ಹಿಂದೂಗಳಿಗೆ ಅಭದ್ರತೆ: ಮಟ್ಟಾರು
Team Udayavani, Jan 6, 2018, 8:57 AM IST
ಉಡುಪಿ: ಹಿಂದೂಗಳಿಗೆ ಕರ್ನಾಟಕದಲ್ಲಿ ಅಭದ್ರತೆ ಕಾಡುತ್ತಿದೆ. ಉಡುಪಿ, ದ.ಕ., ಉ.ಕ. ಜಿಲ್ಲೆಗಳಲ್ಲಿ ಕ್ಷೋಭೆ ಆವರಿಸಿದೆ. ಲವ್ ಜೆಹಾದ್ ಮೂಲಕ ಹಿಂದೂ ಯುವತಿ ಯ ರನ್ನೂ ದಾರಿ ತಪ್ಪಿಸುವ ಕಾರ್ಯವಾಗುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಂಗಳೂರಿನಲ್ಲಿ ಶಾಸಕ ಮೊದಿನ್ ಬಾವಾ ಅವರು ಆರೋಪಿಯ ಭಾವ ಕಾಪು ಬಿಜೆಪಿ ಕಾರ್ಯಕರ್ತನೆಂದು ಹೇಳಿದ್ದಾರೆ. ಇದು ಶುದ್ಧ ಸುಳ್ಳು. ಆರೋಪ ಕೇಳಿಬಂದಾಗ ಸ್ವತಃ ಪರಿಶೀಲಿಸಿದಾಗ ಕಾಪುವಿನಲ್ಲಿ ಅಂತಹ ಕಾರ್ಯ ಕರ್ತನೇ ಬಿಜೆಪಿಯಲ್ಲಿ ಇಲ್ಲವೆನ್ನುವ ಸತ್ಯ ಗೊತ್ತಾಗಿದೆ. ಬಾವಾ ಉದ್ದೇಶಪೂರ್ವಕವಾಗಿಯೇ ಸುಳ್ಳು ಹೇಳಿದ್ದಾರೆ ಎಂದು ಮಟ್ಟಾರು ಹೇಳಿದರು.
ಸಾಧನಾ ಸಮಾವೇಶ ಬಹಿಷ್ಕಾರ
ಜಿಲ್ಲೆಯಲ್ಲಿ ಸಿಎಂ ಉಪಸ್ಥಿತಿ ಯಲ್ಲಿ ಕಾಂಗ್ರೆಸ್ ನಡೆಸುವ ಸಾಧನಾ ಸಮಾವೇಶ ದಲ್ಲಿ ಬಿಜೆಪಿಯ ಜನಪ್ರತಿನಿಧಿಗಳು ವೇದಿಕೆಯೇರದೆ ಬಹಿಷ್ಕರಿಸುವಂತೆ ಎಲ್ಲರಿಗೂ ಸೂಚನೆ ರವಾನಿಸಲಾಗಿದೆ ಎಂದು ರತ್ನಾಕರ ಹೆಗ್ಡೆ ಹೇಳಿದರು. ಸಾಧನಾ ಸಮಾವೇಶದ ಹೆಸರಿನಲ್ಲಿ ಅಧಿಕಾರಿಗಳು, ಯೋಜನೆಗಳ ಫಲಾನುಭವಿಗಳನ್ನು ಬಳಸಿಕೊಂಡು ಸರಕಾರಿ ಪ್ರಾಯೋಜಿತ ಕಾಂಗ್ರೆಸ್ ಸಮಾವೇಶ ನಡೆಸಲು ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮುತು ವರ್ಜಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಕಾಂಗ್ರೆಸ್ ದುರುಪಯೋಗ ಮಾಡಿಕೊಳ್ಳುತ್ತಲಿದೆ. ಕಾರ್ಯ ಕ್ರಮದಲ್ಲಿ ರಾಜ್ಯದ ವಿಪಕ್ಷ, ಬಿಜೆಪಿ ನಾಯಕರು, ದೇಶದ ಪ್ರಧಾನಿಗಳ ವಿರುದ್ಧ ಸಿಎಂ ಮಾತನಾಡಿದರೆ ಬಿಜೆಪಿ ಕಾರ್ಯಕರ್ತರು ಪರವಾದ ಘೋಷಣೆ ಹಾಕಲಿದ್ದಾರೆ ಎಂದರು. ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ರಘುಪತಿ ಭಟ್, ನಾಯರಾದ ದಿನಕರ ಬಾಬು, ಕಟಪಾಡಿ ಶಂಕರ ಪೂಜಾರಿ, ಕುತ್ಯಾರು ನವೀನ್ ಶೆಟ್ಟಿ, ಶ್ರೀಶ ನಾಯಕ್ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಕೆಎಫ್ಡಿ, ಎಸ್‌ಡಿಪಿಐ ಕಾರ್ಯಕರ್ತರ ಮೇಲಿದ್ದ ಕೇಸುಗಳನ್ನು ಹಿಂಪಡೆಯಲಾಗಿತ್ತು. ಅಂದಿನಿಂದ ರಾಜ್ಯದಲ್ಲಿ 23 ಹಿಂದೂ ಕಾರ್ಯಕರ್ತರ ಕೊಲೆ ಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗುವ ಸ್ಥಳ ಗಳಲ್ಲಿಯೇ ಹಿಂದೂ ಕಾರ್ಯ ಕರ್ತರ ಕೊಲೆ ನಡೆಯುತ್ತಿದೆ.
ಮಟ್ಟಾರು ರತ್ನಾಕರ ಹೆಗ್ಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.