ಅಟ್ಟೆಗೆ 70 ರೂ.: ಭೀತಿಯಲ್ಲಿ ಮಲ್ಲಿಗೆ ಬೆಳೆಗಾರರು
Team Udayavani, May 8, 2021, 5:40 AM IST
ಶಿರ್ವ: ಕೋವಿಡ್ ದಿಂದಾಗಿ ಶಂಕರಪುರ ಮಲ್ಲಿಗೆ ದರದಲ್ಲಿ ಇಳಿಕೆಯಾಗಿದ್ದು ಇದು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮೇ 5ರಂದು ಅಟ್ಟೆಗೆ 70 ರೂ. ಇದ್ದ ದರ ಮೇ 6ರಂದು 170 ರೂ.ಗೆ ಏರಿತ್ತು. ಬಳಿಕ ಇಳಿಕೆಯಾಗಿ ಗುರುವಾರ 130 ರೂ. ಇದ್ದು ಶುಕ್ರವಾರ ಮತ್ತೆ 70 ರೂ.ಗೆ ಇಳಿದಿದೆ.
ವರ್ಷದ ಹೆಚ್ಚಿನ ಆದಾಯ ಎಪ್ರಿಲ್ -ಮೇ ತಿಂಗಳಲ್ಲಿ ಸಿಗುವುದರಿಂದ ಮಲ್ಲಿಗೆ ಕೃಷಿಯನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದ ನೂರಾರು ಕುಟುಂಬಗಳು, ಬೆಳೆಗಾರರು, ಕಟ್ಟೆ ವ್ಯಾಪಾರಿಗಳು, ಮಾರಾಟಗಾರರು ಕಂಗಾಲಾಗಿದ್ದಾರೆ. ಸೀಸನ್‌ನಲ್ಲೇ ಬೆಲೆ ಪಾತಾಳಕ್ಕೆ ಕೋವಿಡ್ ಕರ್ಫ್ಯೂನಿಂದಾಗಿ ಜಾತ್ರೆ, ಶುಭ ಸಮಾರಂಭಗಳಿಗೂ ಕಡಿವಾಣ ಬಿದ್ದ ಕಾರಣ ಮಲ್ಲಿಗೆ ಧಾರಣೆ ಪಾತಾಳಕ್ಕೆ ಕುಸಿದಿದೆ. ಈ ಸಮಯದಲ್ಲಿ ಗರಿಷ್ಠ ದರ 1,000 ರೂ. ಆಸುಪಾಸಿನಲ್ಲಿ ಇದ್ದ ದರ, ಜಿಲ್ಲೆಯ ಮಾರುಕಟ್ಟೆ ಬಿಟ್ಟು ಬೇರೆ ಕಡೆಗೆ ರವಾನೆಯಾಗದೆ ದರದಲ್ಲಿ ಭಾರೀ ಕುಸಿತ ಕಂಡಿದೆ. ಈ ಬಾರಿ ಮಾರ್ಚ್‌ನಿಂದ ಎಪ್ರಿಲ್ 3ನೇ ವಾರದವರೆಗೆ ಮೌಡ್ಯವಿದ್ದು, ಸೀಸನ್ ಆರಂಭವಾಗುವ ವೇಳೆಗೆ ಕೋವಿಡ್ ಮಲ್ಲಿಗೆ ಬೆಳೆಗಾರರ ಆದಾಯದ ಮೂಲ ಕಸಿದುಕೊಂಡಿದೆ. ಹೂ ಕೊಯ್ದು ಕಟ್ಟಿ 1 ಚೆಂಡು ಹೂವಿಗೆ 20 ರೂ.ಗೆ ನೀಡಬೇಕಾಗಿದೆ.
ಕಳೆದ ವರ್ಷ ಲಾಕ್‌ಡೌನ್ ಹಂತದಲ್ಲಿ ಮಾ. 23ರಂದು ಅಟ್ಟೆಗೆ 50 ರೂ. ದಾಖ ಲಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ 2-3 ವಾರಗಳ ಕಾಲ ಮಲ್ಲಿಗೆ ಕಟ್ಟೆ ಬಂದ್ ಆಗಿ ವ್ಯಾಪಾರ ಸ್ಥಗಿತಗೊಂಡು ತೀವ್ರ ಆರ್ಥಿಕ ಸಂಕಷ್ಟ ಎದುರಾಗಿತ್ತು. ಬಳಿಕ ಚೇತರಿಸಿಕೊಂಡಿದ್ದ ಮಲ್ಲಿಗೆ ಮಾರುಕಟ್ಟೆ ನವರಾತ್ರಿ ಸೇರಿ ಸತತ 19 ದಿನಗಳ ಕಾಲ 1,250 ರೂ.ಗರಿಷ್ಠ ದರ ಮುಂದುವರಿದಿದ್ದು ದಾಖಲೆಯಾಗಿತ್ತು.
5 ಸಾವಿರಕ್ಕೂ ಹೆಚ್ಚು ಬೆಳೆಗಾರರು :
ತೋಟಗಾರಿಕೆ ಇಲಾಖೆಯ ಪ್ರಕಾರ ಉಡುಪಿ ಜಿಲ್ಲೆಯ ಕಾಪು ತಾಲೂಕಿನ 10 ಗ್ರಾಮಗಳಲ್ಲಿ ಸುಮಾರು 5,000ಕ್ಕೂ ಹೆಚ್ಚು ಮಲ್ಲಿಗೆ ಬೆಳೆಗಾರರಿದ್ದು, ಸುಮಾರು 103 ಹೆಕ್ಟೇರ್ ಪ್ರದೇಶದಲ್ಲಿ ಮಲ್ಲಿಗೆ ಬೆಳೆಯಲಾಗುತ್ತಿದೆ.
ಸಿಗದ ಪರಿಹಾರ, ಸಹಾಯಧನ :
ಮಲ್ಲಿಗೆ ಬೆಳೆಯನ್ನು ತೋಟಗಾರಿಕೆ ಬೆಳೆ ಎಂದು ಹೇಳಲಾಗುತ್ತಿದೆಯಾದರೂ ಹೆಚ್ಚಿನ ಕೃಷಿಕರು ಮಲ್ಲಿಗೆ ಬೆಳೆಯನ್ನು 5ರಿಂದ 10 ಸೆಂಟ್ಸ್ ಜಮೀನಿನಲ್ಲಿ ಬೆಳೆಯುತ್ತಿದ್ದು 1 ಎಕ್ರೆಗಿಂತ ಕಡಿಮೆ ಜಮೀನಿನಲ್ಲಿ ಕೃಷಿ ಮಾಡುವ ಬೆಳೆಗಾರರಿಗೆ ಸರಕಾರದಿಂದ ಸಬ್ಸಿಡಿ, ಕೃಷಿ ಸಲಕರಣೆಗಳಿಗೆ ಯಾವುದೇ ಸಹಾಯಧನ ಸಿಗುವುದಿಲ್ಲ.
ಕೋವಿಡ್ ದಿಂದಾಗಿ ಮಲ್ಲಿಗೆ ಬೆಳೆಗಾರ ರಿಗೆ ಸೀಸನ್‌ನ ಆದಾಯಕ್ಕೆ ಕತ್ತರಿ ಬಿದ್ದಿದೆ. ಕಳೆದ ವರ್ಷ ಮುಖ್ಯಮಂತ್ರಿಯವರ ಪರಿಹಾರ ಧನ ಆರ್‌ಟಿಸಿಯಲ್ಲಿ ಮಲ್ಲಿಗೆ ಕೃಷಿ ಎಂದು ನಮೂದಿಸಿದವರಿಗೆ ಮಾತ್ರ ದೊರೆತಿದ್ದು, ಶೇ. 99 ಫಲಾನುಭವಿಗಳಿಗೆ ದೊರೆತಿಲ್ಲ. ಸರಕಾರ ಗಿಡವೊಂದಕ್ಕೆ ಕನಿಷ್ಠ 500 ರೂ.ನಂತೆ ಪರಿಹಾರ ನೀಡಿ ಕೃಷಿಕರ ಹಿತ ಕಾಯಬೇಕಿದೆ. –ಬಂಟಕಲ್ಲು ರಾಮಕೃಷ್ಣ ಶರ್ಮ, ಅಧ್ಯಕ್ಷರು, ಮಲ್ಲಿಗೆ ಬೆಳೆಗಾರರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.