ಜಯಂತಿ ಆಚರಣೆ: ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ
ಪ್ರಗತಿ ಪರಿಶೀಲನ ಸಭೆ
Team Udayavani, Oct 2, 2019, 5:03 AM IST
ಉಡುಪಿ: ವಿವಿಧ ಜಯಂತಿ ಆಚರಣೆಗಳ ಸ್ವರೂಪ ಮತ್ತು ಅವುಗಳ ವಾಸ್ತವಾಂಶವನ್ನು ನಿರ್ಧರಿಸುವ ಹಿನ್ನೆಲೆಯಲ್ಲಿ ಜನರಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸ ಎಲ್ಲ ಜಿಲ್ಲೆಗಳಲ್ಲೂ ಆಗಬೇಕು. ಆಚರಣೆಗಳು ಯಾವುದೇ ಸಮುದಾಯಕ್ಕೆ ಸೀಮಿತವಾಗಿರದೆ ಅರ್ಥಪೂರ್ಣವಾಗಿ ನಡೆಯಬೇಕು ಎಂದು ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹೇಳಿದರು.
ಮಂಗಳವಾರ ಮಣಿಪಾಲದಲ್ಲಿ ನಡೆದ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಪ್ರವಾಸೋದ್ಯಮದ ಅಭಿ ವೃದ್ಧಿಗೆ ಸಚಿವರು ಮಾರ್ಗಸೂಚಿ ಗಳನ್ನು ನೀಡಿದರು. ಮುಖ್ಯವಾಗಿ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಸಮಗ್ರ ವಿವರ ಇರುವ ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಳವಡಿಸಬೇಕು. ನಮ್ಮ ಸಂಪ್ರದಾಯ ವನ್ನು ಬೆಳೆಸಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಆಗಬೇಕು. ಪ್ರತೀ ಗ್ರಾಮಗಳ ವಿಶೇಷತೆ, ಇತಿಹಾಸ, ಸಂಸ್ಕೃತಿಯ ಸಮಗ್ರ ಮಾಹಿತಿ ಸಂಗ್ರಹಿಸಿ ವಿಕಿಪೀಡಿಯಾ ಸ್ವರೂಪದ ವೆಬ್‌ಸೈಟ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದರು.
ರಸ್ತೆಗಳ ಅಭಿವೃದ್ಧಿ
ಸಾಗರಮಾಲಾ ಮೂಲಕ ಸಮುದ್ರ ತೀರದ ರಸ್ತೆಗಳ ಅಭಿವೃದ್ಧಿ, ಕೋಟಿ ಚೆನ್ನಯ ಥೀಮ್ ಪಾರ್ಕ್ ಅಭಿವೃದ್ಧಿ, ಕರಾವಳಿ ತೀರದ ಅಭಿವೃದ್ಧಿ ಬಗ್ಗೆ ವಿಸ್ತೃತ ವರದಿ ತಯಾರಿಸುವಂತೆ ಸಚಿವರು ತಿಳಿಸಿದರು.
ಬೋಟ್ ಹೌಸ್ ಅನುಮತಿ: ಭಟ್
ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಬ್ಯಾಕ್‌ವಾಟರ್ ಪ್ರದೇಶ ಗಳಲ್ಲಿ ಡ್ರೆಜ್ಜಿಂಗ್ ಮಾಡಿ ಬೋಟ್‌ಹೌಸ್‌ಗಳಿಗೆ ಅನುಮತಿ ನೀಡ ಬೇಕು. ಇಂತಹ ಬೋಟ್‌ಗಳಿಗೆ ಸಬ್ಸಿಡಿ ನೀಡುವ ಕೆಲಸವಾಗಬೇಕು. ಪಡುಕೆರೆ ಬೀಚ್ ಅಭಿವೃದ್ಧಿ ಮಾಡಲು ಸಮುದ್ರತೀರದ ಪ್ರದೇಶಗಳನ್ನು ಪ್ರವಾಸೋದ್ಯಮ ಇಲಾಖೆಯ ಸುಪರ್ದಿಗೆ ನೀಡಬೇಕು. ಈ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ಜಿಲ್ಲೆಯಲ್ಲಿ ರಂಗಮಂದಿರಕ್ಕೆ ಜಾಗ ಗುರುತಿಸಲಾಗಿದೆ. ಇದರ ನಿರ್ಮಾಣ ಯೋಜನೆ ಕಾಮಗಾರಿಗೆ ಹಲವಾರು ಬಾರಿ ಮನವಿಯನ್ನೂ ಸಲ್ಲಿಸಲಾಗಿದೆ. ರಂಗಾಯಣ ಮತ್ತು ಯಕ್ಷಗಾನವನ್ನು ಕೇಂದ್ರೀಕರಿಸಿಕೊಂಡು ಒಂದೆಡೆ ರಂಗಮಂದಿರ ನಿರ್ಮಿಸುವ ಬಗ್ಗೆ ಹಾಗೂ ಜಿಲ್ಲೆಯಲ್ಲಿ ಸುಮಾರು 25ಕ್ಕೂ ಅಧಿಕ ರಂಗತಂಡಗಳಿದ್ದು, ಪ್ರತೀ ತಾಲೂಕುಗಳಲ್ಲಿಯೂ ರಂಗಮಂದಿರ ನಿರ್ಮಿಸಿದರೆ ಅನುಕೂಲ ಎಂಬ ಬಗ್ಗೆಯೂ ಚರ್ಚೆ ನಡೆಯಿತು.
ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್‌ಝಡ್ ಸಮಸ್ಯೆ ಕಾರಣ ಎಂಬ ವಿಚಾರ ಚರ್ಚೆಗೀಡಾಯಿತು. ವಿನಾ ಕಾರಣ ನೀಡಿ ಎನ್‌ಒಸಿ ವಿಳಂಬ, ಇಕೋ ಸೆನ್ಸಿಟಿವ್ ಝೋನ್‌ಅಸಮರ್ಪಕ ಮಾಹಿತಿ ಸಹಿತ ಹಲವು ವಿಚಾರಗಳು ಚರ್ಚೆಗೆ ಬಂದವು.
ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ.ಪಂ. ಸಿಇಒ ಪ್ರೀತಿ ಗೆಹೋಲೊಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿಗಳು, ಅಧಿಕಾರಿಗಳು ಭಾಗವಹಿಸಿದ್ದರು.
ಗಾಂಧಿ ತಣ್ತೀ ತಿಳಿಸುವ ಕೆಲಸವಾಗಲಿ
ಗಾಂಧೀಜಿ ಬಂದು ಹೋದ ಸ್ಥಳಗಳು, ಅವರ ಸಂಕಲ್ಪಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ಈ ಮೂಲಕ ಅವರ ತಣ್ತೀಗಳನ್ನು ಪಸರಿಸುವ ಕೆಲಸವಾಗಬೇಕು ಎಂದು ಸಚಿವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.