ಜ. 26ರಿಂದ ಹೆಬ್ರಿ ತಾ. ಕಚೇರಿ ಆರಂಭ
Team Udayavani, Dec 29, 2017, 1:42 PM IST
ಹೆಬ್ರಿ: ಹೆಬ್ರಿ ತಾಲೂಕು ಆಗ್ರಹಿಸಿ ಕಳೆದ 41 ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಕೊನೆಗೂ ಗೆಲುವು ಸಿಕ್ಕಿದೆ.
2017-18ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಹೊಸ ತಾಲೂಕುಗಳನ್ನು ಘೋಷಿಸಲಾಗಿರುವಂತೆ ಹೆಬ್ರಿಯನ್ನೂ ಘೋಷಿಸಲಾಗಿದ್ದು, ಹೊಸ ತಾಲೂಕಾಗಿ ರಾಜ್ಯಪತ್ರ ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ಜ.26ರಿಂದ ಹೆಬ್ರಿ ನೂತನ ತಾಲೂಕು ಕಚೇರಿ ಕಾರ್ಯಾರಂಭ ಮಾಡಲಿದೆ.
ಈ ಕುರಿತು ಡಿ. 28ರಂದು ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಮಾತನಾಡಿದ ಹೆಬ್ರಿ ತಾಲೂಕು ಹೋರಾಟ ಸಮಿತಿಯ ಗೌರವಾಧ್ಯಕ್ಷ ಎಚ್. ಗೋಪಾಲ ಭಂಡಾರಿ ಅವರು, ನಿರಂತರ ಹೋರಾಟ ಫಲಕೊಟ್ಟಿದೆ. ಹೆಬ್ರಿ ತಾಲೂಕು ಉಡುಪಿ ಜಿಲ್ಲೆಯ 7 ತಾಲೂಕುಗಳಲ್ಲಿ ಭೌಗೋಳಿಕ ವಿಸ್ತೀರ್ಣದಲ್ಲಿ ಕೊನೆ ಸ್ಥಾನದಲ್ಲಿದೆ ಎಂದರು. ಹೆಬ್ರಿ ತಾಲೂಕು ಘೋಷಣೆಯಲ್ಲಿ ಮಾಜಿ ಮುಖ್ಯಮಂತ್ರಿ ಡಾ| ವೀರಪ್ಪ ಮೊಯ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳು, ಜನರ ನಿರಂತರ ಹೋರಾಟದಿಂದ ತಾಲೂಕಾಗಿ ಘೋಷಣೆಯಾಗಿದೆ. ಇದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೋರಾಟ ಸಮಿತಿಯ ಸಂಚಾಲಕ ನೀರೆ ಕೃಷ್ಣ ಶೆಟ್ಟಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಉಪಾಧ್ಯಕ್ಷ ಪ್ರವೀಣ್ ಬಲ್ಲಾಳ್ ಮೊದಲಾದವರಿದ್ದರು.
ಹೆಬ್ರಿ ತಾಲೂಕು ಸೇರುವ ಗ್ರಾಮಗಳು
ಕಾರ್ಕಳ ತಾಲೂಕಿನಲ್ಲಿದ್ದ ಬೇಳಂಜೆ, ಕುಚ್ಚಾರು, ಹೆಬ್ರಿ, ಚಾರ, ಶಿವಪುರ, ಕೆರೆಬೆಟ್ಟು, ಮುದ್ರಾಡಿ, ಕಬ್ಬಿನಾಲೆ, ನಾಡಾ³ಲು, ವರಂಗ, ಪಡುಕುಡೂರು,ಅಂಡಾರು ಹಾಗೂ ಕುಂದಾಪುರ ತಾಲೂಕಿನಲ್ಲಿದ್ದ ಬೆಳ್ವೆ, ಅಲ್ಬಾಡಿ, ಶೇಡಿಮನೆ, ಮಡಾಮಕ್ಕಿ ಸೇರಿದಂತೆ 46,663 ಜನಸಂಖ್ಯೆ ಒಳಗೊಂಡ 16 ಗ್ರಾಮಗಳು ಸೇರಿವೆ.
ಸುದೀರ್ಘ ಹೋರಾಟ
41 ವರ್ಷ ಹೆಬ್ರಿ ತಾಲೂಕಿಗೆ ಹೋರಾಟ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ 2012ರಲ್ಲಿ ತಾಲೂಕು ಪುನರ್ ರಚನಾ ರಾಜ್ಯ ಸಮಿತಿಯ ಅಧ್ಯಕ್ಷರಾಗಿದ್ದ ಎಮ್. ಬಿ ಪ್ರಕಾಶ್ ಉಡುಪಿ ಜಿಲ್ಲೆಯಲ್ಲಿ ಹೆಬ್ರಿ ತಾಲೂಕು ರಚನೆಗೆ ಸಾಕಷ್ಟು ಧನಾತ್ಮಕ ಅಂಶಗಳಿವೆ ಎಂದು ತಿಳಿಸಿದ್ದರು. ಬಳಿಕ ಬಜೆಟ್ನಲ್ಲಿ ಹೊಸ ತಾಲೂಕು ಘೋಷಣೆ ಮಾಡಿ ಮೂಲ ಸೌಕರ್ಯ ಒದಗಿಸಲು ಭರವಸೆ ನೀಡಿದ್ದರೂ ಅನುಷ್ಠಾನವಾಗಿರಲಿಲ್ಲ. ಈಗ ಅವಶ್ಯ ಕಾಮಗಾರಿಗಳಿಗೆ ಚಾಲನೆ ದೊರಕಿಸಿಕೊಡುವ ಜವಾಬ್ದಾರಿ ಸರಕಾರದ ಮೇಲಿದೆ. ಇನ್ನು ಹೆಬ್ರಿಗೆ ಹತ್ತಿರದ ಗ್ರಾಮಗಳಾದ ಸಂತೆಕಟ್ಟೆ , ಕಳ್ತೂರು, ಪೆರ್ಡೂರು, ಬೈರಂಪಳ್ಳಿ 15 ಕಿ.ಮೀ. ವ್ಯಾಪ್ತಿ ಒಳಗಿದ್ದು, ತಾಲೂಕಿಗೆ ಸೇರಿಸದೇ ಇರುವುದು ಅಚ್ಚರಿ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್ಎಚ್ಆರ್ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.