ನದಿಗೆ ಉರುಳಿದ ಬೊಲೆರೋ ಜೀಪ್‌; ಮಹಿಳೆ ಸಾವು


Team Udayavani, Jan 13, 2019, 4:51 AM IST

jeep.jpg

ಬೆಳ್ಮಣ್‌: ಕುಟುಂಬವೊಂದು ಸಾಗುತ್ತಿದ್ದ ಬೊಲೆರೋ ಜೀಪ್‌ ನದಿಗುರುಳಿ ಮಹಿಳೆ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಕಲಕರಿಯದಲ್ಲಿ ಸಂಭವಿಸಿದೆ. ಜೀಪಿನಲ್ಲಿದ್ದ ಇತರ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಬೋಳದ ಸ್ಟಾನಿ ಮಸ್ಕರೇನಸ್‌ ಅವರ ಪತ್ನಿ ಡಯಾನಾ (45) ನೀರಿನಲ್ಲಿ ಮುಳುಗಿ ಮೃತಪಟ್ಟವರು. ಜೀಪು ಚಲಾಯಿಸುತ್ತಿದ್ದ ಸ್ಟಾನಿ ಮಸ್ಕರೇನಸ್‌ (50) ಹಾಗೂ ಮಕ್ಕಳಾದ ಶಲ್ಟನ್‌ (21), ಶರ್ಮನ್‌ (18) ಅವರು ಅಪಾಯದಿಂದ ಪಾರಾದವರು. ಜೀಪ್‌ ಸಂಕಲಕರಿಯ ಶಾಂಭವಿ ನದಿ ಸೇತುವೆಯ ತಡೆಗೋಡೆಗೆ ಬಡಿದು ನದಿಗೆ ಉರುಳಿತ್ತು.

ಮದುವೆಗೆ ಹೊರಟಿದ್ದರು
ಕಾರ್ಕಳ ತಾಲೂಕಿನ ಬೋಳ ಕೇಂದೊಟ್ಟು ಬರ್ಕೆಯ ಸ್ಟಾನಿ ಅವರು ಪತ್ನಿ, ಮಕ್ಕಳೊಂದಿಗೆ ಮಂಗಳೂರಿನ ಮಿಲಾಗ್ರಿಸ್‌ ಚರ್ಚ್‌ ಹಾಲ್‌ನಲ್ಲಿ ನಡೆಯಲಿದ್ದ ತನ್ನ ಸೊಸೆಯ ಮದುವೆಗೆ ಹೊರಟಿದ್ದರು. ಬೆಳಗ್ಗೆ 8.50ರ ಹೊತ್ತಿಗೆ ಅವರು ಚಲಾಯಿಸುತ್ತಿದ್ದ ಜೀಪ್‌ ಸಂಕಲಕರಿಯ ಶಾಂಭವಿ ನದಿ ಸೇತುವೆಯ ಪಶ್ಚಿಮ ಭಾಗದ ತಡೆಗೋಡೆಗೆ ಢಿಕ್ಕಿ ಹೊಡೆದು ನದಿಗೆ ಮಗುಚಿತ್ತು. ಅಣೆಕಟ್ಟು ಹಾಕಿದ್ದರಿಂದ ನದಿ ತುಂಬಿ ತುಳುಕುತ್ತಿತ್ತು. ತತ್‌ಕ್ಷಣ ಸ್ಥಳೀಯರು ಮತ್ತು ಇತರ ವಾಹನಗಳ ಚಾಲಕರು ನೀರಿಗೆ ಧುಮುಕಿ ತಂದೆ-ಮಕ್ಕಳನ್ನು ಜೀಪ್‌ನಿಂದ ಹೊರಗೆಳೆದು ರಕ್ಷಿಸಿದರು.

ಯುವಕರ ಕಾರ್ಯಕ್ಕೆ ಶ್ಲಾಘನೆ
ನದಿಗೆ ಧುಮುಕಿ ಮೂವರನ್ನು ರಕ್ಷಿಸಿದ ಸಂಕಲಕರಿಯ, ಪಟ್ಟೆ, ಉಳೆಪಾಡಿ ಹಾಗೂ ಏಳಿಂಜೆ ಪರಿಸರದ ಯುವಕರ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ. 50ಕ್ಕೂ ಮಿಕ್ಕಿ ಯುವಕರು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.  ಐಕಳ ಪೊಂಪೈ ಕಾಲೇಜಿನ ಉಪನ್ಯಾಸಕ ಸಂಕಲಕರಿಯದ ವಿಶ್ವಿ‌ತ್ಥ್ ಶೆಟ್ಟಿ ಅವರು ಉಟ್ಟ ಬಟ್ಟೆಯಲ್ಲಿಯೇ ನೀರಿಗೆ ಧುಮುಕಿದ್ದು, ಪಟ್ಟೆ ಕ್ರಾಸ್‌ನ ಗುಣಪಾಲ, ಉಳೆಪಾಡಿಯ ಆಶೋಕ ಮೂವರನ್ನು ರಕ್ಷಿಸಿದ ಪ್ರಮುಖರು. ನವೀನ್‌ ವಾಸ್‌, ಮುಂಡ್ಕೂರು ಗ್ರಾ.ಪಂ. ಸದಸ್ಯ ಸೋಮನಾಥ ಪೂಜಾರಿ, ಐಕಳ ಗ್ರಾ.ಪಂ. ಆಧ್ಯಕ್ಷ ದಿವಾಕರ ಚೌಟ, ಸಂಕಲಕರಿಯದ ಸುರೇಶ್‌ ಭಂಡಾರಿ, ಗಿರೀಶ್‌, ಏಳಿಂಜೆಯ ಅಕ್ಷಿತ್‌ ಮತ್ತಿತರರು ಶ್ರಮಿಸಿದ್ದರು.

ಪೊಲೀಸರ ಗೊಂದಲ
ಸಂಕಲಕರಿಯ ನದಿ ಮಂಗಳೂರು ಮತ್ತು ಕಾರ್ಕಳದ ಗಡಿಭಾಗದಲ್ಲಿದ್ದು ಉಡುಪಿ ಹಾಗೂ ದ.ಕ.ವನ್ನು ಬೇರ್ಪಡಿಸುವ ಸೇತುವೆ ಇದಾಗಿದ್ದರೂ ನದಿಗೆ ಬಿದ್ದ ಜೀಪ್‌ನ ಈ ದೂರು ಯಾರು ಸ್ವೀಕರಿಸುವುದೆಂಬ ಗೊಂದಲ ಸೃಷ್ಟಿಯಾಗಿತ್ತು. ಮೂಲ್ಕಿ ವೃತ್ತ ನಿರೀಕ್ಷಕ ಅನಂತಪದ್ಮನಾಭ ಹಾಗೂ ಕಾರ್ಕಳ ಠಾಣೆಯ ನಾಸಿರ್‌ ಹುಸೇನ್‌ ಕಂದಾಯ ಇಲಾಖೆಯ ಮಾಹಿತಿ ಪಡೆದು ಕೊನೆಗೂ ಜೀಪ್‌ ಬಿದ್ದ ಭಾಗ ಕಾರ್ಕಳ ಪೊಲೀಸ್‌ ಠಾಣಾ ವ್ಯಾಪ್ತಿಯದ್ದೆಂಬ ತೀರ್ಮಾನದ ಬಳಿಕ ಕಾರ್ಕಳ ಠಾಣೆಯಲ್ಲಿ ಕೇಸು ದಾಖಲಿಸಲಾಯಿತು.

ಕೃಷಿ ಕುಟುಂಬ
ಬೋಳದ ಕೇಂದೊಟ್ಟುವಿನ ಸ್ಟಾನಿ ಅವರು ಕೃಷಿಕರಾಗಿದ್ದು ಪತ್ನಿ ಡಯಾನಾ ಎಡಪದವು ಪೆರಾರದವರು. ಈ ದಂಪತಿ 4 ಮಕ್ಕಳನ್ನು ಹೊಂದಿದ್ದು ಜೀಪ್‌ನಲ್ಲಿದ್ದ ಶರ್ಮನ್‌, ಶಲ್ಟನ್‌ರನ್ನು ಹೊರತುಪಡಿಸಿ ಶರಲ್‌ (ಹೆಣ್ಣು) ಹಾಗೂ ಶಾನ್‌ (ಗಂಡು) ಎಂಬ ಅವಳಿ ಮಕ್ಕಳನ್ನು ಹೊಂದಿದ್ದಾರೆ.

ಗಾಯಾಳುಗಳು ಆಸ್ಪತ್ರೆಗೆ

ಸ್ಟಾನಿ, ಮಕ್ಕಳಾದ ಶರ್ಮನ್‌ ಹಾಗೂ ಶಲ್ಟನ್‌ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಯಾನಾ ಅವರ ಮರಣೋತ್ತರ ಪ್ರಕ್ರಿಯೆ ಬೆಳ್ಮಣ್‌ ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಮಂಗಳೂರಿನಲ್ಲಿ ನಡೆಯಲಿದ್ದ ಮದುವೆಯಲ್ಲಿ ಸ್ಟಾನಿ ದಂಪತಿ ಪ್ರಮುಖ ಜವಾಬ್ದಾರಿಯಲ್ಲಿದ್ದರೂ ಬೇಸರದ ಛಾಯೆಯಲ್ಲಿ ಸಾಂಕೇತಿಕ ವಿಧಿ ವಿದಾನಗಳೊಂದಿಗೆ ಮದುವೆ ನಡೆಯಿತು.

65 ವರ್ಷಗಳ ಹಳೆಯ ಸೇತುವೆ
ಸಂಕಲಕರಿಯ ಶಾಂಭವಿ ನದಿ ಸೇತುವೆ 65 ವರ್ಷಗಳ ಹಳೆಯದಾಗಿದ್ದು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸೂಕ್ತ ತಡೆಗೋಡೆಯೂ ಇಲ್ಲದಿರುವ ಬಗ್ಗೆ ಉದಯವಾಣಿ ಇತ್ತೀಚೆಗೆ ಎರಡು ಬಾರಿ ಸಚಿತ್ರ ವರದಿ ಪ್ರಕಟಿಸಿತ್ತು. ಸೇತುವೆಗೆ ಕಾಯಕಲ್ಪ ಒದಗಿಸಿ ಸೇತುವೆಯ ಇಕ್ಕೆಲಗಳಿಗೆ ಕಬ್ಬಿಣದ ಸಲಾಖೆಗಳಿಂದ ತಡೆಗೋಡೆ ನಿರ್ಮಿಸಬೇಕೆಂದು ಜನ ಆಗ್ರಹಿಸಿದ್ದಾರೆ.ಸೇತುವೆಯ ನಿರ್ಲಕ್ಷದ ಬಗ್ಗೆ ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಟಲದಾಸ ಸ್ವಾಮೀಜಿ ಮಾತನಾಡಿ, ಲೋಕೋಪಯೋಗಿ ಇಲಾಖೆ ಇನ್ನಾದರೂ ಎಚ್ಚೆತ್ತು ಸೇತುವೆಗೆ ತಡೆ ಬೇಲಿ ನಿರ್ಮಿಸಲಿ ಎಂದು ಆಗ್ರಹಿಸಿದ್ದಾರೆ.

ಜೀವಕ್ಕೆರವಾದ ಸೀಟ್‌ ಬೆಲ್ಟ್!
ಅಪಘಾತ ಸಂಭವಿಸಿದಾಗ ಪ್ರಯಾಣಿಕರ ಜೀವ ಉಳಿಸುವ ಸೀಟ್‌ ಬೆಲ್ಟ್ ಈ ಪ್ರಕರಣದಲ್ಲಿ ಮಾತ್ರ ಮಹಿಳೆಯ ಜೀವಕ್ಕೆ ಮುಳುವಾಯಿತು. ಜೀಪ್‌ ನೀರಿನೊಳಗೆ ಕವುಚಿಬಿದ್ದಿತ್ತು. ಡಯಾನಾ ಅವರು ಸೀಟ್‌ ಬೆಲ್ಟ್ ಧರಿಸಿದ್ದರಿಂದ ಅವರಿಗೆ ಹೊರ ಬರಲಾಗಲಿಲ್ಲ. ರಕ್ಷಣೆಗಿಳಿದವರಿಗೂ ಅವರನ್ನು ಬಿಡಿಸಿ ತರಲು ಸಾಧ್ಯವಾಗಲಿಲ್ಲ. ಜೀಪ್‌ನ ಗ್ಲಾಸ್‌ ಒಡೆಯಲೂ ಅಸಾಧ್ಯವಾಗಿ ಡಯಾನಾ ಉಸಿರುಗಟ್ಟಿ ಮೃತಪಟ್ಟರು.

ಟಾಪ್ ನ್ಯೂಸ್

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.