“ವೈಜ್ಞಾನಿಕವಾಗಿ ಚಿಂತಿಸುವ ಬದಲು ಅವೈಜ್ಞಾನಿಕವಾಗಿ ಚಿಂತನೆ’
Team Udayavani, Apr 18, 2017, 3:47 PM IST
ಕುಂದಾಪುರ: ದೇಶದ ಚುಕ್ಕಾಣಿ ಹಿಡಿದವರು ಸಂವಿಧಾನದ ಆಶಯಗಳನ್ನೇ ಗಾಳಿಗೆ ತೂರಿ ಪ್ರಜಾ ಪ್ರಭುತ್ವ ನಾಶ ಮಾಡುವ ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ. ಯುವಜನರಿಗೆ ಉದ್ಯೋಗ ಕೊಡುವ ಬದಲು ಭಾವನಾತ್ಮಕ ವಿಚಾರಗಳಿಗೆ ಬಲಿಬೀಳುವಂತೆ ಮಾಡಿ ಸಂಘ ಪರಿವಾರ ತನ್ನ ರಾಜಕೀಯ ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಡಿವೈಎಫ್‌ಐ ಮುಖಂಡ ಸುರೇಶ್ ಕಲ್ಲಾಗರ ಹೇಳಿದರು.
ಅವರು ಡಿವೈಎಫ್ ಐ ಬಿ.ಸಿ ರಸ್ತೆ ಬೆಟ್ಟಾಗರದ ಘಟಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗ ಎಂಬ ಘೋಷಣೆಯಲ್ಲಿ ಡಿವೈಎಫ್ ಐ ಹುಟ್ಟಿಕೊಂಡಿತು. ಜಾತಿ, ಧರ್ಮ ಭೇಧವಿಲ್ಲದೆ ಯುವಜನರ ಸರ್ವತೋಮುಖ ಅಭಿವೃದ್ಧಿಗಾಗಿ ಇಂದಿನ ವರೆಗೂ ಹೋರಾಟ ನಡೆಸಿಕೊಂಡು ಬಂದಿರುವ ಏಕೈಕ ಸಂಘಟನೆಯಾಗಿದೆ.ಅಲ್ಲದೇ ದೇಶದಾದ್ಯಂತ ಘಟಕಗಳನ್ನು ಹೊಂದಿದ್ದು ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಪರಿಹಾರಕ್ಕಾಗಿ ಹಲವಾರು ಹೋರಾಟಗಳನ್ನು ನಡೆಸಿದ ಇತಿಹಾಸ ಡಿವೈಎಫ್ ಐ ನದ್ದಾಗಿದೆ. ಆಳುವ ಪಕ್ಷಗಳೇ ಇಂದು ಜಾತಿ,ಮತ,ಧರ್ಮಗಳ ಹೆಸರಿನಲ್ಲಿ ದಬ್ಟಾಳಿಕೆಗಳನ್ನು ನಡೆಸಿ ಜನ ಸಾಮಾನ್ಯರನ್ನು ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸದಂತೆ ಮಾಡ ಲಾಗುತ್ತಿದೆ. ವೈಜ್ಞಾನಿಕವಾಗಿ ಚಿಂತಿಸುವ ಬದಲು ಅವೈಜ್ಞಾನಿಕವಾದ ದಾರಿ ತೋರಿಸಲಾಗುತ್ತಿದೆ. ದೇಶವನ್ನು ಮೂಲವಾದದ ಆಧಾರದ ಮೇಲೆ ಕಟ್ಟುವ ಪ್ರಯತ್ನ ಸಾಗುತ್ತಿದೆ. ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೇಡ್ಕರ್ ಅವರನ್ನು ಹೊಗಳುತ್ತಲೇ ಅವರ ವಿಚಾರಧಾರೆಗಳಿಗೆ, ಸಂವಿಧಾನಕ್ಕೆ ಅಪಚಾರ ಎಸಗಲಾಗುತ್ತಿದೆ. ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಮಾತನಾಡಿ, ಜಾತಿ ಮತಗಳ ಹೆಸರಿನಲ್ಲಿ ಕಾರ್ಯಾ ಚರಿಸುತ್ತಿರುವ ಸಂಘಟನೆಗಳು ಯುವ ಜನರನ್ನು ದಾರಿತಪ್ಪಿಸುತ್ತಿದೆ. ಕಳೆದ ಮೂರುವರೆ ದಶಕಗಳಿಂದ ಯುವಜನರ ಸಮಸ್ಯೆಗಳ ವಿರುದ್ಧ ಸಂಸ್ಥೆ ನಿರಂತರ ಹೋರಾಟ ನಡೆಸುತ್ತಿದೆ. ಬಿ.ಸಿ. ರಸ್ತೆ ಘಟಕವು ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಶ್ರಮದಾನ, ಕ್ರೀಡಾಕೂಟ ನಡೆಸಿದೆ ಎಂದರು.
ಘಟಕ ಕಾರ್ಯದರ್ಶಿ ರವಿ ವಿ. ಎಂ. ವಾರ್ಷಿಕ ವರದಿ ಮಂಡಿಸಿದರು. ನೂತನ ಅಧ್ಯಕ್ಷರಾಗಿ ಮಂಜುನಾಥ್, ಕಾರ್ಯದರ್ಶಿಯಾಗಿ ರವಿ ಎಂ. ರೊಳಗೊಂಡ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.