ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ: ವಿಜಯ ಕುಮಾರ್
Team Udayavani, Jan 2, 2018, 7:00 AM IST
ಕುಂದಾಪುರ: ಸೆಕ್ಯುಲರ್ ವ್ಯವಸ್ಥೆಯಿಂದಾಗಿ ರಾಜ್ಯದ 27,000 ದೇವಸ್ಥಾನಗಳು ಮುಜರಾಯಿ ಇಲಾಖೆ ಆಡಳಿತಕ್ಕೆ ಒಳಪಟ್ಟಿದೆ. ನಾವು ಶ್ರದ್ಧೆಯಿಂದ ಹುಂಡಿಗೆ ಹಾಕಿದ 826 ಕೋ. ರೂ. ಹಜ್ ಯಾತ್ರೆ, ಮಸೀದಿಗೆ ಕೊಡುತ್ತಾರೆ. ನಾವೆಲ್ಲ ಒಗ್ಗಟ್ಟಾಗಿ ಇದನ್ನು ಮಟ್ಟಹಾಕುವ ಮೂಲಕ 2023ರ ವೇಳೆಗೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ ಎಂದು ಸನಾತನ ಸಂಸ್ಥೆಯ ವಿಜಯ ಕುಮಾರ್ ಹೇಳಿದರು.
ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮುದೂರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಹಿಂದೂ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಹಿಂದೂ ಜನಜಾಗೃತಿ ಸಮಿತಿ ದೇಶದಾದ್ಯಂತ 1,400 ಕ್ಕೂ ಅಧಿಕ ಧರ್ಮ ಜಾಗೃತಿ ಸಭೆ ನಡೆಸಿ, 14,60,000 ಮಂದಿಯನ್ನು ಸ್ವಾಭಿಮಾನದಿಂದ ಧರ್ಮಾಚರಣೆ ಮಾಡಿ ಜೀವಿಸಲು ಪ್ರೇರೇಪಿಸಿದೆ ಎಂದರು.
ಸನಾತನ ಸಂಸ್ಥೆಯ ಶೋಭಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಮೆಕಾಲೆ ಶಿಕ್ಷಣ ಪದ್ದತಿಯಿಂದ ನಮ್ಮ ಗುರುಕುಲ ಪದ್ದತಿ ಮರೆತು ಧರ್ಮಾಚರಣೆಯಿಂದ ವಿಮುಖರಾಗಿದ್ದೇವೆ. ನಮ್ಮ ಪೂರ್ವಜರ ಆಚರಣೆಗಳಿಂದ ಆರೋಗ್ಯ, ಮಾನಸಿಕ ಹಾಗೂ ಶಾರೀರಿಕ ಕ್ಷಮತೆ ಹೆಚ್ಚುತಿತ್ತು. ಈ ನಿಟ್ಟಿನಲ್ಲಿ ನಾವೆಲ್ಲ ಧರ್ಮದ ಪ್ರತಿಯೊಂದೂ ಆಚರಣೆಗಳನ್ನು ಅರಿತು, ಪಾಲಿಸಬೇಕಿದೆ ಎಂದರು.
ಶಿವಾಜಿ ಮಹಾರಾಜರಂತೆ ಕುಲದೇವರ ನಾಮಜಪ ಮಾಡುತ್ತಾ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಭಾಗಿಯಾಗುವುದು ಇಂದಿನ ಅಗತ್ಯ ಎಂದು ಸನಾತನ ಸಂಸ್ಥೆಯ ಶ್ರೀಕಲಾ ಜೋಷಿ ಹೇಳಿದರು. ವಿಶ್ವನಾಥ್ ನಾಯಕ್ ಪ್ರಾಸ್ತವಿಕವಾಗಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.