ಇಂದ್ರಾಣಿ ನದಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ
36 ಲ.ರೂ. ವೆಚ್ಚದ ಕಾಮಗಾರಿ
Team Udayavani, Jan 25, 2020, 9:00 PM IST
ಉಡುಪಿ: ಉಡುಪಿ ನಗರಸಭೆ ಕಲ್ಸಂಕದ ಮೂಲಕ ಹಾದುಹೋಗುವ ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಪ್ರಾರಂಭವಾಗಿದೆ.
36 ಲ.ರೂ. ಕಾಮಗಾರಿ
ನಗರಸಭೆ ಸುಮಾರು 36 ಲ.ರೂ. ವೆಚ್ಚದಲ್ಲಿ ಕಲ್ಸಂಕ, ಮಠದಬೆಟ್ಟು, ನಿಟ್ಟೂರು ಶಾರದ ಇಂಟರ್ ನ್ಯಾಶನಲ್ ಹೊಟೇಲ್, ಮೂಡುಬೆಟ್ಟು, ಕೊಡವೂರು ಕೊಡಂಕೂರು, ಪುತ್ತೂರು, ಸಾಯಿಬಾಬಾ ಮಂದಿರ ಪ್ರದೇಶದಲ್ಲಿ ಹರಿಯುವ ಇಂದ್ರಾಣಿ ನದಿಯ ಹೂಳೆತ್ತಲಾಗುತ್ತದೆ. ಇದರ ಕಾಮಗಾರಿಯನ್ನು ಪುರುಷೋತ್ತಮ ಶೆಣೈ ಅವರು ವಹಿಸಿಕೊಂಡಿದ್ದು, ಎರಡು ಹಿಟಾಚಿಗಳ ಮೂಲಕ ನದಿಯ ಹೂಳೆತ್ತಲಾಗುತ್ತಿದೆ.
ನದಿಯಲ್ಲಿ ಪ್ಲಾಸ್ಟಿಕ್ ರಾಶಿ
ಪ್ರಸ್ತುತ ಇಂದ್ರಾಣಿ ನದಿಯಲ್ಲಿ ತ್ಯಾಜ್ಯಗಳ ರಾಶಿ ತುಂಬಿಕೊಂಡಿದೆ. ಸಾರ್ವಜನಿಕರು ತ್ಯಾಜ್ಯವನ್ನು ಮಳೆ ನೀರು ಹರಿಯುವ ಚರಂಡಿ, ನದಿಗೆಸೆವ ಸುಲಭ ವಿಲೇವಾರಿ ದಾರಿಯನ್ನು ಕಂಡಿದ್ದಾರೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಾಟಲಿ, ಚೀಲ, ಗಿಡಗಂಟಿ, ಹೂವಿನ ಗಿಡ, ಚಾಪೆ, ಶೂ, ಚಪ್ಪಲಿ, ಸೀಯಾಳದ ಇಡಿ ಚಿಪ್ಪು, ಟಯರ್‌ಗಳು ನದಿಯಲ್ಲಿ ಕಾಣಸಿಗುತ್ತಿವೆ. ಕಳೆದ ಬಾರಿ ನದಿ ಹೂಳೆತ್ತದ ಪರಿಣಾಮ ನಗರಸಭೆ ವ್ಯಾಪ್ತಿಯ ಅನೇಕ ವಾರ್ಡ್‌ಗಳ ಮನೆಗಳು ಜಲಾವೃತವಾಗಿದ್ದವು.
ಹೂಳು ತುಂಬಿ ನೆರೆ
ಕಿನ್ನಿಮೂಲ್ಕಿ, ಕಲ್ಸಂಕ, ಮೂಡುಬೆಟ್ಟು, ಮಠದಬೆಟ್ಟು, ಕೊಡವೂರು, ಬೈಲಕೆರೆ, ಗುಂಡಿಬೈಲು ಸಹಿತ ಹಲವೆಡೆ ಮಳೆಗಾಲದಲ್ಲಿ ತೋಡು ಉಕ್ಕಿ ಹರಿಯುತ್ತದೆ. ಹೂಳು ತುಂಬಿಯೂ ಸಮಸ್ಯೆ ಹೆಚ್ಚಿದೆ. ಇದರಿಂದಾಗಿ ತಗ್ಗು ಪ್ರದೇಶದಲ್ಲಿ ಕಟ್ಟಿದ ಮನೆಗಳಿಗೆ ನೀರು ನುಗ್ಗುತ್ತದೆ.
ಒಂದು ವರ್ಷದ ಬಳಿಕ ಕಾಮಗಾರಿಗೆ ಚಾಲನೆ
ಹಿಂದೆ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಇಂದ್ರಾಣಿ ಹೊಳೆತ್ತುವ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬರೋಬ್ಬರಿ ಒಂದು ವರ್ಷದ ಬಳಿಕ ಕಾಮಗಾರಿಗೆ ಟೆಂಡರ್ ಆಗಿ ಚಾಲನೆ ದೊರಕಿದೆ.
ಕ್ರಮ ಕೈಗೊಂಡಿಲ್ಲ
ಇಂದ್ರಾಣಿ ನದಿಯ ಹೂಳೆತ್ತಿದರೂ ಒಳಚರಂಡಿ ಪಂಪಿಂಗ್ ತೊಂದರೆಯಿಂದಾಗಿ ತ್ಯಾಜ್ಯ, ಕಶ್ಮಲ ಉಕ್ಕಿ ಮಳೆ ನೀರು ಹರಿವ ತೋಡಿನಲ್ಲೇ ಹರಿಯುತ್ತಿದ್ದು ಪರಿಸರ ಮಾಲಿನ್ಯ ನಿಯಂತ್ರಣ ಕಾಯಿದೆಯನ್ನು ಉಲ್ಲಂ ಸುತ್ತಿದೆ. ನಗರ ಸಭೆಯ ಸಂಬಂಧಿತರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ..
– ವಿಜಯ ಕುಮಾರ್, ಸ್ಥಳೀಯರು
ಮೂರು ತಿಂಗಳು ಕಾಮಗಾರಿ
ನಗರಸಭೆ ನೇತೃತ್ವದಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಸುಮಾರು ಮೂರು ತಿಂಗಳ ಕಾಲ ನಿರಂತರವಾಗಿ ಕಾಮ ಗಾರಿ ನಡೆಯಲಿದೆ.
– ಸಂತೋಷ್ ಜತ್ತನ್, ನಗರಸಭೆ ಸದಸ್ಯ, ನಿಟ್ಟೂರು ವಾರ್ಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.