Fraud: ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಆಮಿಷ; ವಂಚನೆ
Team Udayavani, Jun 8, 2024, 6:57 PM IST
ಮಣಿಪಾಲ: ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವಂತೆ ತಿಳಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಘಟನೆ ನಡೆದಿದೆ.
ಉಡುಪಿಯ ಶ್ರೀಕೊಂಡಾ ಯಶಸ್ವಿನಿ ಅವರಿಗೆ Momentum Stock Camp ಅಪರಿಚಿತ ವಾಟ್ಸಾಪ್ ಗ್ರೂಪ್‌ನಿಂದ https://exclusive -iba.xyz/#/home. ಲಿಂಕ್ ಬಂದಿದ್ದು ಅದನ್ನು ತೆರೆದಾಗ ಅದರಲ್ಲಿ ಅಕೌಂಟ್ ತೆರೆಯಲು ಬ್ಯಾಂಕ್ ಖಾತೆಯ ವಿವರಗಳನ್ನು ಭರ್ತಿ ಮಾಡಲು ತಿಳಿಸಿದಂತೆ ಅವರು ಮೇ 2ರಂದು ಬ್ಯಾಂಕ್ ಖಾತೆಯ ಮಾಹಿತಿಯನ್ನು ಭರ್ತಿಮಾಡಿ ಅಕೌಂಟ್ ತೆರೆದಿದ್ದರು. ಅನಂತರ ಅಪರಿಚಿತ ವ್ಯಕ್ತಿಯು ಅವರಿಗೆ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣವನ್ನು ಹೂಡಿಕೆ ಮಾಡಲು ತಿಳಿಸಿದಂತೆ ಮೇ 6ರಿಂದ ಜೂ.4ರ ವರೆಗೆ ತಮ್ಮ ಎಸ್‌ಬಿಐ ಖಾತೆಯಿಂದ 9,29,000 ರೂ.ಗಳನ್ನು ಆರೋಪಿಯ ಬೇರೆ ಬೇರೆ ಖಾತೆಗೆ ಜಮಾ ಮಾಡಿದ್ದಾರೆ. ಆದರೆ ಆ ವ್ಯಕ್ತಿ ಹಣವನ್ನು ನೀಡದೆ ವಂಚಿಸಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.