20 ವರ್ಷಗಳಲ್ಲಿ 1.18 ಲಕ್ಷ ಜನಸಂಖ್ಯೆ ವೃದ್ಧಿ


Team Udayavani, Aug 22, 2017, 8:40 AM IST

udupi-sambrama.jpg

ಉಡುಪಿ ಜಿಲ್ಲೆಯಾಗಿ ರೂಪುಗೊಂಡು 20 ವರ್ಷಗಳಲ್ಲಿ 1,18,078 ಜನಸಂಖ್ಯೆ ವೃದ್ಧಿಯಾಗಿದೆ. ಉಡುಪಿ ಜಿಲ್ಲೆ 1997 ರಲ್ಲಿ ಜನ್ಮತಾಳುವಾಗ ಅಂದಾಜು ಜನಸಂಖ್ಯೆ 11,35,888. 2017ರ ಅಂದಾಜು ಜನಸಂಖ್ಯೆ 12,53,966 2021ರಲ್ಲಿ ಈ ಜನಸಂಖ್ಯೆ 13,26,053ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ. 

ಉಡುಪಿ: ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಸಂಖ್ಯಾ ಗಣತಿ ನಡೆಯುತ್ತದೆ. ಪ್ರತಿವರ್ಷವೂ ಹಿಂದಿನ ಸಂಖ್ಯಾ ಹೆಚ್ಚಳವನ್ನು ಗಮನಿಸಿ ಸರಾಸರಿ ಲೆಕ್ಕವನ್ನೂ ಅಂಕಿಸಂಖ್ಯೆಗಳ ನಿರ್ದೇಶನಾಲಯ ಪ್ರಕಟಿಸುತ್ತದೆ. 

1991ರ ಜನಗಣತಿ ಪ್ರಕಾರ ಉಡುಪಿ ಜಿಲ್ಲೆಯ ಒಟ್ಟು ಜನಸಂಖ್ಯೆ 10,38,099. ಇದರಲ್ಲಿ ನಗರವಾಸಿಗಳ ಸಂಖ್ಯೆ 2,29,152, ಗ್ರಾಮೀಣ ವಾಸಿಗಳ ಸಂಖ್ಯೆ 8,08,947. ಒಟ್ಟು ಪುರುಷರ ಸಂಖ್ಯೆ 4,86,409, ಮಹಿಳೆಯರ ಸಂಖ್ಯೆ 5,51,690.

ತಾಲೂಕುವಾರು ವಿವರ ಇಂತಿದೆ: ಕುಂದಾಪುರ 3,51,673, ಕಾರ್ಕಳ 1,90,660, ಉಡುಪಿ 4,95,766. 

2011 ರ ಜನಗಣತಿ ವಿವರ ಇಂತಿದೆ: ಉಡುಪಿ ಜಿಲ್ಲೆಯ ಒಟ್ಟು ಜನಸಂಖ್ಯೆ 11,77,361. ಇವರಲ್ಲಿ 5,62,131 ಪುರುಷರು, 6,15,230 ಮಹಿಳೆಯರು. ಇವರಲ್ಲಿ ನಗರವಾಸಿಗಳು 3,34,061, ಗ್ರಾಮೀಣವಾಸಿಗಳು 8,43,300. ಕುಂದಾಪುರ ತಾಲೂಕಿನ ಜನಸಂಖ್ಯೆ 3,68,027. ಉಡುಪಿ ತಾಲೂಕಿನ ಜನಸಂಖ್ಯೆ 4,22,370. ಕಾರ್ಕಳ ತಾಲೂಕಿನ ಜನಸಂಖ್ಯೆ 1,90,291.

2011ರಲ್ಲಿ ಉಡುಪಿ ನಗರಸಭೆ ಜನಸಂಖ್ಯೆ 1,44,960, ಕುಂದಾಪುರ ಪುರಸಭೆ ಜನಸಂಖ್ಯೆ 30,444, ಕಾರ್ಕಳ ಪುರಸಭೆ ಜನಸಂಖ್ಯೆ 6,881. ಸಾಲಿಗ್ರಾಮದ ಜನಸಂಖ್ಯೆ 7,183. ಇದರಲ್ಲಿ ಅಧಿಸೂಚಿತ ಪ್ರದೇಶಗಳನ್ನು ಸೇರಿಸಿದರೆ ಇನ್ನಷ್ಟು ಹೆಚ್ಚಿಗೆ ಇದೆ. 2001ರ ಜನಗಣತಿಯಂತೆ ಉಡುಪಿ ನಗರದ ಜನಸಂಖ್ಯೆ 1,13,039.

ಉಡುಪಿ ಜಿಲ್ಲೆಯ 1997 ರ ಅಂದಾಜು ಜನಸಂಖ್ಯೆ 11,35,888. ತಾಲೂಕುವಾರು ವಿವರ ಇಂತಿದೆ: ಕುಂದಾಪುರ ತಾಲೂಕು- 3,95,878, ಕಾರ್ಕಳ ತಾಲೂಕು – 2,06,390, ಉಡುಪಿ ತಾಲೂಕು- 5,33,742. 

ಜಿಲ್ಲೆಯ 2017 ರ ಅಂದಾಜು ಜನಸಂಖ್ಯೆ 12,53,966. ಇದರಲ್ಲಿ ಕುಂದಾಪುರ ತಾಲೂಕು- 3,97,077, ಕಾರ್ಕಳ ತಾಲೂಕು- 2,19,372, ಉಡುಪಿ ತಾಲೂಕು- 6,37,517. 2021ರಲ್ಲಿ ಈ ಜನಸಂಖ್ಯೆ 13,26,053 ಕ್ಕೆ ಏರಬಹುದು. 

ಕಾರ್ಕಳ ಸಣ್ಣ ತಾಲೂಕಾದರೂ ದೊಡ್ಡ ತಾಲೂಕು!
ಉಡುಪಿ ಜಿಲ್ಲೆಯ ವ್ಯಾಪ್ತಿಯನ್ನು ವಿವರಿಸುವಾಗ ಕಾರ್ಕಳ ತಾಲೂಕನ್ನು ಸಣ್ಣ ತಾಲೂಕು ಎನ್ನುತ್ತೇವೆ. ಇದು ಜನಸಂಖ್ಯೆ ಆಧಾರದಲ್ಲಿ. ಆದರೆ ಭೌಗೋಳಿಕವಾಗಿ ಉಡುಪಿ ತಾಲೂಕಿಗಿಂತ ಕಾರ್ಕಳ ತಾಲೂಕು ದೊಡ್ಡದಿದೆ. ತಾಲೂಕುವಾರು ಭೌಗೋಳಿಕ ವಿಸ್ತೀರ್ಣ ಇಂತಿದೆ: ಕುಂದಾಪುರ- 1,559 ಚದರ ಕಿ.ಮೀ., ಕಾರ್ಕಳ – 1,091 ಚದರ ಕಿ.ಮೀ., ಉಡುಪಿ- 925 ಚದರ ಕಿ.ಮೀ. 

ಉಡುಪಿ ಜಿಲ್ಲೆ- ನಗರಸಭೆ ಅಸ್ತಿತ್ವಕ್ಕೂ ಕಾಕತಾಳೀಯ
1935ರಲ್ಲಿ ಏಳು ಗ್ರಾಮಗಳನ್ನು ಹೊಂದಿದ 3.75 ಚದರಮೈಲಿ ವಿಸ್ತೀರ್ಣದ ಉಡುಪಿ ನಗರಸಭೆ ಅಸ್ತಿತ್ವಕ್ಕೆ ಬಂತು. ಅನಂತರ ಪುರಸಭೆಯಾಯಿತು. 20-10-1995ರಲ್ಲಿ ಮಲ್ಪೆ, ಪುತ್ತೂರು, ಶಿವಳ್ಳಿ, ಹೆರ್ಗ, 76 ಬಡಗಬೆಟ್ಟು ಗ್ರಾಮಗಳನ್ನು ಒಳಗೊಂಡು 35 ವಾರ್ಡುಗಳ ನಗರಸಭೆಯಾಗಿ ಪರಿವರ್ತನೆಗೊಂಡಿತು.  ವಿಸ್ತೀರ್ಣವು 9.6 ಚ.ಕಿ.ಮೀ.ನಿಂದ 68.28 ಚ.ಕಿ.ಮೀ.ಗೆ ವಿಸ್ತರಣೆಯಾಯಿತು. ಉಡುಪಿ ಜಿಲ್ಲೆ ಉದ್ಘಾಟನೆಗೊಂಡದ್ದು 1997ರಲ್ಲಿ. ಬೃಹತ್‌ ಉಡುಪಿಯ ನಗರಸಭೆ 1995 ರಲ್ಲಿ ಘೋಷಣೆಯಾದರೂ ನಗರಸಭೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದದ್ದು 1997ರಲ್ಲಿ. ಎರಡೂ ಒಂದೇ ವರ್ಷದಲ್ಲಿ ಅಸ್ತಿತ್ವಕ್ಕೆ ಬಂದುದನ್ನು ಕಾಕತಾಳೀಯ ಎನ್ನಬಹುದು. 

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.