Innanje: ಆರೈಕೆಯಲ್ಲಿದ್ದ ಮಹಿಳೆ ಸಾವು
Team Udayavani, Jan 15, 2025, 10:52 PM IST
ಕಾಪು: ಶಂಕರಪುರ ಇನ್ನಂಜೆ ವಿಶ್ವಾಸದ ಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಆಶ್ರಯದಲ್ಲಿ ಚಿಕಿತ್ಸೆಯಲ್ಲಿದ್ದ ಪರಿಮಳಾ (65) ಅವರು ಅನಾರೋಗ್ಯದಿಂದಾಗಿ ಜ. 15ರಂದು ಮೃತಪಟ್ಟಿದ್ದಾರೆ.
ಸುಮಾರು 6 ವರ್ಷಗಳ ಹಿಂದೆ ಕೆದೂರಿನ ಸ್ಫೂರ್ತಿಧಾಮ ಸಂಸ್ಥೆಯಲ್ಲಿ ಆರೈಕೆಯಲ್ಲಿದ್ದ ವಯೋವೃದ್ಧೆ ಪರಿಮಳಾ ಅವರನ್ನು ಹಿರಿಯ ನಾಗರಿಕ ಇಲಾಖೆಯವರು ವಿಶ್ವಾಸದ ಮನೆಗೆ ಸೇರಿಸಿದ್ದರು. ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದು, ಬುಧವಾರ ಮಧ್ಯಾಹ್ನ ಆಶ್ರಮದಲ್ಲಿ ತೀವ್ರ ಅಸ್ವಸ್ಥರಾಗಿದ್ದು, ಸಂಸ್ಥೆಯ ವೈದ್ಯರು ಬಂದು ಪರೀಕ್ಷಿಸಿದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.