ಮಳೆ ಕೊಯ್ಲು ಅಳವಡಿಸಿ ವರ್ಷಪೂರ್ತಿ ಸಮಗ್ರ ಕೃಷಿ

ಜಲ ಸಂಪನ್ಮೂಲ: ಮನೆ ಮನೆಗೆ ಮಳೆಕೊಯ್ಲು ಉದಯವಾಣಿ ಅಭಿಯಾನ

Team Udayavani, Jul 30, 2019, 5:15 AM IST

4136IMG-20190729-WA0009

ಮಳೆ ನೀರು ಸಂಗ್ರಹಣಾ ತೊಟ್ಟಿ (ಕೆರೆ).

ಉಡುಪಿ: ಕುಡಿಯುವ ನೀರಿನ ಸಮಸ್ಯೆಗೆ ಈ ಬಾರಿ ಇಡೀ ಜಿಲ್ಲೆ ತತ್ತರಿಸಿದೆ. ಉದಯವಾಣಿಯ ಜಲಸಾಕ್ಷರ ಅಭಿಯಾನದಿಂದ ಪ್ರೇರಣೆಗೊಂಡು ಮಳೆಕೊಯ್ಲುಗೆ ಹಲವು ಮಂದಿ ಮನಸ್ಸು ಮಾಡುತ್ತಿ ದ್ದಾರೆ. ಇಂಥವರಿಗೆ ಪ್ರೇರಣೆ ಯೆಂದರೆ ಈಗಾಗಲೇ ಮಳೆಕೊಯ್ಲುವಿನಿಂದ ಪ್ರಯೋಜನ ಪಡೆಯುತ್ತಿರುವ ಉಡುಪಿ ತಾಲೂಕಿನ ಅಲೆವೂರಿನ ಪ್ರಗತಿಪರ ಕೃಷಿಕ ಗೋಪಾಲ ಕೆ.ನಾಯಕ್‌. ಸಂಗ್ರಹಿಸಿದ ಮಳೆನೀರಿನಲ್ಲಿ ವರ್ಷಪೂರ್ತಿ ಬೆಳೆ ತೆಗೆಯು ವುದೇ ಇವರ ಸಾಧನೆ.

ಸುಮಾರು 3ಎಕ್ರೆಯಲ್ಲಿ 29 ವರ್ಷದಿಂದ ಸಮಗ್ರ ಕೃಷಿ ಪದ್ಧತಿ ಆಳವಡಿಸಿದ್ದಾರೆ. ಬೇಸಗೆಯಲ್ಲಿ ರೈತರು ಬೆಳೆ ತೆಗೆಯಲು ಹಿಂದೇಟು ಹಾಕುತ್ತಾರೆ. ಆದರೆ ಇವರು ವರ್ಷ ಪೂರ್ತಿ ಮಾವು, ತೆಂಗು, ಅಡಿಕೆ, ತರಕಾರಿ, ಭತ್ತ, ತರಕಾರಿಗಳನ್ನು ಬೆಳೆಸುತ್ತಾರೆ. ಬೇಸಗೆಯಲ್ಲಿ ಇಡೀ ನಗರ ನೀರಿಗಾಗಿ ಪರದಾಡಿದರೂ ಇವರಿಗೆ ಅದು ತಟ್ಟದು. ಇದಕ್ಕೆ ಕಾರಣ ಮಳೆ ನೀರು ಸಂಗ್ರಹ ತೊಟ್ಟಿ.

ಮಳೆ ನೀರು ಸಂಗ್ರಹ ತೊಟ್ಟಿ
ಗೋಪಾಲ ಅವರು ತಮ್ಮ ತಂದೆ ಮರಣ ಬಳಿಕ ತಮ್ಮ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯ ತೊಡಗಿದರು. 1990ರಲ್ಲಿ ಸಣ್ಣ ಕೆರೆಗಳ ರೂಪದಲ್ಲಿ ಮಳೆ ನೀರಿನ ಸಂಗ್ರಹ ತೊಟ್ಟಿ ನಿರ್ಮಿಸಿದರು. 2016 ರಲ್ಲಿ ತೋಟಗಾರಿಕಾ ಇಲಾಖೆಯ ಸಹಾಯದಿಂದ ಸುಮಾರು 60 ಅಡಿ ಅಗಲ ಹಾಗೂ 15 ಅಡಿ ಆಳದ ನೀರು ಸಂಗ್ರಹಣ ತೊಟ್ಟಿ (ಕೆರೆ) ಕಟ್ಟಿದರು. ವಿವಿಧ ಪ್ರದೇಶದಿಂದ ಹರಿದು ಬಂದ ಸುಮಾರು 16 ಲಕ್ಷ ಲೀ. ನೀರು ಇದರಲ್ಲಿ ಸಂಗ್ರಹವಾಗುತ್ತದೆ.

ನೀರಿನ ಮಟ್ಟದ ಹೆಚ್ಚಳ
ಈ ತೊಟ್ಟಿಯ ಸುಮಾರು 20 ಅಡಿ ದೂರದಲ್ಲಿ 35 ಅಡಿ ಆಳದ ಬಾವಿಯಿದೆ. ಅದಕ್ಕೂ ಮಳೆ ನೀರು ಹಾಯಿಸುತ್ತಾರೆ. ತೊಟ್ಟಿಯಲ್ಲಿ ಸಂಗ್ರಹಿಸಿದ ನೀರನ್ನು ಡಿಸೆಂಬರ್‌ -ಜನವರಿವರೆಗೆ ಕೃಷಿಗೆ ಬಳಸಲಾಗುತ್ತಿದೆ. ಫೆಬ್ರವರಿ ಅನಂತರ ಬಾವಿಯ ನೀರು ಬಳಸುತ್ತಾರೆ.

ತೊಟ್ಟಿಯಲ್ಲಿ ನೀರು ಸಂಗ್ರಹವಾಗಿ ಭೂಮಿಯಲ್ಲಿ ಇಂಗುವ ಕಾರಣ ಕಡು ಬೇಸಗೆಯಲ್ಲಿ ಸಹ ಗೋಪಾಲ ನಾಯಕ್‌ ಅವರ ಬಾವಿಯಿಂದ ಸುಮಾರು 3 ಎಚ್‌ಪಿ ಪಂಪಿನಲ್ಲಿ ಕೃಷಿಗೆ ಅರ್ಧಗಂಟೆ ನೀರು ತೆಗೆಯಬಹುದು. ಈ ಪರಿಸರಕ್ಕೆ ಹೊಂದಿಕೊಂಡ ಬಾವಿಗಳ ಅಂತರ್ಜಲ ಮಟ್ಟ ಸಹ ಏರಿಕೆಯಾಗಿದೆ.

ಪ್ರೇರಣೆಯಾಗಲಿ
ಪ್ರತಿಯೊಬ್ಬರೂ ಸಣ್ಣಮಟ್ಟದಲ್ಲಿ ಯಾದರೂ ಮಳೆ ನೀರು ಭೂಮಿಯಲ್ಲಿ ಇಂಗಿಸುವ ಮೂಲಕ ಜಲಸಂಪನ್ಮೂಲವನ್ನು ಸಂರಕ್ಷಿಸಬೇಕು. ಉದಯವಾಣಿ ಅಭಿಯಾನದಿಂದ ಪ್ರೇರಣೆಗೊಂಡು ಇನ್ನಷ್ಟು ಜನರು ಮಳೆ ಕೊಯ್ಲು ಪದ್ಧತಿ ಆಳವಡಿಸಲಿ.
ಗೋಪಾಲ್‌ ನಾಯಕ್‌,
ಪ್ರಗತಿ ಪರ ಕೃಷಿಕ, ಅಲೆವೂರು

ನೀವೂ ಅಳವಡಿಸಿ,
ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ ನಲ್ಲಿ ಕಳಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-deeee

Udupi; ಮಕ್ಕಳ ರಕ್ಷಣೆ ಕಾಯ್ದೆ ಅನುಷ್ಠಾನ ಅಗತ್ಯ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.