ವಿವಿಧೆಡೆ ಸ್ವಾತಂತ್ರ್ಯ ಸಂಭ್ರಮ
Team Udayavani, Aug 16, 2017, 6:50 AM IST
ಉಡುಪಿ: ಬೀಡಿನಗುಡ್ಡೆ ಮೈದಾನದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಿಂದ ಜರಗಿತು. ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಮುದರಂಗಡಿಯ ಸ್ವೀವನ್ ವಿಕ್ಟರ್ ಡಿ’ಸೋಜ, ಶಂಕರನಾರಾಯಣದ ಶ್ರೀವತ್ಸ ರಾವ್ ಬಿ.ವಿ., ದ್ವಿತೀಯ ಪಿಯುಸಿ ಗಂಗೊಳ್ಳಿಯ ರಾಧಿಕಾ ಪೈ, ಉಡುಪಿಯ ಕೆ.ಉತ್ಪಲ್ ಶೆಣೈ, ಅದಿತಿ ಕಿರಣ್ ಅವರನ್ನು ಸಮ್ಮಾನಿಸಲಾಯಿತು.
ರಾಜ್ಯ ಮಟ್ಟದ ಜೀವ ರಕ್ಷಕ ಪ್ರಶಸ್ತಿಯನ್ನು ಕುಂದಾಪುರದ ವಿ. ವಾಸುದೇವ ಹಂದೆ, ಕೋಟದ ನಾಗರಾಜ ಪುತ್ರನ್, ಉಡುಪಿಯ ನಿತ್ಯಾನಂದ ವಳಕಾಡು ಅವರಿಗೆ ನೀಡಲಾಯಿತು. ಉಡುಪಿ ಮುಕುಂದಕೃಪಾ, ಕುಂಜಿಬೆಟ್ಟು ಟಿ.ಎ.ಪೈ ಶಾಲೆ, ಇಂದ್ರಾಳಿ, ಬೈಲೂರು ವಾಸುದೇವ ಕೃಪಾ, ವಳಕಾಡು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕುದಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಿರೀಕ್ಷಕ ರಾಘವೇಂದ್ರ ಆರ್. ನೇತೃತ್ವದಲ್ಲಿ ನಡೆದ ಆಕರ್ಷಕ ಪಥಸಂಚಲನದಲ್ಲಿ ವಿಜೇತರಾದವರ ವಿವರ ಇಂತಿದೆ:
ಪ್ರಾಥಮಿಕ ಶಾಲಾ ವಿಭಾಗ:
1. ವಳಕಾಡು ಶಾಲೆಯ ಸೇವಾದಳದ ಬಾಲಕಿಯರು, 2. ಸೈಂಟ್ ಸಿಸಿಲಿ ಶಾಲೆಯ ಗೈಡ್ಸ್ ಬಾಲಕಿಯರು,
ಪ್ರೌಢಶಾಲಾ ವಿಭಾಗ: 1. ಹೆಬ್ರಿ ನವೋದಯ ವಿದ್ಯಾಲಯದ ಸ್ಕೌಟ್ಸ್ ಬಾಲಕರು, 2. ಸೈಂಟ್ ಸಿಸಿಲಿ ಶಾಲೆ, 3. ಕಡಿಯಾಳಿ ಕಮಲಾಬಾಯಿ ಶಾಲೆ. ಕಾಲೇಜು ವಿಭಾಗ: 1. ಎಂಜಿಎಂ
ಆರ್ಮಿ ವಿಭಾಗ, 2. ಪಿಪಿಸಿ ನೇವಿ, 3. ಪಿಪಿಸಿ ಆರ್ಮಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.