ಹೆಚ್ಚಿದ ತಾಪಮಾನ: ಕುಡಿಯುವ ನೀರಿಗೆ ಹಾಹಾಕಾರ
Team Udayavani, Apr 27, 2017, 5:02 PM IST
ಕುಂದಾಪುರ: ತಾಲೂಕಿನಲ್ಲಿ ಬಿಸಿಲ ಬೇಗೆಯಿಂದ ಜನರು ಕೆಂಗೆಟ್ಟಿದ್ದಾರೆ. ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು, ಮೋಡ ಕವಿದ ವಾತಾವರಣವಾಗುತ್ತಿದ್ದರೂ ಮಳೆಯ ಛಾಯೆ ಕಂಡುಬಂದಿಲ್ಲ. ತಾಲೂಕಿನ ಹಲವೆಡೆ ನೀರಿಗೆ ಹಾಹಾಕಾರ ಎದ್ದಿದ್ದು ಜನರು ಬಿಸಿಲ ಬೇಗೆಯೊಂದಿಗೆ ನೀರಿನ ಬರವನ್ನು ಎದುರಿಸುತ್ತಿದ್ದಾರೆ.
ಹಗಲು ವೇಳೆ 32ಡಿಗ್ರಿಯಿಂದ 36 ಡಿಗ್ರಿ ತನಕ ಉಷ್ಣಾಂಶವಿದ್ದರೆ ರಾತ್ರಿ 26 ಡಿಗ್ರಿಯಷ್ಟು ಉಷ್ಣಾಂಶ ಕಂಡು ಬಂದಿದ್ದು, ಕಳೆದ ಕೆಲವು ದಿನಗ ಹಿಂದೆ ಬೀಸುತ್ತಿದ್ದ ತಂಗಾಳಿಯು ಮಾಯವಾಗಿ ಬಿಸಿಗಾಳಿ ಆವರಿಸಿದೆ. ಸ್ವಲ್ಪ ಮಟ್ಟಿನ ಮಳೆಯಾಗಿದ್ದರೆ ಈ ಬಿಸಿಲ ಧಗೆ ಸ್ವಲ್ಪ ದಿನಗಳ ಮಟ್ಟಗೆ ಮಾಯವಾಗುತ್ತಿತ್ತು ಕಳೆದ ಕೆಲವು ದಿನಗಳಿಂದ ಮೋಡ ಹಾಗೂ ಬಿಸಿಲು ಕಣ್ಣು ಮುಚ್ಚಾಲೆಯಾಡುತ್ತಿದ್ದು, ಜನರು ಮಳೆಗಾಗಿ ಹಾತೊರೆಯುತ್ತಿದ್ದಾರೆ. ಮೋಡ ಮುಸುಕಿದ ವಾತಾವರಣದಿಂದಾಗಿ ತಾಪಮಾನ ಏರಿಕೆಯಾಗುತ್ತಿದೆ.
ಕುಡಿಯುವ ನೀರಿಗೆ ಬರ
ಗ್ರಾಮೀಣ ಭಾಗದ ಕೆರೆ ಬಾವಿಗಳು ಬತ್ತಿ ನೀರಿನ ಬರವನ್ನು ಕಾಣುತ್ತಿವೆ. ಮಾರ್ಚ್ ತಿಂಗಳ ಮೊದಲಲ್ಲೇ ಮದಗ ಕೆರೆಗಳು ಬಾಯೆ¤ರೆದು ನಿಂತಿವೆ. ತಾಲೂಕಿನ ವಿಸ್ತಾರವಾದ ಕೆರೆಗಳು, ಮದಗಗಳು ನೀರಿಲ್ಲದೇ ಬತ್ತಿಹೋಗಿವೆೆ. ತಾಲೂಕಿನ ಕೆಲವು ಕೆರೆಗಳು ಬತ್ತಿಹೋಗಿರುರುವುದರಿಂದ ಪರಿಸರದ ಬಾವಿಗಳಲ್ಲಿ ನೀರಿನ ಸೆಲೆಗಳು ಕಳೆದುಕೊಂಡು ಕುಡಿಯುವ ನೀರಿಗಾಗಿ ಹಪಹಪಿಸುವ ಕಾಲ ಒಂದಿದೆ.
ಕೆರೆಗಳ ಅಂತರ್ಜಲ ಕುಸಿತ ಗೊಂಡಿರುವುದರಿಂದ ಭೂಮಿಯಲ್ಲಿ ತಂಪಿರದೇ ಇರುವುದರಿಂದ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದೆ. ತಾಲೂಕಿನ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು ಈ ಭಾಗಗಳಿಗೆ ಆಯಾ ಗ್ರಾ.ಪಂ.ನಿಂದ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ತಾಲೂಕು ಆಡಳಿತ ವ್ಯವಸ್ಥೆ ಮಾಡಲಾಗುತ್ತಿದೆ. ಹಕ್ಲಾಡಿ ಗ್ರಾಮದ ತೊಪುÉ, ಬಗ್ವಾಡಿ, ಸೇನಾಪುರ, ಆಲೂರು, ಕರ್ಕುಂಜೆ ಗ್ರಾ.ಪಂ. ವ್ಯಾಪ್ತಿಯ ನೇರಳಕಟ್ಟೆ, ಗುಲ್ವಾಡಿ ಬಿಜೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳಿಹಿತ್ಲು , ಯಡ್ತರೆ ಗ್ರಾ.ಪಂ., ಬೆಳ್ವೆ ಗ್ರಾ.ಪಂ., ಕಾವ್ರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಕುಡಿಯುವ ನೀರಿನ ಅಭಾವ ಕಂಡು ಬಂದಿದೆ. ಈ ಹಿಂದಿನ ಸಾಲಿನಲ್ಲಿ ತಾಲೂಕಿನ ಸುಮಾರು 31 ಗ್ರಾ.ಪಂ. ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು.
ಅನುಷ್ಠಾನಕ್ಕೆ ಬಾರದ ಬಹುಗ್ರಾಮ ನೀರು ಸರಬರಾಜು ಯೋಜನೆ: ತಾಲೂಕಿನ ಹತ್ತು ಗ್ರಾಮಗಳಿಗೆ 11 ತೆರೆದ ಬಾವಿ 140 ಕೊಳವೆ ಬಾವಿ ಹಾಗೂ 21 ನೀರು ಸರಬರಾಜು ಟ್ಯಾಂಕ್‌ಗಳು ಇದ್ದರೂ ಕೂಡಾ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಾ ಬಂದಿದ್ದೇವೆ. ಈ ಹತ್ತು ಗ್ರಾಮಗಳಲ್ಲಿ ನದಿ ಹರಿದುಹೋಗುತ್ತಿದ್ದು ಅವುಗಳಿಗೆ ಗುಳ್ಳಾಡಿ ಹಾಗೂ ಹೆಮ್ಮಾಡಿ, ಬಳ್ಕೂರು ನಲ್ಲಿ ಉಪ್ಪುನೀರಿನ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದರ ನೀರನ್ನು ಬಹುಗ್ರಾಮ ನೀರು ಸರಬರಾಜು ಯೋಜನೆಯಲ್ಲಿ ಸೇರಿಸಿ ಕೊಂಡರೆ ಖಂಡಿತಾ ಬೇಕಾದಷ್ಟು ನೀರನ್ನು ಪಡೆಯಬಹುದಾಗಿದೆ. ಕರ್ಕುಂಜೆ ಗ್ರಾಮದ ಕೌಂಚೂರು ಬಳಿ ಪಂಪ್ ಅಳವಡಿಸಿ ಸೌಕೂರು ದೇವಸ್ಥಾನದ ಬಳಿಯಲ್ಲಿ ನೀರು ಶುದ್ದೀಕರಣ ಘಟಕವನ್ನು ನಿರ್ಮಿಸಿದಲ್ಲಿ ಅಲ್ಲಿಂದ ಈಗಾಗಲೇ ರಸ್ತೆ ಬದಿಯಲ್ಲಿ ಪಂಚಾಯತ್‌ನವರು ಅಳವಡಿಸಿರುವ ಪೈಪ್‌ಲೈನುಗಳ ಮೂಲಕ ನೀರು ಸರಬರಾಜು ಮಾಡಿ ಪ್ರತಿ ಗ್ರಾ.ಪಂ.ನವರು ಟ್ಯಾಂಕ್ ಮೂಲಕ ಸ್ಟೋರ್ ಮಾಡುವ ಕುಡಿಯುವ ನೀರಿನ ಹಾಹಾಕಾರವನ್ನು ತಡೆಯಬಹುದಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ಆದರೆ ಬಹಳಷ್ಟು ವರ್ಷಗಳ ಹಿಂದೆಯೇ ಈ ಬಗ್ಗೆ ಚರ್ಚೆಗಳು ನಡೆಯಿತ್ತಾದರೂ ಅನುಷ್ಠಾನಕ್ಕೆ ಬರಲಿಲ್ಲ.
ಬಹುಗ್ರಾಮ ಕುಡಿಯುವ ನೀರಿನ ಪ್ರಸ್ತಾವನೆ ಹಾಗೂ ಬೇಡಿಕೆಯನ್ನು ಈಗಾಗಲೇ ಇಲಾಖೆಗೆ ನೀಡಿದ್ದರೂ ಈ ತನಕ ಯಾವುದೇ ಫಲ ದೊರಕಿಲ್ಲ. ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಟ್ಯಾಂಕ್‌ಗಳನ್ನು ಬಳಸಿಕೊಂಡು ಪೈಪ್‌ಲೈನ್‌ಗಳ ಮೂಲಕ ನೀರು ಸರಬರಾಜು ಮಾಡುವ ಯೋಜನೆಯನ್ನು ಸಿದ್ಧಪಡಿಸಿದ್ದಲ್ಲಿ ಮುಂದಿನ ವರ್ಷಕ್ಕಾದರೂ ಕುಡಿಯುವ ನೀರಿನ ಸಮಸ್ಯೆಯನ್ನು ತಡೆಯಬಹುದಾಗಿದೆ. ತಜ್ಞರ ಅಭಿಪ್ರಾಯಗಳನ್ನು ತೆಗೆದುಕೊಂಡು ನೀರಿನ ಸೆಲೆಯಿರುವ ಪ್ರದೇಶಗಳಿಂದ ನೀರು ಅಭಾವವಿರುವ ಪ್ರದೇಶಗಳಿಗೆ ಸರಬರಾಜು ಮಾಡುವ ಸಂಕಲ್ಪವನ್ನು ಮಾಡಬೇಕು.
ಧಿಧಿ- ಕೆಂಚನೂರು ಸೋಮಶೇಖರ ಶೆಟ್ಟಿ, ಪ್ರಗತಿಪರ ಕೃಷಿಕ
– ಉದಯ ಆಚಾರ್ ಸಾಸ್ತಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ
Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ
Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.