ಹೆಚ್ಚುತ್ತಿದೆ ಬೋಟ್ ಅವಘಡ
ಗಂಗೊಳ್ಳಿ - ಕೋಡಿ ಅಳಿವೆ ಪ್ರದೇಶದಲ್ಲಿ ಅಪಾಯ ಭೀತಿ
Team Udayavani, Nov 2, 2019, 4:26 AM IST
ಸಾಂದರ್ಭಿಕ ಚಿತ್ರ
ಗಂಗೊಳ್ಳಿ: ಕೋಡಿ – ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಹೂಳು ತುಂಬಿ, ಮೀನುಗಾರರಿಗೆ ಕಂಟಕವಾಗುತ್ತಿದೆ. ಎರಡು ವರ್ಷಗಳಲ್ಲಿ ಆರಕ್ಕೂ ಮಿಕ್ಕಿ ಮೀನುಗಾರಿಕೆ ಬೋಟ್‌ಗಳು ಅವಘಡಕ್ಕೀಡಾಗಿದ್ದು, ಮೀನುಗಾರರು ತೀವ್ರ ಆತಂಕಿತರಾಗಿದ್ದಾರೆ.
ಅಳಿವೆ ಪ್ರದೇಶದಲ್ಲಿ ಮರಳು ದಿಬ್ಬ ನಿರ್ಮಾಣಗೊಂಡಿದ್ದು, ಬೋಟುಗಳು ಗಂಗೊಳ್ಳಿ ಬಂದರು ಪ್ರವೇಶಿಸಲು ಮತ್ತು ಹೊರ ಹೋಗಲು ಹರಸಾಹಸ ಪಡುವಂತಾಗಿದೆ. ಮರಳು ದಿಬ್ಬಗಳ ಆಳ- ಎತ್ತರ ವನ್ನು ಅಂದಾಜಿಸಲಾಗದೆ ಅನೇಕ ಬೋಟುಗಳು ಅವಘಡಕ್ಕೀಡಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹೂಳೆತ್ತಲು ಮುಂದಾಗುತ್ತಿಲ್ಲ ಎನ್ನುವುದು ಮೀನುಗಾರರ ಅಳಲು. ಗಂಗೊಳ್ಳಿಯಲ್ಲಿ ಅನುಷ್ಠಾನಗೊಂಡಿರುವ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಅಳಿವೆ ಪ್ರದೇಶ ಹೂಳೆತ್ತಲು ಅನುದಾನ ಮೀಸಲಿರಿ ಸಲಾಗಿದ್ದು, ಗುತ್ತಿಗೆದಾರರು ಹೂಳೆತ್ತಲು ಮೀನಮೇಷ ಎಣಿಸುತ್ತಿದ್ದಾರೆ. ಬ್ರೇಕ್ ವಾಟರ್ ಕಾಮಗಾರಿ ಬಹುತೇಕ ಪೂರ್ಣಗೊಂಡು ವರ್ಷ ಕಳೆಯುತ್ತಿದ್ದರೂ ಬ್ರೇಕ್ ವಾಟರ್ ಕಾಮಗಾರಿಯ ಪ್ರಸ್ತಾವನೆಯಲ್ಲಿ ಹೂಳೆತ್ತುವ ಕಾಮಗಾರಿ ಇದ್ದರೂ ಹೂಳೆತ್ತದೇ ಇರುವುದು ಸ್ಥಳೀಯ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಮರಳು ದಿಬ್ಬ ಸೃಷ್ಟಿ
ಬ್ರೇಕ್ ವಾಟರ್ ಕಾಮಗಾರಿ ವೇಳೆ ಕೋಡಿ ಪ್ರದೇಶದಲ್ಲಿ ರಾಶಿ ಹಾಕಲಾದ ಮರಳನ್ನು ಅಲ್ಲಿಂದ ತೆಗೆಯದೆ ಬಿಟ್ಟಿದ್ದರಿಂದ ಈಗ ಪಂಚಗಂಗಾವಳಿ ಹೊಳೆಯಲ್ಲಿ ಮರಳು ದಿಬ್ಬ ಸಂಗ್ರಹವಾಗಿದೆ. ಈ ಮರಳು ನೇರವಾಗಿ ಗಂಗೊಳ್ಳಿ ಅಳಿವೆ ಬಾಗಿಲನ್ನು ಸೇರಿಕೊಳ್ಳುವುದರ ಜತೆಗೆ ನದಿಯಲ್ಲಿ ಅಲ್ಲಲ್ಲಿ ಶೇಖರಣೆಯಾಗಿ ದಿಬ್ಬಗಳಾಗಿವೆ. ನದಿಯಲ್ಲಿ ಅಲ್ಲಲ್ಲಿ ಮರಳ ದಿಬ್ಬ ಸೃಷ್ಟಿಯಾಗುತ್ತಿರುವುದರಿಂದ ನದಿ ಪಾತ್ರವೇ ಬದಲಾಗುವ ಆತಂಕ ಕೂಡ ಎದುರಾಗಿದೆ. ಜತೆಗೆ ಗಂಗೊಳ್ಳಿ ಬಂದರು ಹಾಗೂ ಕೋಡಿಯಿಂದ ಮೀನುಗಾರಿಕೆಗೆ ತೆರಳುವ ಬೋಟುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಇದರಿಂದೇನು ಸಮಸ್ಯೆ?
ಸಮುದ್ರದ ಅಲೆಗಳ ಇಳಿತದ ಸಮಯದಲ್ಲಿ ಬೋಟುಗಳು ಸಂಚರಿಸುವುದು ಕಷ್ಟವಾಗುತ್ತಿದೆ. ಭರತದ ಸಮಯ ನೋಡಿ ಬೋಟುಗಳು ಬಂದರು ಒಳಗೆ ಬರುವುದು ಮತ್ತು ಹೊರಗೆ ಹೋಗಬೇಕಾಗಿದ್ದು, ಸಾಕಷ್ಟು ತೊಂದರೆಯಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮರಳು ಶೇಖರಣೆಯಾದ್ದರಿಂದ ಕಳೆದ ಒಂದು ತಿಂಗಳೊಳಗೆ ಮೂರು ಬೋಟುಗಳು ಮರಳ ದಿಬ್ಬಕ್ಕೆ ಢಿಕ್ಕಿ ಹೊಡೆದು ಮರಳಲ್ಲಿ ಹೂತು ಹೋದ ಘಟನೆ ನಡೆದಿದೆ.
ಗಂಗೊಳ್ಳಿ ಬ್ರೇಕ್ ವಾಟರ್ ಕಾಮಗಾರಿ ಹಿನ್ನೆಲೆಯಲ್ಲಿ ತೆಗೆಯಲಾದ ಮಣ್ಣನ್ನು ತೆರವುಗೊಳಿಸದಿರುವುದೇ ಈ ಅವಘಡಗಳಿಗೆ ಕಾರಣ ಎನ್ನುವ ಮೀನುಗಾರರು, ಅಳಿವೆಯಲ್ಲಿ ಮರಳು ರಾಶಿ ಬಿದ್ದಿದ್ದು, ತೆರವುಗೊಳಿಸದೆ ಇದ್ದರೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಇದರಿಂದ ಮೀನುಗಾರಿಕೆ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹೂಳೆತ್ತುವ ಸಂಬಂಧ ಮುಂಬಯಿಯ ಸಂಸ್ಥೆಯೊಂದು ಸರ್ವೇ ಮಾಡಿದ್ದು, ಅದರ ವರದಿಗೆ ಕಾಯುತ್ತಿದ್ದೇವೆ. ಆ ವರದಿ ಆಧರಿಸಿ ಕರಡು ತಯಾರಿಸಿ, ಸರಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಅಳಿವೆ, ಜೆಟ್ಟಿ ಮತ್ತು ಮ್ಯಾಂಗನೀಸ್ ಜೆಟ್ಟಿ ಹೂಳೆತ್ತಲು 2 ಕೋ.ರೂ. ಬೇಕಾಗಬಹುದು. ಬ್ರೇಕ್ ವಾಟರ್ ಕಾಮಗಾರಿಯ ಪ್ರಸ್ತಾವನೆಯಲ್ಲಿ ಹೂಳೆತ್ತುವ ಕಾಮಗಾರಿ ಸೇರಿಲ್ಲ. ಹೀಗಾಗಿ ಬೇರೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಮೀನುಗಾರರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಅರಿವಿದ್ದು, ಶೀಘ್ರ ಹೂಳೆತ್ತಲು ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡಲಾಗುತ್ತಿದೆ.
– ಉದಯಕುಮಾರ್, ಸ.ಕಾ. ಎಂಜಿನಿಯರ್, ಬಂದರು ಮತ್ತು ಮೀನುಗಾರಿಕೆ ಇಲಾಖೆ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.