ಶಿರ್ವ ಡಾನ್ ಬೊಸ್ಕೊ ಆಂ.ಮಾ. ಶಾಲೆ : ಅಂತರಾಷ್ಟ್ರೀಯ ಯೋಗ ದಿನಾಚರಣೆ
Team Udayavani, Jun 21, 2021, 1:59 PM IST
ಶಿರ್ವ: ಇಲ್ಲಿನ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗಕ್ಷೇಮಕ್ಕಾಗಿ ಯೋಗ ಘೋಷ ವಾಕ್ಯದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗ ಮಾಡುವ ಮೂಲಕ ಜೂ. 21ರಂದು ಆಚರಿಸಲಾಯಿತು.
ಶಿರ್ವ ಪತಂಜಲಿ ಯೋಗ ಸಮಿತಿಯ ಲ್ಯಾನ್ಸಿ ಕೋರ್ಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ನಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕೆಂದರು.ಶಾಲೆಯ ಪ್ರಾಂಶುಪಾಲೆ ಮರ್ಟಲ್ ಎಲ್.ಎಫ್.ಲೂವಿಸ್ ಯೋಗ ದಿನದ ಮಹತ್ವ ತಿಳಿಸಿದರು.
ಶಿರ್ವ ಪತಂಜಲಿ ಯೋಗ ಸಮಿತಿಯ ಅನಂತ್ರಾಯ ಶೆಣೈ,ವಿನೋದ್ ಕಬ್ರಾಲ್,ಉದಯ ಆಚಾರ್ಯಯೋಗ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ ಶಿರ್ವ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರು ರೆ|ಫಾ| ರೋಲ್ವಿನ್ ಅರಾನ್ಹ,ಉಪಪ್ರಾಂಶುಪಾಲೆ ಐರಿನ್ ಕಾರ್ಡೊಜಾ,ಎಲ್ಲಾ ವಿಭಾಗಗಳ ಮುಖ್ಯಸ್ಥರು,ಶಿಕ್ಷಕ ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಸುಜಿತ್ ಶೆಟ್ಟಿ,ವಿಶ್ವನಾಥ ಆಚಾರ್ಯ ಮತ್ತು ಶಿಕ್ಷಕಿಯರಾದ ಸಂದ್ಯಾ ಮತ್ತು ಸವಿತಾ ಶೆಟ್ಟಿಗಾರ್ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.