ಹೆಚ್ಚಿದ ಮತದಾನ: ಲಾಭ ಯಾರಿಗೆ?

Team Udayavani, Apr 27, 2019, 11:16 AM IST

udupi-vote..tdy-6

ಉಡುಪಿ, ಎ. 26: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಮತದಾನ ಸಾರ್ವಕಾಲಿಕ ದಾಖಲೆಯಾಗಿ ಶೇ. 75.91 ಮತದಾನವಾಗಿದೆ. 2014ರ ಚುನಾವಣೆಗೆ ಹೋಲಿಸಿದರೆ ಆಗಿನಕ್ಕಿಂತ (ಶೇ.74.46) ಈಗ ಶೇ.1.45 ಮತದಾನ ಹೆಚ್ಚಳವಾಗಿದೆ.

ವಿಧಾನಸಭಾವಾರು ಮತದಾನ:

ಕುಂದಾಪುರದಲ್ಲಿ ಈ ಬಾರಿ ಶೇ.77.66 ಮತದಾನವಾಗಿದ್ದರೆ 2014ರ ಲೋಕಸಭಾ ಚುನಾವಣೆಯಲ್ಲಿ ಶೇ.76.25, 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ.79.47 ಮತದಾನವಾಗಿತ್ತು.

ಉಡುಪಿಯಲ್ಲಿ ಈ ಬಾರಿ ಶೇ.78.77 ಮತದಾನವಾದರೆ, 2014ರ ಚುನಾವಣೆ ಯಲ್ಲಿ ಶೇ.76.82, 2018ರಲ್ಲಿ ಒಟ್ಟು ಶೇ.78.28 ಮತದಾನವಾಗಿತ್ತು.

ಕಾಪುವಿನಲ್ಲಿ ಈ ಬಾರಿ ಶೇ. 77.89 ಮತದಾನವಾದರೆ, 2014ರಲ್ಲಿ ಶೇ.76.57, ವಿಧಾನಸಭೆ ಚುನಾವಣೆಯಲ್ಲಿ ಶೇ.78.93 ಮತದಾನವಾಗಿತ್ತು.

ಕಾರ್ಕಳದಲ್ಲಿ ಈ ಬಾರಿ ಶೇ. 78.39 ಮತದಾನವಾದರೆ, 2014ರಲ್ಲಿ ಶೇ.78.98, ವಿಧಾನಸಭೆ ಚುನಾವಣೆಯಲ್ಲಿ ಶೇ.80.61 ಮತದಾನವಾಗಿತ್ತು.

ಶೃಂಗೇರಿಯಲ್ಲಿ ಈ ಬಾರಿ ಶೇ. 78.86 ಮತದಾನವಾದರೆ, 2014ರಲ್ಲಿ ಶೇ.77.22, ವಿಧಾನಸಭೆ ಚುನಾವಣೆಯಲ್ಲಿ ಶೇ.82.55 ಮತದಾನವಾಗಿತ್ತು.

ಮೂಡಿಗೆರೆಯಲ್ಲಿ ಈ ಬಾರಿ ಶೇ. 74.79 ಮತದಾನವಾದರೆ, 2014ರಲ್ಲಿ ಶೇ.72.27, ವಿಧಾನಸಭೆ ಚುನಾವಣೆಯಲ್ಲಿ ಒಟ್ಟು ಶೇ.77.15 ಮತದಾನ ವಾಗಿತ್ತು.

ಚಿಕ್ಕಮಗಳೂರಿನಲ್ಲಿ ಈ ಬಾರಿ ಶೇ. 69.45 ಮತದಾನವಾದರೆ, 2014ರಲ್ಲಿ ಶೇ.67.43, ವಿಧಾನಸಭೆ ಚುನಾವಣೆ ಯಲ್ಲಿ ಶೇ.74.52 ಮತದಾನವಾಗಿತ್ತು.

ತರಿಕೆರೆಯಲ್ಲಿ ಈ ಬಾರಿ ಶೇ.72.18 ಮತದಾನವಾದರೆ, 2014ರಲ್ಲಿ ಶೇ. 70,88, ವಿಧಾನಸಭೆ ಚುನಾವಣೆಯಲ್ಲಿ ಒಟ್ಟು ಶೇ.81.78 ಮತದಾನವಾಗಿತ್ತು.

ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕುಂದಾಪುರ, ಶೃಂಗೇರಿ, ಚಿಕ್ಕಮಗಳೂರು, ತರಿಕೆರೆ, ಮೂಡಿಗೆರೆ, ಕಾಪುವಿನಲ್ಲಿ ವಿಧಾನಸಭೆಗಿಂತ ಕಡಿಮೆ, ಲೋಕಸಭೆಗಿಂತ ಹೆಚ್ಚು ಮತದಾನವಾಗಿದೆ. ಕಾರ್ಕಳದಲ್ಲಿ ಎರಡೂ ಚುನಾವಣೆಗಿಂತ ಕಡಿಮೆ ಮತದಾನವಾಗಿದೆ. ಉಡುಪಿಯಲ್ಲಿ ಮಾತ್ರ ಎರಡೂ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಮತದಾನವಾಗಿದೆ. ಸಾಮಾನ್ಯವಾಗಿ ಮತದಾರರು ಲೋಕಸಭೆ, ವಿಧಾನಸಭೆ, ಜಿ.ಪಂ., ತಾ.ಪಂ., ಗ್ರಾ.ಪಂ.ಗಳಲ್ಲಿ ಕೆಳಗಿನ ಹಂತದ ಚುನಾವಣೆಗೆ ಬಂದಾಗ ಹೆಚ್ಚು ತೊಡಗಿಸಿಕೊಳ್ಳುತ್ತಾರೋ? ಅಥವಾ ಲೋಕಸಭೆಗಿಂತ ಚಿಕ್ಕ ಭೌಗೋಳಿಕ ಪ್ರದೇಶ ವ್ಯಾಪ್ತಿಯ ವಿಧಾನಸಭೆಗೆ ಜನರು ಹೆಚ್ಚು ಉತ್ಸುಕರಾಗಿರುತ್ತಾರೋ ಎಂದು ಸಂಶಯ ಮೂಡಿಬರುತ್ತದೆ.

ಶೃಂಗೇರಿಯಲ್ಲಿ ಶೇ. 78.86 ಮತದಾನ ವಾಗಿದ್ದು ಪ್ರಥಮ ಸ್ಥಾನದಲ್ಲಿದೆ. ಶೇ. 69.45 ಮತದಾನವಾಗಿರುವ ಚಿಕ್ಕಮಗಳೂರು ಕೊನೆಯ ಸ್ಥಾನದಲ್ಲಿದೆ. 2014ರ ಚುನಾವಣೆಯಲ್ಲಿ ಕಾರ್ಕಳ ಶೇ. 78.98 ಮತಗಳಿಂದ ಮೊದಲ ಸ್ಥಾನದ ಲ್ಲಿತ್ತು ಮತ್ತು ಚಿಕ್ಕಮಗಳೂರು ಶೇ.67.43 ಮತಗಳಿಂದ ಕೊನೆಯ ಸ್ಥಾನದಲ್ಲಿತ್ತು.

ಬಿಜೆಪಿ ವರಸೆ:

ಹೊಸ ಮತದಾರರು ಮೋದಿ ಪರವಾಗಿ ಹೆಚ್ಚು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಎಲ್ಲ ಕಡೆ ಕಾರ್ಯ ಕರ್ತರು ಒಮ್ಮನಸ್ಸಿನಿಂದ ಕೆಲಸ ಮಾಡಿರು ವುದು, ಎಲ್ಲಕ್ಕಿಂತ ಮುಖ್ಯವಾಗಿ ದೇಶ ಉಳಿಸಲು ನರೇಂದ್ರ ಮೋದಿ ಸಮರ್ಥ ನಾಯಕನೆಂದು ಮತದಾರರು ಅರಿತಿರು ವುದು ನಮಗೆ ಪೂರಕ. ಇದುವರೆಗೆ ಮತದಾನದಿಂದ ದೂರು ಉಳಿಯುತ್ತಿದ್ದ ಶಿಕ್ಷಿತ ಮತದಾರರು ಬಹಳ ಬೇಗ ಬಂದು ಮತ ಚಲಾಯಿಸಿದ್ದಾರೆ. ಯಾವಾಗ ಹೆಚ್ಚು ಮತದಾನವಾಗುತ್ತದೋ ಆಗ ಬಿಜೆಪಿಗೇ ಗೆಲುವಾಗಿದೆ ಎನ್ನುವುದು ನಮ್ಮ ಅನುಭವ ಎಂದು ಬಿಜೆಪಿ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಜೆಡಿಎಸ್‌- ಕಾಂಗ್ರೆಸ್‌ ವರಸೆ:

ಮೊಗವೀರ ಸಮುದಾಯದವರು ತಮ್ಮ ಅಭ್ಯರ್ಥಿಗೆ ಹೆಚ್ಚಿನ ಮತದಾನ ಮಾಡುವುದರಿಂದ ಉಡುಪಿ, ಕಾಪು, ಕುಂದಾಪುರ ಕ್ಷೇತ್ರದಲ್ಲಿ ತಾವೇ ಮುಂದಿದ್ದು ಉಡುಪಿ ನಗರ ಭಾಗದಲ್ಲಿ ಮಾತ್ರ ಕಡಿಮೆಯಾದರೂ ಬ್ರಹ್ಮಾವರ ಭಾಗದಲ್ಲಿ ಮುಂದಿದ್ದೇವೆ. ಕಾರ್ಕಳ ಸಮಸಮವಾಗಿದ್ದೇವೆ. ತರಿಕೆರೆ ಕ್ಷೇತ್ರದಲ್ಲಿ ಗಂಗಾಮತಸ್ಥರು ದೊಡ್ಡ ಸಂಖ್ಯೆಯಲ್ಲಿರುವುದು ನಮಗೆ ಹೆಚ್ಚಿನ ಬಲ ಸಿಗಲಿದೆ. ಚಿಕ್ಕಮಗಳೂರು ಕ್ಷೇತ್ರ ಹೊರತುಪಡಿಸಿ ತರಿಕೆರೆ, ಮೂಡಿಗೆರೆ, ಶೃಂಗೇರಿಯಲ್ಲಿ ಅಭ್ಯರ್ಥಿ ಹೊಸಮುಖ ವಾಗಿರುವುದರಿಂದ, ಜೆಡಿಎಸ್‌ ಪ್ರಬಲ ವಾಗಿರುವುದರಿಂದ ಹೆಚ್ಚಿನ ಲಾಭ ತರಲಿದೆ ಎಂದು ಕಾಂಗ್ರೆಸ್‌- ಜೆಡಿಎಸ್‌ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

5-thekkatte

Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.