ಇಷ್ಟು ದಿನ ಬದುಕಿದ್ದ ರೀತಿಯೇ ಬೇರೆ; ಈಗಿನ ರೀತಿಯೇ ಬೇರೆ
ತಾಯ್ನಾಡಿನ ಕ್ಷೇಮಕ್ಕೆ ಅನಿವಾಸಿ ಭಾರತೀಯರ ನಿರಂತರ ಪ್ರಾರ್ಥನೆ
Team Udayavani, Apr 4, 2020, 10:43 AM IST
ಮಲ್ಪೆ: ಅಮೆರಿಕದಲ್ಲಿಯೂ ಕೋವಿಡ್ 19 ಸೋಂಕಿತರು ಮತ್ತು ಮೃತರ ಸಂಖ್ಯೆ ದಿನೇದಿನೆ ಏರುತ್ತಿದೆ. ಪ್ರತಿಯೊಬ್ಬರೂ ಪ್ರಾಣ ಭಯದಿಂದ ದಿನ ಕಳೆಯುತ್ತಿದ್ದಾರೆ. ನಾನು ಮನೆಯೊಳಗೆ ಲಾಕ್ ಆಗಿದ್ದೇನೆ. ಇಷ್ಟು ದಿನ ಬದುಕಿದ ರೀತಿಯೇ ಬೇರೆ, ಈಗ ಬದುಕುತ್ತಿರುವ ರೀತಿಯೇ ಬೇರೆ ಎನ್ನುತ್ತಾರೆ ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್ ನಗರದಲ್ಲಿ (ಏರ್‌ಪೋರ್ಟ್ ಸಮೀಪ) ನೆಲೆಸಿರುವ ಮಲ್ಪೆ ಮೂಲದ ಆಕರ್ಷ್ ಎಸ್. ದುರ್ಗೆಕರ್.
ನಾನಿರುವ ಡಲ್ಲಾಸ್ ನಗರದ ಒಟ್ಟು ಜನಸಂಖ್ಯೆ 26 ಲಕ್ಷ. ಬುಧವಾರ ಸೋಂಕಿತ ಸಂಖ್ಯೆ 4,000 ಗಡಿದಾಟಿದೆ. 13 ಮಂದಿ ಮೃತಪಟ್ಟಿದ್ದಾರೆ. ದಿನದಿಂದ ದಿನಕ್ಕೆ ಆ ಸಂಖ್ಯೆ ವೃದ್ಧಿಸುತ್ತಿದೆ. ನನ್ನ ತಾಯ್ನಾಡಿಗೆ ಅಂತಹ ದಿನಗಳು ಬರಲೇಬಾರದು. ಅದಕ್ಕಾಗಿ ದೇಶವಾಸಿಗಳೆಲ್ಲರೂ ಸರ ಕಾರಗಳ ಆದೇಶವನ್ನು ಚಾಚೂತಪ್ಪದೆ ಪಾಲಿಸಿ ದೇಶವನ್ನು ಕೋವಿಡ್ 19 ಮಹಾಮಾರಿಯಿಂದ ರಕ್ಷಿಸಿ ಎಂದು ಭಾರತೀಯರಲ್ಲಿ ಮನವಿ ಮಾಡಿದ್ದಾರೆ.
ಎಂಜಿನಿಯರ್ ಆಗಿರುವ ಆಕರ್ಷ್
ಎಸ್. ದುಗೇìಕರ್ ನಾಲ್ಕು ವರ್ಷ ಗಳಿಂದ ಡಲ್ಲಾಸ್ ನಗರದ ಸಿಗ್ನೇಟಿ ಟೆಕ್ನಾಲಯಲ್ಲಿ ಉದ್ಯೋಗದಲ್ಲಿದ್ದಾರೆ. ತಂದೆಯ ಮನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ತಾಯಿ ಮನೆ ಮಲ್ಪೆ. ಅವರ ಜತೆಯಲ್ಲಿದ್ದ ಪತ್ನಿ ಮಗು ಮೂರು ತಿಂಗಳ ಹಿಂದೆಯೇ ಊರಿಗೆ ಬಂದಿದ್ದಾರೆ.
ಸ್ಟೇ ಎಟ್ ಹೋಂ
ಆಮೆರಿಕದಲ್ಲಿ ಲಾಕ್‌ಡೌನ್ ಇಲ್ಲ. ಸ್ಟೇ ಎಟ್ ಹೋಂ ಆದೇಶ ನೀಡಿದ್ದಾರೆ. ಯಾವುದೇ ಕಟ್ಟು ನಿಟ್ಟಿನ ಕ್ರಮ ಇಲ್ಲದಿದ್ದರೂ ಎಲ್ಲರೂ ಸ್ವ ಪ್ರೇರಣೆ ಯಿಂದ ಆದೇಶ ಪಾಲನೆ ಮಾಡುತ್ತಾರೆ. ರಸ್ತೆಗೆ ಯಾರೂ ಇಳಿಯದ ಕಾರಣ ರಸ್ತೆಗಳಲ್ಲಿ ಪೊಲೀಸರು ಇಲ್ಲ; ಲಾಠಿ ಗಳ ಸದ್ದೂ ಇಲ್ಲ. ಎಲ್ಲ ರಸ್ತೆಗಳು ಶ್ಮಶಾನಮೌನವಾಗಿವೆ. ನಿಯಮ ಪಾಲಿಸದವನು ಇಲ್ಲವೇ ಇಲ್ಲ ಎಂದಲ್ಲ; ಅಂಥವರ ಸಂಖ್ಯೆ ಶೇ. 2ರಷ್ಟು ಮಾತ್ರ.
ದಿನನಿತ್ಯದ ಸಾಮಗ್ರಿಗಳನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳುತ್ತೆವೆ. ಹೋಂ ಡೆಲಿವರಿ ಬೇಕಿದ್ದರೆ ಅಂಗಡಿ ಯವರಿಗೆ ಖರೀದಿ ಮಾಡಿದ ವಸ್ತುವಿನ ಮೌಲ್ಯದ ಶೇ. 60ರಷ್ಟನ್ನು ಹೆಚ್ಚುವರಿ ಯಾಗಿ ಪಾವತಿಸಬೇಕು. ಇಲ್ಲವೇ ಅಂಗಡಿಯವರಿಗೆ ಆನ್‌ಲೈನ್ ಮೂಲಕ ಪಟ್ಟಿ ಕಳುಹಿಸಿ, ಡೆಲಿವರಿ ಪಾಯಿಂಟ್‌ಗೆ ಹೋಗಿ ಪಡೆದುಕೊಳ್ಳಬೇಕು. ಟಾಯ್ಲೆಟ್ ಪೇಪರ್, ಕುಡಿಯುವ ನೀರು, ಕೋಳಿಮೊಟ್ಟೆಯ ಕೊರತೆ ಉಂಟಾಗಿದೆ. ಅವೆಲ್ಲದರ ದರವೂ ಸಿಕ್ಕಾ ಪಟ್ಟೆ ಏರಿಕೆಯಾಗಿದೆ.
ಇಂಡಿಯನ್ ಶಾಪ್‌ಗ್ಳು ಬಂದ್
ಗುರುವಾರದಿಂದ 12 ದಿನಗಳ ಕಾಲ ಭಾರತೀಯರ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಲಾ ಗಿದೆ. ಅಂಗಡಿಗಳಲ್ಲಿರುವ ಜಾಗ ಕಿರಿದಾಗಿದ್ದು, ಜನ ಸಂದಣಿ ಆದಾಗ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತಿದೆ ಎಂಬುದೇ ಇದಕ್ಕೆ ಕಾರಣ. ದೊಡ್ಡ ಮಾಲ್‌ಗಳು ತೆರೆದಿ ರುತ್ತವೆ. ಭಾರತೀಯರ ಅಂಗಡಿಗಳಲ್ಲಿ ದೊರೆಯುತ್ತಿದ್ದ ಭಾರತದ ಕರಾವಳಿಯ ಮೀನು ಮಾಂಸಗಳು ಒಂದು ತಿಂಗಳ ಹಿಂದೆಯೇ ಸ್ಥಗಿತವಾಗಿವೆ.
ಸ್ವರ್ಗಸದೃಶ ಭಾರತ
ಭಾರತದಲ್ಲಿ ಲಾಕ್‌ಡೌನ್ ಆಗಿರುವುದು ಅನಿವಾರ್ಯ. ನೀವೆಲ್ಲರೂ ಮನೆಯೊಳಗೇ ಇರಿ; ನೇರವಾಗಿ ಯಾರನ್ನೂ ಭೇಟಿ ಮಾಡಬೇಡಿ, ಸ್ನೇಹಿತರೊಂದಿಗೆ ಮಾತನಾಡಬೇಕಿದ್ದರೆ ವೀಡಿಯೋ ಕಾಲ್ ಮಾಡಿ. ಸ್ವರ್ಗಸದೃಶ ಭಾರತವನ್ನು ಇಲ್ಲಿನ ಹಾಗೆ ನರಕ ಮಾಡಬೇಡಿ, ಕೋವಿಡ್ 19
ದಿಂದ ರಕ್ಷಿಸಿ.
– ಆಕರ್ಷ್ ಎಸ್. ದುರ್ಗೆಕರ್
– ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.