5 ವರ್ಷಗಳಲ್ಲಿ ಭಾರತ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿ


Team Udayavani, Jan 10, 2021, 1:56 AM IST

5 ವರ್ಷಗಳಲ್ಲಿ ಭಾರತ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿ

ಉಡುಪಿ: ಈಗಿನ ಸಣ್ಣಪುಟ್ಟ ಹಿನ್ನಡೆ, ಸವಾಲುಗಳ ಮಧ್ಯೆಯೂ ಭಾರತ ಐದು ವರ್ಷಗಳಲ್ಲಿ ಜಗತ್ತಿನಲ್ಲಿ ಅಮೆರಿಕ, ಚೀನ ಬಳಿಕ ಮೂರನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ದೇಶಕ ಸತೀಶ್‌ ಮರಾಠೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ “ಉದಯವಾಣಿ’ ಜತೆಗಿನ ಸಂದರ್ಶನದಲ್ಲಿ ಅವರು ಹೊಸ ಸಾಧ್ಯತೆಗಳನ್ನು ವಿವರಿಸಿದರು.

  • ಕೃಷಿ ಕ್ಷೇತ್ರದಲ್ಲಿ ಧಾನ್ಯಗಳ ಉತ್ಪಾದನೆ ಪ್ರಮಾಣ ಶೇ. 42 ರಷ್ಟಿದೆ. ಮೀನುಗಾರಿಕೆ, ಪಶುಸಂಗೋಪನೆ ಇತ್ಯಾದಿ ಕ್ಷೇತ್ರಗಳ ಪ್ರಮಾಣ ಶೇ. 58 ರಷ್ಟಿದೆ. ಇವೆಲ್ಲವೂ ಕೃಷಿ ಸಂಬಂಧಿತ ಕ್ಷೇತ್ರಗಳು. ಧಾನ್ಯ ಉತ್ಪಾದನೆ ಋತು ಆಧಾರಿತವಾದದ್ದು. ಉಳಿದ ಸಮಯದಲ್ಲಿ ಕೃಷಿಕರನ್ನು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ತೊಡಗುವಂತೆ ಮಾಡಬೇಕು. ಹಾಗಾಗಿ ಆತ್ಮನಿರ್ಭರ ಭಾರತ್‌ ಯೋಜನೆಯಡಿ ಕೃಷಿ ಸಂಸ್ಕರಣೆ ಕೈಗಾರಿಕೆಗಳಿಗೂ ಆದ್ಯತೆ ಕೊಡಲಾಗುತ್ತಿದೆ. ನಮ್ಮ ಎಷ್ಟೋ ಉತ್ಪನ್ನಗಳು ಶೇಖರಿಸಿಡಲಾಗದೇ ಹಾಳಾಗುತ್ತಿವೆ. ಗ್ರಾಮೀಣ ಭಾರತದಲ್ಲಿ ಶೇ. 35 ಮಾತ್ರ ಕೃಷಿ ಕ್ಷೇತ್ರದ ಆದಾಯವಾಗಿದ್ದು ಉಳಿದದ್ದು ಸಾರಿಗೆ, ಆರೋಗ್ಯ, ವ್ಯಾಪಾರ ಇತ್ಯಾದಿಯಿಂದ ಆಗುತ್ತಿದೆ.
  • 1967ರಿಂದ 70ರ ಅವಧಿಯಲ್ಲಿ ಆಹಾರ ಧಾನ್ಯದ ಸಮಸ್ಯೆ ಎದುರಾಯಿತು. ಆಗ ಅಮೆರಿಕ, ರಷ್ಯಾದಿಂದ ಗೋಧಿಯನ್ನು ತರಿಸಿಕೊಂಡೆವು. ಅನಂತರ ಕೇಂದ್ರ, ರಾಜ್ಯ ಸರಕಾರಗಳ ಹಸುರು ಕ್ರಾಂತಿ ಫ‌ಲ ಕೊಟ್ಟವು. ಭವಿಷ್ಯದಲ್ಲಿ ಸಸ್ಯಾ ಹಾರದ ಬೇಡಿಕೆ ಹೆಚ್ಚುತ್ತಿದ್ದು, ಕೃಷಿ ಉತ್ಪನ್ನಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ನಬಾರ್ಡ್‌-ಎನ್‌ಸಿಡಿಸಿ ಜಂಟಿಯಾಗಿ ಕೃಷಿ ಕ್ಷೇತ್ರಕ್ಕೆ ಹಣಕಾಸು ಸೌಲಭ್ಯ ಒದಗಿಸಲು ಆದ್ಯತೆ ನೀಡುತ್ತಿವೆ.
  • ಭಾರತದಲ್ಲಿ ವಿದೇಶಗಳಿಂದ ಭಾರೀ ಪ್ರಮಾಣದ ಹೂಡಿಕೆ ಆಗಲಿದೆ. ಕೊರೊನಾ ಸಂದರ್ಭ ಇದಕ್ಕೆ ಸ್ವಲ್ಪ ತೊಂದರೆ ಯಾಯಿತು. ಚುನಾಯಿತ ಮತ್ತು ಸ್ಥಿರ ಸರಕಾರವಿರುವುದು ಇದಕ್ಕೆ ಪೂರಕವಾಗಿದೆ. ಸೇನಾಡಳಿತ, ನಿರಂಕುಶ ಪ್ರಭುತ್ವಕ್ಕಿಂತ ವಿಳಂಬವೆಂಬ ಕಾನೂನು ಕಟ್ಟಳೆಗಳು ಹಲವು ಪಟ್ಟು ಉತ್ತಮ.
  • ಫೈನಾನ್ಶಿಯಲ್‌ ಇಂಕ್ಲೂಷನ್‌ ಇನ್ನಷ್ಟು ಆಗಬೇಕಿದೆ. ಶೇ. 25ರಷ್ಟಿರುವ ಬ್ಯಾಂಕುಗಳಿರದ ಪ್ರದೇಶದಲ್ಲಿ ಸಣ್ಣ ಹಣಕಾಸು ಬ್ಯಾಂಕ್‌ಗಳು ಸ್ಥಾಪನೆಯಾಗಬೇಕು.
  • ಆರ್‌ಬಿಐ ಮತ್ತು ಸರಕಾರದ ನಡುವೆ ತಿಕ್ಕಾಟವಿದೆ ಎಂಬುದು ಮಾಧ್ಯಮಗಳ ಸೃಷ್ಟಿ.ಆರ್‌ಬಿಐ ಬ್ರಿಟಿಷ್‌ ಸರಕಾರದ ಕಾಲದಲ್ಲಿ ಸ್ಥಾಪನೆಯಾದ ವ್ಯವಸ್ಥೆ. ಆರ್‌ಬಿಐಯ ಉಳಿತಾಯ ಕೊನೆಗೂ ಭಾರತ ಸರಕಾರಕ್ಕೇ ಬರಬೇಕು. ಆರ್‌ಬಿಐ ಭಾರತ ಸರಕಾರದ ಅಧೀನ ಸಂಸ್ಥೆ. ಇಲ್ಲಿ ಸಂಘರ್ಷದ ಪ್ರಶ್ನೆ ಇಲ್ಲ. ಆಡಳಿತ ಯಂತ್ರದ ಬದಲಾವಣೆಗೆ ಪ್ರಯತ್ನಿಸಿದ್ದು, ಹೊಸ ದಿಕ್ಕನ್ನು ಕೊಡಲಾಗುತ್ತಿದೆ.
  • ಮೊರಿಟೋರಿಯಂ ಕುರಿತು ಹೇಳುವು ದಾದರೆ ನಮ್ಮ ದೇಶದಲ್ಲಿ ಜಪಾನ್‌, ಅಮೆರಿಕದಂತೆ ಅಲ್ಲ. ಇಲ್ಲಿನ ಹಣಕಾಸು ಪರಿಸ್ಥಿತಿಯಲ್ಲಿ ಬಂಡವಾಳ ಸಾಕಾಗದು. ಕೊರೊನಾ ಕಾಲ ಹೊರತುಪಡಿಸಿದರೆ ಬಡ್ಡಿಯನ್ನು ಪಡೆಯದೆ ಬ್ಯಾಂಕ್‌ನ್ನು ಹೇಗೆ ನೆಡಸಲಾದೀತು? ಠೇವಣಿದಾರರಿಗೆ ರಕ್ಷಣೆ ಬೇಡವೆ? ರಾಷ್ಟ್ರೀಕೃತ ಬ್ಯಾಂಕುಗಳ ಸಂರಕ್ಷಕನಾಗಿ ಭಾರತ ಸರಕಾರ 70,000 ಕೋ.ರೂ. ನೀಡಿದೆ.
  • ಸಹಕಾರ ಕ್ಷೇತ್ರವೂ ಆರೋಗ್ಯ ಸೇವೆಯನ್ನು ನೀಡಬೇಕು ಎಂಬುದು ಸಹಕಾರ ಭಾರತಿಯ ಆಶಯ. ಸ್ಥಳೀಯ ಷೇರುದಾರರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಸಿಗಬೇಕು. ಸಹಕಾರ ಸಂಸ್ಥೆಗಳು ಆಸ್ಪತ್ರೆಗಳನ್ನು ಕಟ್ಟಬೇಕು. ಆಯುಷ್ಮಾನ್‌ ಭಾರತ್‌ನ ಹೊರೆಯನ್ನು ಕೇವಲ ಖಾಸಗಿ ರಂಗ ಹೊರುತ್ತಿದೆ. ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶನ್‌ ಡಾಕ್ಯುಮೆಂಟ್‌ ರಚಿಸಲಾಗಿದೆ.
  • ಮಲ್ಯ, ನೀರವ್‌ ಮೋದಿಯಂತಹ ಪ್ರಕರಣಗಳ ಕುರಿತು ಹೇಳುವುದಾದರೆ ಆರ್‌ಬಿಐ ಮೇಲ್ವಿಚಾರಣೆಯನ್ನು ಬಲಿಷ್ಠಗೊಳಿಸಲಾಗಿದೆ. ಬ್ಯಾಂಕುಗಳ ಮೈಕ್ರೋ ಮ್ಯಾನೇಜೆ¾ಂಟ್‌ ಆರ್‌ಬಿಐ ಕೆಲಸವಲ್ಲ. ನೀರವ್‌ ಮೋದಿ ಪ್ರಕರಣದಲ್ಲಿ ಆರ್‌ಬಿಐ ನಿವೃತ್ತ ಡೆಪ್ಯುಟಿ ಗವರ್ನರ್‌ರಿಂದ ತನಿಖೆ ನಡೆಸಲಾಯಿತು. ಈ ಸ್ತರದ ಅಧಿಕಾರಿಗಳನ್ನು ತನಿಖೆಗಾಗಿ ಹಿಂದೆ ಎಂದೂ ನೇಮಿಸಿರಲಿಲ್ಲ.
  • ಬ್ಯಾಂಕ್‌ಗಳ ಸಿಇಒ ಅವರಿಗೆ ಸಾಮರ್ಥ್ಯ ಆಧಾರಿತ ವೇತನವನ್ನು ನಿಗದಿಪಡಿಸಲಾಗಿದೆ. ಇದನ್ನು ಕೆಳಹಂತದಲ್ಲಿ ನಿಗದಿಪಡಿಸಬೇಕೆಂಬ ಇರಾದೆ ಇದೆ. ಇನ್ಸೆಂಟಿವ್‌ ಆಧಾರಿತ ವೇತನ ಕ್ರಮದ ಪ್ರಸ್ತಾವಗಳಿವೆ. ಉತ್ತಮ ಕೆಲಸ ಮಾಡಿದವನಿಗೆ ಯೋಗ್ಯ ರೀತಿಯಲ್ಲಿ ಪುರಸ್ಕರಿಸುವುದು ಬೇಡವೆ?

ಟಾಪ್ ನ್ಯೂಸ್

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

Actress kashima is in Nee nange movie

Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

11-2

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9(1

Kundapura: ಟಿಟಿ ರೋಡ್‌ನ‌ಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!

12-udupi

Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ

10-kaup

Kaup: ಬೈಕ್ ಗೆ ಕಾರು ಢಿಕ್ಕಿ; ಸವಾರ ಗಂಭೀರ

1-klr

Koteshwara: ಹುತಾತ್ಮ ಯೋಧ ಅನೂಪ್‌ ಪೂಜಾರಿ ಮನೆಗೆ ಖಾದರ್‌, ಸೊರಕೆ ಭೇಟಿ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9(1

Kundapura: ಟಿಟಿ ರೋಡ್‌ನ‌ಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

12-udupi

Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.