ಮಲ್ಲಿಗೆ ದರ ಕುಸಿತ; ಅಟ್ಟೆಗೆ 150 ರೂ.!
Team Udayavani, Mar 31, 2019, 6:30 AM IST
ಶಿರ್ವ: ಶಂಕರಪುರ ಮಲ್ಲಿಗೆಯ ಬೇಡಿಕೆ ಕಡಿಮೆಯಾಗಿ ದರದಲ್ಲಿ ಭಾರೀ ಇಳಿಕೆ ಕಂಡಿದ್ದು ಶನಿವಾರ ಅಟ್ಟೆಗೆ ಕಟ್ಟೆಯಲ್ಲಿ 150 ರೂ.ಗೆ ಇಳಿದಿದೆ. ನವೆಂಬರ್ನಲ್ಲಿ ದರ ನಿಗದಿ ಕೇಂದ್ರದಿಂದ ದರ ಪರಿಷ್ಕರಣೆ ನಡೆದು ಮಲ್ಲಿಗೆಯ ತೀರಾ ಅಭಾವದ ಸಂದರ್ಭ ಅಟ್ಟೆಗೆ ಗರಿಷ್ಠ 1,250 ರೂ. ನಿಗದಿಯಾಗಿತ್ತು. ಈ ವರೆಗೆ ಕಟ್ಟೆಯ ಮಾರುಕಟ್ಟೆ ದರದಲ್ಲಿ ಇಳಿಕೆಯಾಗದೆ ಸಮತೋಲನದಲ್ಲಿದ್ದ ಮಲ್ಲಿಗೆ ದರ ಶುಕ್ರವಾರ, ಶನಿವಾರ ಇಳಿದಿದೆ.
ಬೇಡಿಕೆ ಎಷ್ಟೇ ಹೆಚ್ಚಾದರೂ ಗರಿಷ್ಠ ದರ 1,250 ರೂ. ನಿಗದಿಯಾಗಿದ್ದು ಈ ದರವೇ ಅಂತಿಮ, ಆದರೆ ಮಲ್ಲಿಗೆ ಅಟ್ಟೆಗೆ ಕನಿಷ್ಠ ದರವೆಂಬುದಿಲ್ಲ.
ಕನಿಷ್ಠ ದರ ನಿಗದಿ
ಅಟ್ಟೆಗೆ ಕನಿಷ್ಠ 300 ರೂ. ಆದರೂ ನಿಗದಿ ಪಡಿಸಬೇಕು. 1 ಚೆಂಡು ಹೂ ಕೊಯ್ದು ಕಟ್ಟಲು ಚೆಂಡಿಗೆ 20 ರೂ.ಗಳಂತೆ 1 ಅಟ್ಟಿ ಹೂ ಕೊಯ್ದು ಕಟ್ಟಿದವರಿಗೆ 80 ರೂ. ನೀಡಬೇಕಾಗುತ್ತದೆ. ಹೂ ಕಟ್ಟುವ ದಾರವೂ
ದುಬಾರಿಯಾಗಿದೆ. ಎಲ್ಲ ಖರ್ಚು ಸೇರಿದಾಗ ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿ ಬೆಳೆಗಾರನಿಗೆ ನಷ್ಟವೇ ಆಗುತ್ತದೆ ಎಂಬುದು ಕೃಷಿಕರ ಅಭಿಪ್ರಾಯ.
ಶುಭ ಸಮಾರಂಭವಿಲ್ಲದೆ ಹೂವಿಗೆ ಬೇಡಿಕೆ ಕಡಿಮೆಯಾಗಿ ದರ ಕುಸಿತ ಕಂಡಿದೆ. ಹೂವಿನ ಬೇಡಿಕೆಗನುಗುಣವಾಗಿ ದರ ನಿಗದಿಯಾಗುತ್ತದೆ. ಅಟ್ಟೆಗೆ ಗರಿಷ್ಠ ರೂ.1250 ನಿಗದಿಪಡಿಸಲಾಗಿದೆ. ಕನಿಷ್ಠ ದರವೆಂಬುದಿಲ್ಲ.
-ವಿನ್ಸೆಂಟ್ ರಾಡ್ರಿಗಸ್, ಶಂಕರಪುರ ಮಲ್ಲಿಗೆ ವ್ಯಾಪಾರಿ
ದರದಲ್ಲಿ ಇಳಿಕೆ ಕಂಡಾಗ ಬೆೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ. ಬೆಳೆಗಾರರ ಸಂಕಷ್ಟ ಅರಿತು ಮಲ್ಲಿಗೆ ಬೆಳೆಗೆ ಕನಿಷ್ಠ ದರ 300 ನಿಗದಿಪಡಿಸಿ ಹಿತ ಕಾಪಾಡಬೇಕಾಗಿದೆ.
– ವೈಲೆಟ್ಕ್ಯಾಸ್ತಲಿನೊ, ಕೋಡುಗುಡ್ಡೆ, ಮಲ್ಲಿಗೆ ಬೆಳೆಗಾರ್ತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.