ಉಡುಪಿ: ನಗರಸಭೆ ಮಾಜಿ ಅಧ್ಯಕ್ಷೆಯ ಪತಿಗೆ ಮಾರಣಾಂತಿಕ ಹಲ್ಲೆ
Team Udayavani, Dec 15, 2022, 9:06 PM IST
ಉಡುಪಿ: ಅಲೆವೂರು ಸಮೀಪದ ಮಂಚಿ ಬಳಿ ಗುರುವಾರ ಮನೆಗೆ ನುಗ್ಗಿದ ಯುವಕನೊಬ್ಬ ನಗರಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ ಅವರ ಪತಿ ಕೃಷ್ಣ ನಾಯ್ಕ(54) ಅವರಿಗೆ ಮಾರಾಕಾಯುಧದಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಆರೋಪಿ ಅರ್ಜುನ್ ಏಕಾಏಕಿ ಮನೆಗೆ ನುಗ್ಗಿ ಕೃಷ್ಣ ನಾಯ್ಕ ಅವರಿಗೆ ಕಬ್ಬಿಣ ಸಲಾಕೆಯಿಂದ ಇರಿದು ಪರಾರಿಯಾಗಿದ್ದ. ಹಲ್ಲೆಯಿಂದ ಗಂಭೀರಗಾಯಗೊಂಡಿರುವ ಕೃಷ್ಣ ನಾಯ್ಕ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಅರ್ಜುನ್ ಕೂಡ ಗಾಯಗೊಂಡಿದ್ದಾನೆ.
ಘಟನೆಯಿಂದ ಮನೆಯ ಒಳಭಾಗದಲ್ಲಿ ಅಪಾರಪ್ರಮಾಣದಲ್ಲಿ ನೆತ್ತರು ಹರಿದಿದೆ. ಬಳಿಕ ಪೊಲೀಸರು ಆಗಮಿಸಿ ಕೃಷ್ಣನಾಯ್ಕ ಹಾಗೂ ಆರೋಪಿಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವರ್ಷದ ಹಿಂದೆ ಗೃಹಪ್ರವೇಶ:
ಗಂಭೀರವಾಗಿ ಗಾಯಗೊಂಡಿರುವ ಕೃಷ್ಣ ನಾಯ್ಕ ಅವರು ವರ್ಷದ ಹಿಂದಷ್ಟೇ ನೂತನ ಮನೆ ನಿರ್ಮಾಣ ಮಾಡಿದ್ದರು.
ಕಾರಣ ನಿಗೂಢ:
ಆರೋಪಿ ಅರ್ಜುನ್ ಪದವೀಧರನಾಗಿದ್ದು, ನೆರೆಮನೆಯವನಾಗಿದ್ದಾನೆ. ಕೆಲಸ ಸಂಬಂಧ ಹೊರ ಊರಿನಲ್ಲಿದ್ದ ಆತ ಇತ್ತೀಚೆಗಷ್ಟೇ ಇಲ್ಲಿಗೆ ಆಗಮಿಸಿದ್ದ. ಆದರೆ ಹಲ್ಲೆಗೆ ನಿಖರ ಕಾರಣ ಏನೆಂಬುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನ ಸ್ಥಳಕ್ಕೆ ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕರಾದ ದೇವರಾಜ ಟಿ.ವಿ.ಸಹಿತ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.