ಹೆಚ್ಚುತ್ತಿರುವ ಸೋಲಾರ್ ದೀಪದ ಬ್ಯಾಟರಿ ಕಳ್ಳತನ
Team Udayavani, Mar 13, 2019, 1:00 AM IST
ಹೆಬ್ರಿ: ಕುಚ್ಚಾರು ಸುತ್ತಮುತ್ತಲಿನ ಪ್ರದೇಶದಲ್ಲಿ ರಸ್ತೆಬದಿಯ ಸೋಲಾರ್ ದೀಪಗಳ ಬ್ಯಾಟರಿ ಕಳ್ಳತನ ಹೆಚ್ಚುತ್ತಿದ್ದು ತಂಡದಿಂದ ಈ ಕೃತ್ಯ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪಂ. ವ್ಯಾಪ್ತಿಯ ಹಾಲಿಕೋಡ್ಲು ಶಾಲೆಯ ಬಳಿ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಸೋಲಾರ್ ದೀಪದ ಬ್ಯಾಟರಿ ಹಾಗೂ ಹಾಲಿಕೊಡ್ಲು ಸಮೀಪ ಕೆಲವೊಂದು ಬ್ಯಾಟರಿ ಕಳ್ಳತನವಾಗಿದೆ.
ಈ ಹಿಂದೆ ಅಜೆಕಾರು ಸುತ್ತಮುತ್ತಲಿನ ಪ್ರದೇಶದಲ್ಲಿ ಬ್ಯಾಟರಿ ಕಳ್ಳತನವಾಗುವ ಬಗ್ಗೆ ಪೊಲೀಸರು ತನಿಖೆ ನಡೆಸಿ ಕಳ್ಳರನ್ನು ಬಂಧಿಸಿದ್ದು, ಈಗ ಮತ್ತೆ ಅದೇ ತಂಡ ಈ ಭಾಗದಲ್ಲಿಯೂ ಕಳ್ಳತನ ಮಾಡುತ್ತಿದೆ ಎಂಬ ಸಂಶಯ ಸ್ಥಳೀಯರಿಂದ ವ್ಯಕ್ತವಾಗಿದೆ.
ತಂಡದ ಕೃತ್ಯ
ಉಡುಪಿ, ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯ ಎಲ್ಲಾ ಪಂಚಾಯತ್ ಪ್ರದೇಶಗಳಲ್ಲಿ ಅಳವಡಿಸಲಾದ ಬ್ಯಾಟರಿಗಳ ಕಳ್ಳತನ ನಿರಂತರವಾಗಿದೆ. ಈ ಬಗ್ಗೆ ಸ್ಥಳೀಯರು, ಪಂಚಾಯತ್ ಹಾಗೂ ಪೊಲೀಸ್ ಇಲಾಖೆಗೆ ವಿಶೇಷ ಗಮನ ನೀಡಿ ಕಳ್ಳರನ್ನು ಬಂಧಿಸುವಂತೆ ತಿಳಿಸಿದ್ದಾರೆ.
ಸೋಲಾರ್ ಬ್ಯಾಟರಿಯನ್ನು ಅಳವಡಿಸಿರುವವರೇ ಈ ಕೃತ್ಯ ಎಸಗಿರಬಹುದೇ ಎಂಬ ಸಂಶಯವೂ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ.
ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರವಾಗಿ ತನಿಖೆ ನಡೆಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ಬಂಧಿಸಿ
ಈ ಭಾಗದಲ್ಲಿ ಬ್ಯಾಟರಿ ಕಳ್ಳತನ ಮಾಡುವ ಜಾಲಹೆಚ್ಚಾಗುತ್ತಿದ್ದು ಇಲಾಖೆ ಈ ಬಗ್ಗೆ ಗಮನಿಸಿ ತನಿಖೆ ನಡೆಸುವಂತೆ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಹೆಬ್ರಿ ಠಾಣೆಗೆ ದೂರು ನೀಡಲಾಗಿದ್ದು ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಂತೆ ತಿಳಿಸಲಾಗಿದೆ.
-ರಾಮಣ್ಣ ಪೂಜಾರಿ, ಅಧ್ಯಕ್ಷರು,ಗ್ರಾ.ಪಂ.ಕುಚ್ಚಾರು
ಕಾರ್ಯಾಚರಣೆ
ಕುಚ್ಚಾರು ಪ್ರದೇಶದಲ್ಲಿ ಬ್ಯಾಟರಿ ಕಳ್ಳತನವಾಗುವ ಬಗ್ಗೆ ಮಾಹಿತಿಯಿದ್ದು ರಾತ್ರಿ ಹೊತ್ತು ವಿಶೇಷ ತನಿಖಾ ತಂಡದೊಂದಿಗೆ ಕಾರ್ಯಾಚರಣೆ ಮಾಡಲಾಗುತ್ತದೆ.
-ಸತೀಶ್ ಬಲ್ಲಾಳ್, ಠಾಣಾಧಿಕಾರಿ ,ಹೆಬ್ರಿ ಪೊಲೀಸ್ ಠಾಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್
Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?
ಎ.ಎಂ. ಪ್ರಸಾದ್ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.