Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ
Team Udayavani, Jan 13, 2025, 8:38 PM IST
ಶಿರ್ವ: ಮನೆಯ ಕಸವನ್ನು ಗೋಣಿ ಚೀಲದಲ್ಲಿ ತುಂಬಿಸಿ ವಾಹನದಲ್ಲಿ ತಂದು ಶಿರ್ವಕೋಡು ಪಂಜಿಮಾರು ರಸ್ತೆ ಬಳಿ ಎಸೆದು ಹೋದ ವ್ಯಕ್ತಿಯಿಂದಲೇ ಕಸವನ್ನು ಶಿರ್ವ ಗ್ರಾ..ಪಂ. ಸದಸ್ಯೆಯೋರ್ವರು ಹೆಕ್ಕಿಸಿದ ಪ್ರಸಂಗ ಸೋಮವಾರ ನಡೆದಿದೆ.
ಕಟಪಾಡಿಯ ರಶೀದ್ ಎಂಬಾತ ರವಿವಾರ ಮತ್ತು ಸೋಮವಾರ ಬೆಳಗ್ಗೆ ಶಿರ್ವ ಗ್ರಾ.ಪಂ. ಸದಸ್ಯೆ ಜೆಸಿಂತಾ ಅವರ ಮನೆಯ ಬಳಿ ಕೋಡು ಪಂಜಿಮಾರು ರಸ್ತೆ ಬದಿ ಕಸ ತ್ಯಾಜ್ಯಗಳನ್ನು ಸುರಿದು ಹೋಗಿದ್ದ. ಎಸೆದ ಕಸದಲ್ಲಿ ಆತ ಉಡುಪಿಯ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ ಖರೀದಿಸಿದ ಬಿಲ್ ಸಿಕ್ಕಿತ್ತು. ಅದನ್ನು ಜೆಸಿಂತಾ ಅವರು ಶಿರ್ವ ಗ್ರಾ.ಪಂ. ಪಿಡಿಒ ಅವರಲ್ಲಿ ನೀಡಿದ್ದು,ಬಟ್ಟೆ ಅಂಗಡಿಯಲ್ಲಿ ವಿಚಾರಿಸಿದಾಗ ಖರೀದಿ ಮಾಡಿದಾತನ ಮೊಬೈಲ್ ನಂಬರ್‌ಸಿಕ್ಕಿತ್ತು. ಆ ಮೊಬೈಲ್ ನಂಬರನ್ನು ಸಂಪರ್ಕಿಸಿದ ಗ್ರಾ.ಪಂ. ಸದಸ್ಯೆ ಜೆಸಿಂತಾ ಆತನನ್ನು ಕರೆಸಿ ಆತನಿಂದಲೇ ಸುರಿದ ಕಸವನ್ನು ಹೆಕ್ಕಿಸಿದ್ದಾರೆ.
ಗ್ರಾ.ಪಂ. ರಸ್ತೆ ಬದಿ ಕಸ ಎಸೆಯುತ್ತಿರುವವರನ್ನು ಪತ್ತೆ ಹಚ್ಚಿ ರೂ. 5 ಸಾವಿರ ದಂಡ ವಿಧಿಸಿ ಅವರಿಂದಲೇ ವಿಲೇವಾರಿ ಮಾಡಿಸುವ ಪ್ರಯತ್ನ ನಡೆಸುತ್ತಿದ್ದು, ಆತ ತಪ್ಪೊಪ್ಪಿಕೊಂಡು ಕಸ ಹೆಕ್ಕಿ ವಿಲೇವಾರಿ ಮಾಡಿದ ಹಿನ್ನೆಲೆಯಲ್ಲಿ ಶಿರ್ವ ಗ್ರಾ.ಪಂ. 2 ಸಾವಿರ ರೂ. ದಂಡ ವಿಧಿಸಿದೆ.
ಹಲವಾರು ವರ್ಷಗಳಿಂದ ಸ್ವಚ್ಛ ಭಾರತ್ ಮಿಷನ್ ಮೂಲಕ ತ್ಯಾಜ್ಯ ವಿಲೇವಾರಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದರೂ,ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆಗೆ ಹೋಗಿ ಕಸ ಸಂಗ್ರಹಿಸುವ ವಾಹನ ವ್ಯವಸ್ಥೆಯಿದ್ದರೂ, ನಾಗರಿಕರು ಮಾತ್ರ ರಸ್ತೆ ಬದಿಯಲ್ಲಿ ಕಸ,ತ್ಯಾಜ್ಯ ಸುರಿಯುತ್ತಿದ್ದಾರೆ. ಸ್ವಚ್ಛತೆಗೆ ಆದ್ಯತೆ ನೀಡುವ ಸಂದೇಶಗಳನ್ನು ಪ್ರತೀದಿನ ವಾಹನದಲ್ಲಿ ಬಿತ್ತರಿಸುತ್ತಿದ್ದರೂ,ರಸ್ತೆ ಬದಿ ಕಸ ಹಾಕಬಾರದೆಂಬ ಮನವಿಗೆ ಕಿವಿಗೊಡದ ಪ್ರಜ್ಞಾವಂತ ಸುಶಿಕ್ಷಿತ ನಾಗರಿಕರು ಕಸ ಎಸೆಯುತ್ತಿರುವುದು ದುರಂತ ಎಂದು ಶಿರ್ವ ಗ್ರಾ.ಪಂ. ಪಿಡಿಒ ಅನಂತಪದ್ಮನಾಭ ನಾಯಕ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ
ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Kota ಸರಣಿ ಸುಸೈ*ಡ್ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!
Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.