ಜಯಮಾಲಾ ಗ್ಲಾಮರಸ್ ಸಚಿವೆ: ಪ್ರಮೋದ್
Team Udayavani, Aug 30, 2018, 11:16 AM IST
ಉಡುಪಿ: ಜಯಮಾಲಾ ನಮ್ಮ ಗ್ಲಾಮರೆಸ್ ಉಸ್ತುವಾರಿ ಸಚಿವರು, ಅವರ ಗ್ಲಾಮರ್ ನಮಗೂ ಇಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಜಯಮಾಲಾ 1 ದಿನ ಮಾತ್ರ ನಗರ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ಬಂದಿರುವುದು ನಿಮಗೆ ಸಾಕಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ, ಅವರ 1 ದಿನದ ಪ್ರಚಾರವೇ ದೊಡ್ಡ ಪ್ರಭಾವವನ್ನೇ ಸೃಷ್ಟಿಸಿದೆ. ಉಡುಪಿಯಲ್ಲಿ ಜಯಮಾಲಾ ಗಾಳಿ ಎಬ್ಬಿಸಿದ್ದಾರೆ ಎಂದರು.
ಕಾಂಗ್ರೆಸ್ ಸನಾತನ ಧರ್ಮದಂತೆ!
ಕಾಂಗ್ರೆಸ್‌ಗೆ ಇದು ಅಳಿವು ಉಳಿವಿನ ಚುನಾವಣೆ ಎಂದು ಹೇಳಲಾಗುತ್ತಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಕಾಂಗ್ರೆಸ್ ಪಕ್ಷ ಎಂದಿಗೂ ಉಳಿಯುತ್ತದೆ. ಸನಾತನ ಧರ್ಮದಂತೆ ಕಾಂಗ್ರೆಸ್ ಪಕ್ಷ. ಸನಾತನ ಧರ್ಮ ಎಂದಿಗೂ ನಾಶವಾಗುವುದಿಲ್ಲ. ನಾನು ಬಿಟ್ಟರೂ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ ಎಂದರು.
ಪತ್ರಕರ್ತರೊಬ್ಬರು ನಾನು ಇಲ್ಲದಿದ್ದರೂ ಅಂದರೆ ಏನು ಅರ್ಥ? ವಿಧಾನಸಭಾ ಚುನಾವಣೆಯಂತೆ ಗೇಟು ತೆರೆಯುವುದು ಮತ್ತು ಹಾರುವುದು ಎಂಬೆಲ್ಲಾರೀತಿಯಲ್ಲಿ ಪ್ರಚಾರವಾಗಿದೆ. ಮುಂದಿನ ಲೋಕಸಭಾ ಚುನಾವಣೆಯೊಳಗೆ ಪಕ್ಷ ಬಿಡುವ ಆಲೋಚನೆ ಇದೆಯಾ ಎಂದು ಪ್ರಶ್ನಿಸಿದರು. ಇದು ಉದಾಹರಣೆಗೆಂದು ನೀಡಿದ ಉತ್ತರ. ತುಂಬಾ ಹಳೆಯ ಪಕ್ಷವಾಗಿರುವ ಕಾಂಗ್ರೆಸ್‌ಗೆ ಎಂದಿಗೂ ಅಳಿವಿಲ್ಲ ಉಳಿವು ಮಾತ್ರ ಎಂದರು.
ಶಾಸಕ ಭಟ್ ವಿರುದ್ಧ ಪ್ರತಿಭಟನೆ
ನಾನು ಗೆದ್ದ ಒಂದು ತಿಂಗಳೊಳಗೆ ಮರಳು ಸಮಸ್ಯೆ ಬಗೆಹರಿಸುತ್ತೇನೆ ಎಂದು ಶಾಸಕ ಭಟ್ ಹೇಳಿದ್ದರು. ಆದರೆ ಆ. 1ರಿಂದ ಮರಳುಗಾರಿಕೆ ಆರಂಭಗೊಳ್ಳಬೇಕಿತ್ತು. ಅವರಿಗೆ ಇನ್ನೂ ಒಂದು ತಿಂಗಳು ಗಡುವು ನೀಡಿ, ಸೆ. 1ರ ಅನಂತರ ಮರಳುಗಾರಿಕೆ ಆರಂಭಗೊಳ್ಳದಿದ್ದರೆ ಪ್ರತಿಭಟನೆ ನಡೆಸುತ್ತೇವೆ. ಇನ್ನೂ ಮಹತ್ವದ ವಿಚಾರವೆಂದರೆ, ಸಿಆರ್‌ಝಡ್ ಮತ್ತು ನಾನ್ ಸಿಆರ್‌ಝಡ್ ಎರಡು ಕಡೆ ಕೇಂದ್ರ ಸರಕಾರ ಮರಳುಗಾರಿಕೆಗೆ ಅವಕಾಶ ನಿರಾಕರಿಸಿದೆ. ಇಲ್ಲಿನ ಶಾಸಕರು ಕೇಂದ್ರದಲ್ಲಿ ಈ ಕುರಿತು ಚರ್ಚಿಸಿದರೆ ಮರಳುಗಾರಿಕೆ ಪುನರಾರಂಭಿಸಲು ಸಾಧ್ಯ. ಇದಕ್ಕೆ ರಾಜ್ಯ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.