ಚಂದನವನ/ಗಂಧದ ಕುಡಿ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗರಿ
Team Udayavani, Nov 27, 2018, 10:23 AM IST
ಕಟಪಾಡಿ: ಮಂಗಳೂರಿನ ಇನ್ವೆಂಜರ್ ಟೆಕ್ನಾಲಜೀಸ್ ಬ್ಯಾನರ್‌ನಲ್ಲಿ ಕೆ. ಸತ್ಯೇಂದ್ರ ಪೈ ಹಾಗೂ ಕೆ. ಮೋಹನ್ ಪೈ ನಿರ್ಮಿಸಿರುವ, ಇಮ್ಯಾಜಿನೇಶನ್ ಮೂವೀಸ್‌ನ ಸಂತೋಷ್ ಶೆಟ್ಟಿ ಕಟೀಲು ನಿರ್ದೇಶನದ ಚಂದನವನ/ ಗಂಧದ ಕುಡಿ ಚಲನಚಿತ್ರವು ಮುಂಬಯಿಯಲ್ಲಿ ನ. 23ರಿಂದ 25ರ ತನಕ ನಡೆದ ಮೂನ್‌ವೈಟ್ ಚಲನಚಿತ್ರೋತ್ಸವದಲ್ಲಿ 4 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ವಿವಿಧ ರಾಜ್ಯಗಳ ಹಾಗೂ ವಿದೇಶಗಳ ಸಾವಿರಕ್ಕೂ ಅಧಿಕ ಚಲನಚಿತ್ರಗಳು ಭಾಗವಹಿಸಿದ್ದು ಸುಮಾರು 50 ವಿಭಾಗಗಳಲ್ಲಿ ನೀಡಲಾಗಿದ್ದ ವಿವಿಧ ಪ್ರಶಸ್ತಿಗಳಡಿ ಗಂಧದ ಕುಡಿ/ ಚಂದನವನ ಚಲನಚಿತ್ರವು ಅತ್ಯುತ್ತಮ ಚಲನಚಿತ್ರ, ಸಂತೋಷ್ ಕುಮಾರ್ ಕಟೀಲು ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ರಮೇಶ್ ಭಟ್‌ಗೆ
ಅತ್ಯುತ್ತಮ ನಟ, ಕಿರುತೆರೆ ನಟಿ ಜ್ಯೋತಿ ರೈಗೆ ಅತ್ಯುತ್ತಮ ನಟಿ, ಬಾಲನಟರಾದ ಬೇಬಿ ನಿಧಿ ಸಂಜೀವ ಶೆಟ್ಟಿ, ಬೇಬಿ ಕೀಷಾ, ಮಾ| ವಿನೀಶ್, ಮಾ| ಶ್ರೀಶ ಶೆಟ್ಟಿ, ಮಾ| ಶ್ರೇಯಸ್ ಶೆಟ್ಟಿ, ಬೇಬಿ ಆ್ಯಶ್ಲಿನ್ ಡಿ’ಸೋಜಾ, ಬೇಬಿ ಪ್ರಣತಿ ಅವರಿಗೆ ಮೂನ್‌ವೈಟ್ ಫಿಲಂಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಚಿತ್ರದ ನಿರ್ಮಾಪಕ ಕೆ. ಸತ್ಯೇಂದ್ರ ಪೈ, ಸಹನಿರ್ದೇಶಕಿ ಪ್ರೀತಾ ಮಿನೇಜಸ್, ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್ ಭಟ್, ಬಾಲನಟಿ ನಿಧಿ ಸಂಜೀವ ಶೆಟ್ಟಿ ಪಾಲ್ಗೊಂಡು ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಅಮೆರಿಕದಲ್ಲೂ ಪ್ರಶಸ್ತಿ
ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಅಂ.ರಾ. ಮಕ್ಕಳ ಚಲನಚಿತ್ರೋತ್ಸವದಲ್ಲಿ ಅತ್ಯು ತ್ತಮ ಕೌಟುಂಬಿಕ ಚಿತ್ರ, ಕೋಲ್ಕತಾ ದಲ್ಲಿ ನಡೆದ ಕೆಸಿಎ ಅಂ.ರಾ. ಚಲನಚಿತ್ರೋತ್ಸವ ದಲ್ಲಿ ಅತ್ಯುತ್ತಮ ಚಿತ್ರ ಹಾಗೂ ಹಿನ್ನೆಲೆ ಸಂಗೀತಕ್ಕಾಗಿ ಪ್ರಸಾದ್ ಕೆ. ಶೆಟ್ಟಿ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಗಳನ್ನು ಪಡೆದಿತ್ತು.
ಗಂಧದ ಕುಡಿ / ಚಂದನವನ ಚಿತ್ರವು ಮನೋರಂಜನೆ ಜತೆಗೆ ಸಂಪೂರ್ಣ ಹಾಸ್ಯ ಹಾಗೂ ವಿಭಿನ್ನ ಪಾತ್ರಗಳೊಂದಿಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿಗೆ ಮಾಡಿದೆ. ಚಿತ್ರವು ಶೀಘ್ರದಲ್ಲಿ ತೆರೆಕಾಣಲಿದೆ.
ಕೆ. ಸತ್ಯೇಂದ್ರ ಪೈ, ನಿರ್ಮಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.