ಜ್ಞಾನಧಾರೆ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ: ಡಿ’ಸೋಜಾ
Team Udayavani, Mar 28, 2017, 4:11 PM IST
ಉಡುಪಿ: ದೇವರ ಸೃಷ್ಠಿಕಾರ್ಯ ಅದ್ಭುತವಾಗಿದ್ದು ಮನುಷ್ಯರಾಗಿ ಸೃಷ್ಟಿಸಲ್ಪಟ್ಟ ನಾವು ಆ ಸೃಷ್ಟಿಯ ಸಾರ್ಥಕ್ಯವನ್ನು ಮೆರೆಯಬೇಕು. ಮಕ್ಕಳನ್ನು ತಿದ್ದಿ ತೀಡುವ ಕಾರ್ಯವು ಅವರ ವ್ಯಕ್ತಿತ್ವ ವಿಕಸನಕ್ಕಾಗಿ ಹೊರತು ಗುರುಗಳು ತಮಗೆ ಮಾಡುವ ಅವಮಾನ ಎಂದು ವಿದ್ಯಾರ್ಥಿಗಳು ಯಾವತ್ತೂ ಭಾವಿಸಬಾರದು. ಗುರುಗಳು ಪ್ರೀತಿಯಿಂದ ನೀಡುವ ಜ್ಞಾನಧಾರೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುವುದಾಗಿ ಕಾರ್ಕಳ ಅತ್ತೂರು ಸೈಂಟ್ ಲಾರೆನ್ಸ್ ಮೈನರ್ ಬೆಸಲಿಕಾದ ಧರ್ಮಗುರು ರೆ|ಫಾ| ಜಾರ್ಜ್ ಥಾಮಸ್ ಡಿಸೋಜಾ ಹೇಳಿದರು.
ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 26ನೇ ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕರ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಸಿ. ಎ. ಶಾಖೆಯ ಅಧ್ಯಕ್ಷೆ ಸಿ. ಎ. ರೇಖಾ ದೇವಾನಂದ್ ಮಾತನಾಡಿ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು.
2016ನೇ ವರ್ಷದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಈ ಸಂದರ್ಭ ಸಮ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರವಿರಾಜ್ ಎಚ್.ಪಿ., ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ತೋನ್ಸೆ, ರಕ್ಷಕ- ಶಿಕ್ಷಕ ಸಂಘದ ಕಾರ್ಯದರ್ಶಿ ಪದ್ಮ ಪಿ. ಭಟ್ ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ| ಮಧುಸೂದನ್ ಭಟ್ ವಾರ್ಷಿಕ ವರದಿ ವಾಚಿಸಿ, ಉಪನ್ಯಾಸಕ ರಾಘವೇಂದ್ರ ಜಿ. ಜಿ. ಬಹುಮಾನ ಪಟ್ಟಿ ಪ್ರಕಟಿಸಿದರು. ಬಿಬಿಎಂ ವಿದ್ಯಾರ್ಥಿನಿ ಸೋನ್ಸ್ ಮಡೋನಾ ಸ್ವಾಗತಿಸಿ, ವಿವೇಕ ಲಾಗಕರ್ ವಂದಿಸಿದರು. ಅಂತಿಮ ಬಿ.ಕಾಂ. ವಿದ್ಯಾರ್ಥಿ ಅನಿರುದ್ಧ್ ಪಡಿಯಾರ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.