ಅಪಘಾತ ವಲಯವಾಗಿ ಮಾರ್ಪಡುತ್ತಿರುವ ಜಡ್ಕಲ್ ಜಂಕ್ಷನ್
ಪರ್ಯಾಯ ವ್ಯವಸ್ಥೆಗೆ ಸ್ಥಳೀಯರ ಆಗ್ರಹ
Team Udayavani, Nov 22, 2019, 5:02 AM IST
ಕೊಲ್ಲೂರು: ಹಾಲ್ಕಲ್- ಹೆಮ್ಮಾಡಿ ರಾಜ್ಯ ಹೆದ್ದಾರಿಯ ಜಡ್ಕಲ್ ಜಂಕ್ಷನ್ ಅಪಘಾತ ವಲಯವಾಗಿ ಮಾರ್ಪಟ್ಟಿದ್ದು, ಇದಕ್ಕೊಂದು ಪರ್ಯಾಯ ವ್ಯವಸ್ಥೆ ಒದಗಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಪ್ರತಿದಿನ ಯಾತ್ರಾರ್ಥಿಗಳನ್ನು ಕರೆ ದೊಯ್ಯುವ ನೂರಾರು ಘನ ಹಾಗೂ ಲಘು ವಾಹನಗಳು ಕೊಲ್ಲೂರಿನತ್ತ ತೆರಳುತ್ತವೆ. ರಾಜ್ಯ ಹೆದ್ದಾರಿಯೂ ಆಗಿರುವ ಕಾರಣ ಕೊಲ್ಲೂರು, ಬೈಂದೂರು, ಮುದೂರು, ಹಳ್ಳಿ ಹೊಳೆ, ಸಿದ್ದಾಪುರ, ವಂಡ್ಸೆ ಕಡೆಗೆ ತೆರಳುವ ವಾಹನಗಳೂ ಜಡ್ಕಲ್ ವೃತ್ತದ ಮೂಲಕ ಸಾಗುತ್ತವೆ. ಇದರ ನಡುವೆ ಸರಿಯಾದ ಬಸ್ ನಿಲ್ದಾಣ ಇಲ್ಲದ ಕಾರಣ ಮುಖ್ಯ ರಸ್ತೆಯ ಬದಿಯಲ್ಲಿ ನಿಂತು ವಿದ್ಯಾರ್ಥಿಗಳು ಸಹಿತ ಗ್ರಾಮಸ್ಥರು ಬಸ್‌ಗಾಗಿ ಕಾಯಬೇಕಾಗಿದೆ. ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವ ಕಾರಣ ಈ ವೇಳೆ ಅಪಾಯ ನಡೆಯುವ ಸಧಗಯಗಳೂ ಹೆಚ್ಚಿವೆ ಎಂಬುದು ಸ್ಥಳೀಯರ ಅಭಿಪ್ರಾಯ.
ಕ್ರಮಕೈಗೊಳ್ಳಿ
ಅಪಘಾತ ಝೋನ್ ಆಗಿ ಮಾರ್ಪಾಡಾ ಗುತ್ತಿರುವ ಈ ರಸ್ತೆಯ ಸಮಸ್ಯೆ ಬಗ್ಗೆ ಇಲಾಖೆ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟಕ ವಾಸುದೇವ ಮುದೂರು ಅವರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.