ಶ್ರೀ ದುರ್ಗಾ ಆದಿಶಕ್ತಿ ಸನ್ನಿಧಾನದಲ್ಲಿ ಜೋಡಿ ಲಲಿತ ಸಹಸ್ರ ಕದಳಿಯಾಗ ಸಂಪನ್ನ

Team Udayavani, Oct 20, 2023, 4:59 PM IST

1-errer

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಲಲಿತಾ ಪಂಚಮಿ ಪರ್ವಕಾಲದಲ್ಲಿ ಜೋಡಿ ಲಲಿತಾ ಸಹಸ್ರ ಕದಳಿ ಯಾಗ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಋತ್ವಿಜರ ಸಹಕಾರದೊಂದಿಗೆ ಸೇವ್ ಆರ್ತಿಗಳ ಸಮಕ್ಷಮದಲ್ಲಿ ಸಂಪನ್ನಗೊಂಡಿತು.

ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರವಾದ ಮೇರುಶ್ರೀ ಚಕ್ರವನ್ನು ಹೊಂದಿರುವ ಕ್ಷೇತ್ರದಲ್ಲಿ ಸಂಪನ್ನಗೊಂಡ ಈ ಮಹಾನಯಾಗವು ಬಹು ಫಲಪ್ರದವಾದದು. ಸಹಸ್ರ ಸಹಸ್ರ ಸಂಖ್ಯೆಯ ಕದಳಿ ಹಣ್ಣನ್ನು ತ್ರಿಮಧುರಯುಕ್ತವಾಗಿ ಹೋಮಿಸಿ ಲಲಿತಾ ಸಹಸ್ರನಾಮದಿಂದ ಆಕೆಯನ್ನು ವಿಧ ವಿಧದ ಕುಸುಮಗಳಿಂದ ಅರ್ಜಿಸಿ ಬಗೆ ಬಗೆಯ ನೈವೇದ್ಯವನ್ನಿಟ್ಟು ಭೂಮಂಡಲದ ಒಡತಿಯಾದ ರಾಜರಾಜೇಶ್ವರಿಯ ಅನುಗ್ರಹವನ್ನು ಯಾಚಿಸುವ ಯಾಗವನ್ನು ಮುಂಬೈಯ ಖ್ಯಾತ ಜಿಮ್ ಟ್ರೈನರ್ ವಿನೋದ್ ಜನ್ನ ಹಾಗೂ ಪ್ರಜ್ಞಾ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಪರವಾಗಿ ಸಮರ್ಪಿಸಲಾಯಿತು.

ಬ್ರಾಹ್ಮಣ ಸುವಾಸಿನಿಯರ ಆರಾಧನೆ ಹನಿಕಾರಾಧನೆ ನೆರವೇರಿತು. ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ಲಲಿತ ಅಂಬಿಕೆಯಾಗಿ ಗಿಳಿ ಹಸಿರು ಬಣ್ಣದ ಸೀರೆಯನ್ನುಟ್ಟು ಕಬ್ಬಿನ ಜಲ್ಲೆಯ ಮಧ್ಯದಲ್ಲಿ ಎದ್ದು ಬರುವಂತೆ ಲಲಿತಾಂಬಿಕೆಯಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ವಿವಿಧ ನೃತ್ಯ ತಂಡದ ನೃತ್ಯಾರ್ಥಿಗಳಿಂದ ಸಮರ್ಥಿಸಲ್ಪಟ್ಟಿತು.

ಶ್ರೀ ಮಾತಾ ಭಜನಾ ಮಂಡಳಿ ಡಾ. ಅರವಿಂದ ಹೆಬ್ಬಾರ್ ಸಮನ್ವಿ ಅರ್ಚನಾ ಭಕ್ತಿ ಸಂಗೀತ ಕಾರ್ಯಕ್ರಮ ನೀಡಿದರು ಕಾಲಭೈರವ ನೃತ್ಯ ತಂಡ ಮತ್ತು ವಿದುಷಿ ಶ್ರಾವ್ಯ ಕುಮಾರಿ ಅವರಿಂದ ನೃತ್ಯ ವೈವಿಧ್ಯ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೂಡಿ ಬಂತು.ಮಧ್ಯಾಹ್ನ ಹಾಗೂ ರಾತ್ರಿ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ದುರ್ಗಾ ನಮಸ್ಕಾರ ಪೂಜೆ ರಂಗ ಪೂಜೆ ಶ್ರೀ ದಿನೇಶ್ ರತ್ನ ಉದ್ಯಾವರ ದಂಪತಿಗಳು ಹಾಗೂ ಅಕ್ಷತಾ ರತಿಶ ಶೆಟ್ಟಿ, ಮುಂಬೈ ಇವರ ಪರವಾಗಿ ಸಮರ್ಪಿಸಲ್ಪಟ್ಟಿತು. ಸಹಸ್ರ ಕದಳಿಯಾಗದಲ್ಲಿ ನಿರೀಕ್ಷೆಗೂ ಮೀರಿದ ಭಕ್ತರುಗಳು ಪಾಲ್ಗೊಂಡರು ಯಾಗ ಅಭೂತಪೂರ್ವ ಯಶಸ್ಸನ್ನು ಕಂಡಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.

ಬ್ರಹ್ಮಾಂಡ ಪುರಾಣದ ಉತ್ತರಖಂಡದಲ್ಲಿ ಶ್ರೀ ಹಯಗ್ರೀವರು ಅಗಸ್ತ್ಯ ಋಷಿಯೊಂದಿಗೆ ನಡೆಸಿದ ಸಂವಾದವೇ ಶ್ರೀ ಲಲಿತಾ ಸಹಸ್ರನಾಮ. ಅತ್ಯಂತ ನಿಗೂಢವಾದ ಲಲಿತಾಂಬಿಕೆಗೆ ಈ ಮಂತ್ರವು ಅಕ್ಕರೆಯುಳ್ಳದ್ದಾಗಿದೆ. ಈ ಮಂತ್ರ ರಹಸ್ಯಾತ್ಮಕವಾದದ್ದು ಆದ್ದರಿಂದ ಇದಕ್ಕೆ ಸದೃಶವಾದ ಮಂತ್ರ ಹಿಂದೆಯೂ ಇರಲಿಲ್ಲ ಮುಂದೆಯೂ ಇರಲು ಸಾಧ್ಯವಿಲ್ಲ.. ಜೀವಿತಕಾಲದಲ್ಲಿ ಒಮ್ಮೆಯಾದರೂ ಲಲಿತಾರಾಧನೆ ಮಾಡಿದರೆ ಅದರ ಪುಣ್ಯ ವಿವರಿಸಲು ಶಿವನಿಂದಲೂ ಸಾಧ್ಯವಿಲ್ಲ. ಅಂತಹ ಪುಣ್ಯಪ್ರದವಾದ ಲಲಿತಾಂಬಿಕೆ ಮಂಗಳಕರವಾದ ಫಲವನ್ನು ನೀಡುವವಳು.
ಶ್ರೀ ಕ್ಷೇತ್ರದಲ್ಲಿ ನಿರಂತರವಾಗಿ ಯಾಗ ಸಂಪನ್ನಗೊಳ್ಳುತ್ತಿದ್ದು ಶಕ್ತಿ ಕ್ಷೇತ್ರದಲ್ಲಿ ಮಿನಿ ಶ್ರೇಷ್ಠರಿಂದ ಶ್ರೀ ಚಕ್ರ ಆರಾಧನೆ ನೆರವೇರುತ್ತಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಯಾಗದಲ್ಲಿ ಪಾಲ್ಗೊಂಡ ಎಲ್ಲರಿಗೂ ಒಳ್ಳೆಯದಾಗಲಿ.
-ಶ್ರೀ ರಮಾನಂದ ಗುರೂಜಿ, ಧರ್ಮದರ್ಶಿ

ಟಾಪ್ ನ್ಯೂಸ್

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.