“ಭಾರತೀಯ ಕಲಾಹಿರಿಮೆ ಅವಿಚ್ಛಿನ್ನವಾದುದು’
Team Udayavani, Mar 9, 2017, 3:31 PM IST
ಮಲ್ಪೆ: ಅಭಿವ್ಯಕ್ತಿಯ ವೈಶಿಷ್ಟಗಳಿಸಿದ್ದವರನ್ನು ಸ್ವೀಕಾ ರಾರ್ಹರನ್ನಾಗಿಸುವ ಸತ್ವ ಕಲಾ ಪ್ರಕಾರಗಳಿಗೆ ಇದೆ. ಇದು ಹಳ್ಳಿ, ನಗರವೆನ್ನದೆ ಎಲ್ಲೂ ಸಲ್ಲುತ್ತಿರುವುದು ಸಾಬೀತಾಗಿದೆ ಮತ್ತು ಸ್ವ ಅನುಭವವೂ ಆಗಿದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡಿರುವ ಭಾರತೀಯರ ಸಾಂಸ್ಕೃತಿಕ, ಕಲಾ ಹಿರಿಮೆ ಅವಿಚ್ಛಿನ್ನ ವಾದುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ಹೇಳಿದರು.
ಅವರು ಸೋಮವಾರ ಕನ್ನಡ ಮತ್ತು ಸಂಸ್ಕತಿ ಇಲಾಖೆ ಬೆಂಗಳೂರು, ಉಡುಪಿ ನಗರಸಭೆ, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ ಹಾಗೂ ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ ಇದರ ಸಹಯೋಗದೊಂದಿಗೆ ಸುಮನಸಾ ಕೊಡವೂರು ಇವರ ಅಜ್ಜರಕಾಡು ಭುಜಂಗ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ಆಯೋಜಿಸಿ ರುವ “ರಂಗಹಬ್ಬ-5’ರ 3ನೇ ದಿನದ ಕಾರ್ಯ ಕ್ರಮದಲ್ಲಿ ಮುಖ್ಯ ಆತಿಥಿ ಯಾಗಿ ಭಾಗವಹಿಸಿ ಮಾತನಾಡಿ ಬದಲಾವಣೆಯ ಕಾಲಘಟ್ಟದಲ್ಲಿ, ಬೆಳ ವಣಿಗೆಗಳೊಡನಿರುವ ಉಡುಪಿಯ ಸಾಂಸ್ಕೃತಿಕ ಪರಂಪರೆಯ ಘನತೆಗೆ ಯೋಗ್ಯವಾದ ರೀತಿಯಲ್ಲಿ ರಂಗಹಬ್ಬ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ವಹಿಸಿದ್ದರು. ಅತಿಥಿಗಳಾಗಿ ಬ್ಲಾಸಂ ಆಸ್ಕರ್ ಫೆರ್ನಾಂಡೀಸ್, ರಾಜ್ಯ ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಶಿಕ್ಷಕ ಜಿ.ಪಿ. ಪ್ರಭಾಕರ ತುಮುರಿ, ಬಿಲ್ಲವ ಯುವ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ, ಉದ್ಯಮಿ ಹರೀಶ್ ಜಿ. ಕೋಟ್ಯಾನ್, ಲೋಕನಾಥ್ ಕುಂದರ್, ಕಲಾವಿದ ರಾಮ್ ಶೆಟ್ಟಿ ಹಾರಾಡಿ ಹಾಗೂ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ರಂಗಕಲಾವಿದ ಬಿ.ಕೆ. ಕಾರಂತ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಎಂ.ಎಸ್.ಭಟ್ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಪ್ರಸಾದ್ ಸ್ವಾಗತಿಸಿದರು. ಯೋಗೀಶ್ ಕೊಳಲಗಿರಿ ಪ್ರಸ್ತಾವನೆ ಗೈದರು. ಅಶೋಕ್ ಅಮ್ಮಂಜೆ ವಂದಿಸಿದರು. ಬಳಿಕ ರಸರಂಗ ಕದ್ರಿಕಟ್ಟು ಕೋಟ ಅವರಿಂದ “ಕಲೆಯ ಕೊಲೆ’ ನಾಟಕ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.