ಜು. 22: ಪುತ್ತಿಗೆ ಶ್ರೀಗಳಿಗೆ ನಾಗರಿಕ ಅಭಿನಂದನೆ, ಸಮ್ಮಾನ
Team Udayavani, Jul 18, 2017, 3:45 AM IST
ಅಮೆರಿಕದಲ್ಲಿ ಶ್ರೀಕೃಷ್ಣನ ದೇವಾಲಯ ಸ್ಥಾಪನೆ
ಉಡುಪಿ: ಪೊಡವಿ ಗೊಡೆಯ ಉಡುಪಿಯ ಶ್ರೀಕೃಷ್ಣನ ಪ್ರತಿಮೆಯನ್ನು ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಿಸಿ ಅಮೆರಿಕದ ನ್ಯೂಜೆರ್ಸಿಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಉಡುಪಿ ನಾಗರಿಕರ ಅಭಿನಂದನೆ, ಅದ್ದೂರಿ ಸಮ್ಮಾನ ಕಾರ್ಯಕ್ರಮವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜು. 22ರಂದು ನಡೆಯಲಿದೆ ಎಂದು ಪುತ್ತಿಗೆ ಶ್ರೀಗಳ ಅಭಿನಂದನಾ ಸಮಿತಿಯ ಕಾರ್ಯ ದರ್ಶಿ ಶ್ರೀಕೃಷ್ಣ ರಾವ್ ಕೊಡಂಚ ಅವರು ಸೋಮವಾರ ಪುತ್ತಿಗೆ ಮಠ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜು. 22ರ ಸಂಜೆ 4 ಗಂಟೆಗೆ ಉಡುಪಿಯ ಜೋಡುಕಟ್ಟೆಯಿಂದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಶೋಭಾಯಾತ್ರೆಯಲ್ಲಿ ವಾಹನ ಜಾಥದೊಂದಿಗೆ ಕೋರ್ಟ್ ರಸ್ತೆ- ಡಯಾನಾ ವೃತ್ತ – ಕೆ.ಎಂ. ಮಾರ್ಗ- ಮುಖ್ಯ ಅಂಚೆ ಕಚೇರಿ- ಕನಕದಾಸ ಮಾರ್ಗವಾಗಿ ರಥಬೀದಿಗೆ ಕರೆತರಲಾಗುವುದು. 5 ಗಂಟೆಗೆ ರಾಜಾಂಗಣದಲ್ಲಿ ನಾಗರಿಕ ಅಭಿನಂದನಾ ಸಮ್ಮಾನ ಕಾರ್ಯಕ್ರಮ ನಡೆಯಲಿದೆ.
ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಲಿದ್ದು, ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಬೆಂಗಳೂರು ಶ್ರೀ ಬೇಲಿಮಠದ ಡಾ| ಶ್ರೀ ಶಿವರುದ್ರ ಸ್ವಾಮೀಜಿ ಆಶೀ ರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಶುಭಾ ಶಂಸನೆಗೈಯಲಿದ್ದಾರೆ. ಸಚಿವರು, ಶಾಸಕರು, ಗಣ್ಯರು ಉಪಸ್ಥಿತರಿರುವರು ಎಂದವರು ಹೇಳಿದರು.
ಸಮಿತಿಯ ಉಪಾಧ್ಯಕ್ಷರಾದ ಡಾ|ದೇವಿಪ್ರಸಾದ್ ಶೆಟ್ಟಿ ಬೆಳಪು, ಗುರ್ಮೆ ಸುರೇಶ್ ಶೆಟ್ಟಿ, ಜತೆ ಕಾರ್ಯದರ್ಶಿ ಗಳಾದ ಶ್ರೀಕಾಂತ ಉಪಾಧ್ಯಾಯ, ನಾಗರಾಜ ಉಪಾಧ್ಯಾಯ, ಬೈಕಾಡಿ ಸುಪ್ರಸಾದ ಶೆಟ್ಟಿ, ಸದಸ್ಯರಾದ ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ, ಕೆ. ಕೃಷ್ಣರಾಜ ಸರಳಾಯ,ಸುಂದರ್ ರಾವ್, ಸಂತೋಷ್ ಶೆಟ್ಟಿ ತೆಂಕರಗುತ್ತು, ಡಾ| ರವಿ ಉಚ್ಚಿಲ, ಪುತ್ತಿಗೆ ಮಠದ ದಿವಾನ ಗೋಪಾಲಾಚಾರ್ಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.