆ, ಸೈಂಟ್ ಗೋಬಿನ್ ಗ್ಲಾಸ್ ಇಂಡಿಯಾ ಪ್ರೈ.ಲಿ.ನ ಜಯಕುಮಾರ್ ಶುಭ ಹಾರೈಸಿದರು.
ಉಡುಪಿ ಉಜ್ವಲ್ ಡೆವಲಪರ್ನ ಆಡಳಿತ ನಿರ್ದೇಶಕ ಪುರುಷೋತ್ತಮ ಪಿ. ಶೆಟ್ಟಿ, ಸಂಸ್ಥೆಯ ಮಾಲಕರಾದ ಸುರೇಶ್ ನಾಯ್ಕ ಪರ್ಕಳ, ಸುಮನಾ ಸುರೇಶ್ ನಾಯ್ಕ, ಹಿತೈಷಿಗಳು, ಗ್ರಾಹಕರು, ಸಿಬಂದಿ ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ಉಮೇಶ್, ಗೋಪಾಲಕೃಷ್ಣ ಅವರನ್ನು ಸಂಸ್ಥೆಯ ವತಿಯಿಂದ ಶ್ರೀಪಾದರು ಸಮ್ಮಾನಿಸಿದರು. ಉದ್ಘಾಟನೆ ಪ್ರಯುಕ್ತ ಟಫನ್ ಗ್ಲಾಸ್‌ನ ಗಟ್ಟಿತನ ಪರೀಕ್ಷೆಗೆ ಕ್ರಿಕೆಟ್ ಹಾರ್ಡ್ ಬಾಲ್ ಮೂಲಕ ಗ್ಲಾಸ್‌ಗೆ ಬೌಲಿಂಗ್ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಯಿತು. ಸಂಸ್ಥೆಯಲ್ಲಿ ತಯಾರಿಸಲ್ಪಡುವ ಹೀಟ್ ಸ್ಟ್ರೆಂಥನ್ ಗ್ಲಾಸ್, ಲ್ಯಾಮಿನೇಟೆಡ್ ಗ್ಲಾಸ್, ಬೆಂಡ್ ಗ್ಲಾಸ್, ಸ್ಮಾರ್ಟ್ ಗ್ಲಾಸ್‌ಗಳ ಪ್ರದರ್ಶನ ನಡೆಯಿತು.
ಸಂಸ್ಥೆಯ ಬ್ಯುಸಿನೆಟ್ ಹೆಡ್ ಧನುಷ್ ಎಸ್.ಪಿ. ಪ್ರಾಸ್ತಾವಿಕ ಮಾತನಾಡಿದರು. ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಪಾಡಿಗಾರು ಲಕ್ಷ್ಮಿನಾರಾಯಣ ಉಪಾಧ್ಯ ಕಾರ್ಯಕ್ರಮ ಸಂಯೋಜಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.