ತಮಿಳುನಾಡಿನಲ್ಲಿ ಈಶರ್ ಲಾರಿಗೆ ಪಿಕಪ್ ಢಿಕ್ಕಿ; ಬೆಳಪು ನಿವಾಸಿ ಸಾವು
Team Udayavani, Mar 9, 2017, 12:42 PM IST
ಕಾಪು: ತಮಿಳುನಾಡಿನ ವೆಲ್ಲೂರು – ಅಂಬೂರು ಸಮೀಪದಲ್ಲಿ ಈಚರ್ ಲಾರಿ ಮತ್ತು ಮಹೀಂದ್ರ ಪಿಕಪ್ ನಡುವೆ ಅಪಘಾತ ಸಂಭವಿಸಿ ಕಾಪು ಸಮೀಪದ ಬೆಳಪು ನಿವಾಸಿ ಚಾಲಕ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಬುಧವಾರ ಅಪರಾಹ್ನ ಸಂಭವಿಸಿದೆ. ಎರ್ಮಾಳು ನಿವಾಸಿ ಕಲಾಂ ಸಾಹೇಬ್ ಅವರ ಪುತ್ರ ಬೆಳಪುವಿನಲ್ಲಿ ವಾಸವಿರುವ ರಿಯಾಝ್ ಹುಸೇನ್ (46) ಮೃತ ವ್ಯಕ್ತಿ.
ಬುಧವಾರ ಅಪರಾಹ್ನ 1.30ರ ವೇಳೆಗೆ ಚೆನ್ನೈ- ಬೆಂಗಳೂರು ಹೆದ್ದಾರಿಯ ವೆಲ್ಲೂರು ಸಮೀಪದ ಅಂಬೂರು ಬಳಿ ಕೆಟ್ಟು ನಿಂತಿದ್ದ ಈಶರ್ ಲಾರಿಗೆ ಮಹೀಂದ್ರ ಪಿಕಪ್ ಹಿಂಭಾಗದಿಂದ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಚಾಲಕ ವೃತ್ತಿಯ ರಿಯಾಝ್ ಹುಸೇನ್ ಎರಡು ದಿನಗಳ ಹಿಂದೆ ಮಹೀಂದ್ರ ಪಿಕಪ್‌ನಲ್ಲಿ ಮಲ್ಪೆಯಿಂದ ಮೀನು ತುಂಬಿಕೊಂಡು ಚೆನ್ನೈ ಮಾರ್ಕೆಟ್‌ಗೆ ತೆರಳುತ್ತಿದ್ದರು. ವಾಹನದಲ್ಲಿದ್ದ ನಾವುಂದ ನಿವಾಸಿ ಗಂಭೀರ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ಮಾಹಿತಿ ಲಭಿಸಿದೆ. ರಿಯಾಝ್ ಹುಸೇನ್ ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. .
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.