ಇಂದ್ರಾಣಿ ನದಿ ತಡೆಗೋಡೆ ಕುಸಿತ
Team Udayavani, Nov 13, 2021, 4:00 AM IST
ಉಡುಪಿ: ನಗರದ ಮಧ್ಯ ಭಾಗದಲ್ಲಿ ಹರಿಯುವ ಇಂದ್ರಾಣಿ ನದಿ ತಡೆಗೋಡೆ ಹಲವೆಡೆ ಕುಸಿದು ಬಿದ್ದಿದ್ದು, ಮುಂದಿನ ದಿನ ಗಳಲ್ಲಿ ಹಲವು ಅವಾಂತರಕ್ಕೆ ಕಾರಣವಾಗಲಿದೆ. ಈಗಾಗಲೆ ಬಹುತೇಕ ಇಂದ್ರಾಣಿ ನದಿ ಕಲುಷಿತಗೊಂಡು ಹರಿಯುತ್ತಿದೆ. ನಗರದ ಹಲವು ಕಟ್ಟಡಗಳಿಂದ ತ್ಯಾಜ್ಯ ನೀರು ಇದರ ಒಡಲಿಗೆ ಸೇರುತ್ತಿದೆ.
ಮಳೆಗಾಲದಲ್ಲಿ ಹೆಚ್ಚುವರಿ ನೀರು ನದಿಗೆ ಸೇರಿ ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ನಗರದ ಅಲ್ಲಲ್ಲಿ ಇಂದ್ರಾಣಿಯ ತಡೆಗೋಡೆ ಕುಸಿಯುತ್ತಿದೆ. ಈ ಹಿಂದೆ ಕಲ್ಲಿನಲ್ಲಿ ಕಟ್ಟಿದ ತಡೆಗೋಡೆ ಕಲ್ಲುಗಳು ಒಂದೊಂದಾಗಿ ಕೆಳಗೆ ಬೀಳುತ್ತಿವೆ ಮತ್ತು ಕೆಲವು ಕಡೆಗಳಲ್ಲಿ ಸಾಕಷ್ಟು ಉದ್ದದ ತಡೆಗೋಡೆಗಳು ಕುಸಿದು ಬಿದ್ದಿವೆ.
ಕಲ್ಸಂಕ ವೃತ್ತ ಬಳಿ ಕೃಷ್ಣಮಠಕ್ಕೆ ಸಾಗುವ ರಸ್ತೆ, ಗುಂಡಿಬೈಲು ಸೇರಿದಂತೆ ಹಲವು ಕಡೆಗಳಲ್ಲಿ ಹಲವು ವರ್ಷಗಳ ಹಿಂದೆ ಕಲ್ಲಿನಿಂದ ಕಟ್ಟಲಾಗಿದ್ದ ಬೃಹತ್ ತಡೆಗೋಡೆಗಳು ಕುಸಿದಿವೆ. ಕುಸಿದ ಅವಶೇಷಗಳು ಅಲ್ಲಲ್ಲಿಯೇ ಸಿಲುಕಿಕೊಂಡಿದ್ದು, ನದಿ ನೀರಿನ ಸರಾಗ ಹರಿಯುವಿಕೆಗೆ ಅಡಚಣೆ ಉಂಟಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ನಿರಂತರ ಜಾಗೃತಿ, ಹೋರಾಟದ ಅನಂತರವೂ ಜನತೆ ಇಂದ್ರಾಣಿ ನದಿಗೆ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಿಲ್ಲ. ಮದ್ಯದ ಬಾಟಲಿಗಳು, ಹಳೆ ಬಟ್ಟೆಗಳ ಗಂಟು, ಉಪಯೋಗಿಸಿದ ಹಳೆಯ ಹಾಸಿಗೆ, ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಇಂದ್ರಾಣಿ ನದಿಯಲ್ಲಿ ಕಾಣ ಸಿಗುತ್ತವೆ. ಇವೆಲ್ಲವೂ ತಡೆಗೋಡೆ ಕುಸಿದ ಸ್ಥಳದಲ್ಲಿ ಸಿಲುಕಿ ತ್ಯಾಜ್ಯ ರಾಶಿ ನಿರ್ಮಾಣಗೊಂಡಿದೆ.
ಅಪಾಯ ಕಟ್ಟಿಟ್ಟ ಬುತ್ತಿ, ಕ್ರಮಕ್ಕೆ ಆಗ್ರಹ :
ಇಂದ್ರಾಣಿ ನದಿ ತಡೆಗೋಡೆ ಕುಸಿದ ಪರಿಣಾಮ ಮಳೆಗಾಲದಲ್ಲಿ ನದಿಪಾತ್ರದ ಜನತೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚೆಗೆ ಸುರಿದ ಮಳೆಗೆ ಮೂರ್ನಾಲ್ಕು ದಿನಗಳ ಕಾಲ ನಗರ ಭಾಗದಲ್ಲಿ ಹರಿಯುವ ಇಂದ್ರಾಣಿ ನದಿ ಉಕ್ಕಿ ಹರಿದಿದೆ. ಈ ವೇಳೆ ತಡೆಗೋಡೆ ಕುಸಿದ ಜಾಗದಲ್ಲಿ ನೀರು ಸರಾಗವಾಗಿ ಹರಿಯದೆ ನದಿಪಾತ್ರದ ಹೊರಗಡೆ ಹರಿದಿದ್ದು, ಮನೆ, ತೋಟಗಳಲ್ಲಿ ಕೃತಕ ನೆರೆ ಉಂಟಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ತುಂಬಿ ಹರಿಯುವಾಗ ತಡೆಗೋಡೆ ಇಲ್ಲದ ಜಾಗದಲ್ಲಿ ಸಾರ್ವಜನಿಕರು ಅರಿವಿಗೆ ಬಾರದೆ ಓಡಾಟ ನಡೆಸಿದಲ್ಲಿ ಜಾರಿ ಬಿದ್ದು ನೀರು ಪಾಲಾಗುವ ಅಪಾಯವಿದೆ.
ಈ ಬಗ್ಗೆ ಕೂಡಲೆ ನಗರಸಭೆ, ಜಿಲ್ಲಾಡಳಿತ ಕ್ರಮ ಕೈಗೊಂಡು ದುರಸ್ತಿ ಕಾಮಗಾರಿ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
15 ಕೋ. ರೂ. ವೆಚ್ಚದಲ್ಲಿ ಕಾಮಗಾರಿ :
ಸಣ್ಣ ನೀರಾವರಿ ಇಲಾಖೆ ವತಿಯಿಂದ ನಗರ ಭಾಗದಲ್ಲಿ ಮಳೆಗಾಲದಲ್ಲಿ ಮನೆಗಳಿಗೆ ಇಂದ್ರಾಣಿ ನದಿ ನೆರೆಯಿಂದ ಸಮಸ್ಯೆಯಾಗದಂತೆ, ಶಿಥಿಲಾವಸ್ಥೆಯಲ್ಲಿದ್ದ ತಡೆಗೋಡೆಗಳನ್ನು ಗುರುತಿಸಿ ತೆರವು ಮಾಡಿ ವ್ಯವಸ್ಥಿತ ತಡೆಗೋಡೆಯನ್ನು 15 ಕೋ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಥಬೀದಿ ಪಾರ್ಕಿಂಗ್, ಕಟ್ಟೆ ಆಚಾರ್ಯ ಮಾರ್ಗ ಸಮೀಪ, ಸಿಟಿ ಬಸ್‌ನಿಲ್ದಾಣ ಹಿಂಬದಿ ಮಠದಬೆಟ್ಟು ಸಮೀಪ ಹರಿಯುವ ಇಂದ್ರಾಣಿ ನದಿಗೆ 1,800 ಮೀ. ಉದ್ದದ ತಡೆಗೋಡೆ ನಿರ್ಮಿಸಲಾಗಿದೆ ಎಂದು ಇಲಾಖೆ ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.
ನಗರ ಭಾಗದಲ್ಲಿ ಹರಿಯುವ ಇಂದ್ರಾಣಿ ನದಿ ತಡೆಗೋಡೆ ನಿರ್ಮಿಸುವ ಕಾರ್ಯ ಸಣ್ಣ ನೀರಾವರಿ ಇಲಾಖೆಯಿಂದ ನಡೆದಿದೆ. ಕೆಲವು ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ನಡೆಯಬೇಕಿದ್ದು, ಇಲಾಖೆ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಲಾಗುವುದು. -ಮೋಹನ್‌ರಾಜ್, ಎಇಇ, ಉಡುಪಿ ನಗರಸಭೆ.
ನಗರದಲ್ಲಿ ಈಗಾಗಲೇ ವ್ಯವಸ್ಥಿತವಾಗಿ 1.8 ಕಿ.ಮೀ. ಉದ್ದದ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ. ಸದ್ಯ ಮಳೆ ಇರುವುದರಿಂದ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಇತರ ಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಪರಿಶೀಲನೆ ನಡೆಸಲಾಗುವುದು, ಹೆಚ್ಚುವರಿ ಕಾಮಗಾರಿಗೆ ಬಜೆಟ್ ಕೊರತೆ ಇದೆ. ಮುಂದಿನ ಹಂತಗಳಲ್ಲಿ ತಡೆಗೋಡೆ ಕುಸಿತ ಸ್ಥಳಗಳನ್ನು ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುತ್ತೇವೆ. -ಹರೀಶ್, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.