ಬಿದ್ಕಲ್‌ಕಟ್ಟೆ ಮುಖ್ಯ ರಸ್ತೆ ದುರಸ್ತಿಗೆ ಹೆಚ್ಚಿದ ಆಗ್ರಹ
Team Udayavani, Feb 2, 2019, 12:30 AM IST
ವಿಶೇಷ ವರದಿ- ಬಿದ್ಕಲ್‌ಕಟ್ಟೆ: ಉಡುಪಿಯಿಂದ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾದ ಬಾರಕೂರು – ಸ್ಯಾಬ್ರಕಟ್ಟೆ – ಬಿದ್ಕಲ್‌ಕಟ್ಟೆ ರಸ್ತೆಯಲ್ಲಿ ಬಿದ್ಕಲ್‌ಕಟ್ಟೆ ಪೇಟೆಯಿಂದ ಸುಮಾರು 1.5 ಕಿ.ಮೀ. ದೂರದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವೆನಿಸಿದೆ.
ಬಿದ್ಕಲ್ ಕಟ್ಟೆ – ಶಿರಿಯಾರ – ಬಾರಕೂರು -ಬ್ರಹ್ಮಾವರ ಮಾರ್ಗದಲ್ಲಿ ಬಿದ್ಕಲ್‌ಕಟ್ಟೆಯಿಂದ ಸ್ಯಾಬ್ರಕಟ್ಟೆವರೆಗಿನ ರಸ್ತೆ ಹಾಳಾಗಿದೆ. ಈ ಮಾರ್ಗವಾಗಿ ಪ್ರತಿ ನಿತ್ಯ ಸಿದ್ದಾಪುರ, ಹಾಲಾಡಿಯಿಂದ ಉಡುಪಿ, ಬ್ರಹ್ಮಾವರ ಕಡೆಗೆ ಸಾವಿರಾರು ವಾಹನಗಳು ತೆರಳುತ್ತವೆ. ಆದರೂ ಹಲವು ವರ್ಷಗಳಿಂದ ಈ ರಸ್ತೆ ಮಾತ್ರಚದುರಸ್ತಿ ಕಂಡಿಲ್ಲ.
ಇದೇ ಮಾರ್ಗವಾಗಿ ಮಂಗಳೂರು – ಉಡುಪಿ – ತೀರ್ಥಹಳ್ಳಿಗೂ ಹತ್ತಾರು ಬಸ್‌ಗಳು ಪ್ರತಿ ನಿತ್ಯ ಸಂಚರಿಸುತ್ತವೆ. ಕಳೆದ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಮತ್ತಷ್ಟು ಹೊಂಡ – ಗುಂಡಿಗಳು ಬಿದ್ದಿದ್ದು, ಇನ್ನೀಗ ಲೋಕಸಭೆ ಚುನಾವಣೆಗೂ ಮುನ್ನವೇ ಕಾಮಗಾರಿ ಆರಂಭಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಚುನಾವಣೆ ಮುಗಿಯುತ್ತಿದ್ದಂತೆ ಮಳೆಗಾಲ ಆರಂಭವಾದರೆ ಅದೇ ಸ್ಥಿತಿಯಲ್ಲಿ ಸಂಚರಿಸಬೇಕಾಗುತ್ತದೆ.
ಸರ್ಕಲ್ ಇಲ್ಲ ಜಂಕ್ಷನ್
ಈ ಹಿಂದೆ ಬಿದ್ಕಲ್‌ಕಟ್ಟೆ ಪೇಟೆಯಲ್ಲಿ ಸರ್ಕಲ್ ನಿರ್ಮಾಣವಾಗಲಿದೆ ಎನ್ನುವ ಮಾಹಿತಿ ಬಂದಿತ್ತು. ಆದರೆ ಸರ್ಕಲ್ ಬದಲು ಇಲ್ಲಿ ಜಂಕ್ಷನ್ ಮಾತ್ರ ಇರಲಿದೆ. ಸರ್ಕಲ್ ನಿರ್ಮಾಣವಾಗುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಶೀಘ್ರ ದುರಸ್ತಿಯಾಗಲಿ
ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದಷ್ಟು ಹದಗೆಟ್ಟು ಹೋಗಿದೆ. ಅನೇಕ ವರ್ಷಗಳಿಂದ ಮನವಿ ಕೊಟ್ಟರೂ ಕೂಡ ಈ ರಸ್ತೆಯ ಬಗ್ಗೆ ಯಾರೂ ಕೂಡ ಗಮನವೇ ಕೊಟ್ಟಿಲ್ಲ. ಈ ಸಲವಾದರೂ ಈ ರಸ್ತೆಯ ಅಭಿವೃದ್ಧಿ ಬಗ್ಗೆ ಸಂಬಂಧಪಟ್ಟವರು ಗಮನಹರಿಸಲಿ.
– ಸ್ಥಳೀಯರು, ಬಿದ್ಕಲ್‌ಕಟೆ
ಟೆಂಡರ್ ಪ್ರಕ್ರಿಯೆ
ಬಿದ್ಕಲ್‌ಕಟ್ಟೆಯಿಂದ ಬಾಕೂìರು ಕಡೆಗಿನ 300 ಮೀಟರ್ ರಸ್ತೆ ಹಾಗೂ ಬಿದ್ಕಲ್‌ಕಟ್ಟೆಯಿಂದ ಕೋಟೇಶ್ವರ ಕಡೆಗಿನ 400 ಮೀಟರ್ ರಸ್ತೆ ಅಗಲೀಕರಣಕ್ಕೆ ಅನುದಾನ ಮೀಸಲಿರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅದಾದ ಬಳಿಕ ಶೀಘ್ರ ರಸ್ತೆ ಕಾಮಗಾರಿ ಆರಂಭವಾಗಲಿದೆ.
– ಹರ್ಷವರ್ಧನ್,ಪಿಡಬ್ಲ್ಯೂಡಿ ಎಂಜಿನಿಯರ್, ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.