ಮೂಡುತೋನ್ಸೆ: ಇಮ್ಮಡಿ ದೇವರಾಯನ ಶಿಲಾಶಾಸನ ಪತ್ತೆ
Team Udayavani, May 8, 2022, 1:05 PM IST
ಕಾಪು: ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ಕೆಮ್ಮಣ್ಣು – ನಿಡಂಬಳ್ಳಿಯಲ್ಲಿ ಬರುವ ಮುದಲಕಟ್ಟ ಪ್ರದೇಶದ ಗುಂಡು ಶೆಟ್ಟಿಯವರ ಜಾಗದಲ್ಲಿ ವಿಜಯನಗರ ದೊರೆ ಇಮ್ಮಡಿ ದೇವರಾಯನ ಶಾಸನವು ಪತ್ತೆಯಾಗಿದೆ.
ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ ಇದರ ಅಧ್ಯಯನ ನಿರ್ದೇಶಕ ಎಸ್. ಎ. ಕೃಷ್ಣಯ್ಯ ಮತ್ತು ಯು. ಕಮಲಾ ಬಾಯಿ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಕೆ. ಶ್ರೀಧರ ಭಟ್ ಇವರ ನೇತ್ರತ್ವದಲ್ಲಿ ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ನಡೆಸಿರುತ್ತಾರೆ.
ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು ಕನ್ನಡ ಲಿಪಿಯ 24 ಸಾಲುಗಳನ್ನು ಒಳಗೊಂಡಿದ್ದು, 3 ಅಡಿ ಎತ್ತರ ಮತ್ತು 2 ಅಡಿ ಅಗಲವಿರುವ ಶಾಸನದ ಬಹು ಭಾಗವು ಸಂಪೂರ್ಣವಾಗಿ ಸವೆದು ಹೋಗಿದೆ. ಶ್ರೀ ಗಣಾಧಿಪತೆಯೇ ನಮಃ ಎಂಬ ಶ್ಲೋಕದಿಂದ ಪ್ರಾರಂಭವಾಗುವ ಈ ಶಾಸನವು ಶಕ ವರುಷ 1353 ರ (ಕ್ರಿ.ಶ 1431) ವಿರೋಧಿಕೃತ ಸಂವತ್ಸರಕ್ಕೆ ಸೇರಿದೆ.
ಬಾರಕೂರು ನಾಡಿನಲ್ಲಿ ಇಮ್ಮಡಿ ದೇವರಾಯನ ನಿರೂಪದಿಂದ ಮಹಾ ಪ್ರಧಾನ ಚಂಡರಸ ಒಡೆಯನು ಆಳ್ವಿಕೆ ನಡೆಸುತ್ತಿದ್ದ ಕಾಲಘಟ್ಟದಲ್ಲಿ ದೇವರ ಪರ್ವದ ಮೂರು ದಿನದ ಹಬ್ಬಕ್ಕೆ ದಾನ ನೀಡಿರುವುದು ಶಾಸನದಿಂದ ತಿಳಿದು ಬರುತ್ತದೆ. ಈ ದಾನಕ್ಕೆ ಮಂಜಣ್ಣ ಸೆಟ್ಟಿ ಹಾಗೂ ಆತನ ಅಳಿಯ ಕೋಮ ಸೆಟ್ಟಿಯ ಒಪ್ಪ, ಬ್ರಹ್ಮರ ಊರು ಏಳು ಮಂದಿಯ ಒಪ್ಪ, ಕಂಚಿಯ ಕಬ್ಬೆಯ ಹೊಣೆಯನ್ನು ಉಲ್ಲೇಖೀಸುತ್ತದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು. ಈ ಶಾಸನವು ತ್ರುಟಿತಗೊಂಡಿರುವುದರಿಂದ ಯಾವ ದೇವರ, ಯಾವ ಪರ್ವದ ಹಬ್ಬಕ್ಕೆ ದಾನ ನೀಡಿರುವುದು ಎಂಬುವುದು ಸ್ಪಷ್ಟವಾಗಿ ತಿಳಿದು ಬರುವುದಿಲ್ಲ. ಕ್ಷೇತ್ರ ಕಾರ್ಯ ಶೋಧನೆಯ ವೇಳೆ ಆನಂದ ಬಂಗೇರ ಹಾಗೂ ಸ್ಥಳೀಯರು ಸಹಕಾರ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ
Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ
Udupi: ಗೀತಾರ್ಥ ಚಿಂತನೆ-83: ಅಪೇಕ್ಷಿತ-ಅನಪೇಕ್ಷಿತ ವಂಶವಾಹಿಗಳು
Congress Govt.,: ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.