ಕೃಷಿ ಸೌಲಭ್ಯಕ್ಕಾಗಿ ಕೆ-ಕಿಸಾನ್ ನೋಂದಣಿ ಕಡ್ಡಾಯ
ಒಮ್ಮೆ ನೋಂದಾಯಿಸಿದರೆ ಮತ್ತೆ ದಾಖಲೆ ಬೇಕಿಲ್ಲ; ಪುನರಪಿ ಸೌಲಭ್ಯ ಪಡೆಯುವಂತಿಲ್ಲ
Team Udayavani, May 28, 2019, 6:13 AM IST
ಕೋಟ: ರಾಜ್ಯದ ರೈತರು ಕೃಷಿ ಇಲಾಖೆಯ ಸೌಲಭ್ಯಗಳನ್ನು ಪಡೆಯುವುದಕ್ಕೆ ಕೆ-ಕಿಸಾನ್ ತಂತ್ರಾಂಶ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವುದನ್ನು ಈ ಮುಂಗಾರಿನಿಂದ ಕಡ್ಡಾಯಗೊಳಿಸಿದೆ. ಯೋಜನೆಪಾರದರ್ಶಕವಾಗಿ ರೈತರ ಕೈಸೇರುವುದು ಇದರ ಉದ್ದೇಶ.
ಪದೇಪದೇ ದಾಖಲೆ ನೀಡುವುದರಿಂದ ಮುಕ್ತಿ, ಇಲಾಖೆಯಸೌಲಭ್ಯವಿತರಣೆಯಲ್ಲಿ ತಾರತಮ್ಯ ನಿವಾರಣೆ, ದುರ್ಬಳಕೆ ತಡೆ ಇದರಿಂದ ಸಾಧ್ಯವಾಗಲಿದೆ. ಹಾಗೆಂದು ಇದು ಹೊಸದಲ್ಲ. ಸಮಗ್ರ ರೈತ ಮಾಹಿತಿ ಸಂಗ್ರಹವನ್ನೊಳಗೊಂಡ ಈ ತಂತ್ರಾಂಶ ಯೋಜನೆಯನ್ನು ಇಲಾಖೆ ನಾಲ್ಕೈದು ವರ್ಷಗಳ ಹಿಂದೆಜಾರಿಗೊಳಿಸಿತ್ತು. ಆದರೆ ಸಮರ್ಪಕವಾಗಿ ಜಾರಿಗೊಂಡಿರಲಿಲ್ಲ.
ಏನಿದು ಕೆ-ಕಿಸಾನ್?
ಕರ್ನಾಟಕ ಕೃಷಿ ಮಾಹಿತಿ ಮತ್ತು ಅಂತರ್ಜಾಲ ತಾಣ ಯೋಜನೆ (ಕೆ-ಕಿಸಾನ್) ಯಡಿ ತಂತ್ರಾಂಶ ರೂಪುಗೊಳಿಸಲಾಗಿದೆ. ಇದರಲ್ಲಿ ರೈತ ಕುಟುಂಬದ ಸದಸ್ಯರ ಹೆಸರು, ಬೆಳೆಮಾಹಿತಿ, ಭೂಮಿ, ಆಧಾರ್ ನಂಬರ್,ಬ್ಯಾಂಕ್ ಖಾತೆ ಸಂಖ್ಯೆ, ಮಣ್ಣಿನ ಗುಣಮಟ್ಟ ಮುಂತಾದ ಮಾಹಿತಿ ಕಲೆ ಹಾಕಿ ಅಪ್‌ಲೋಡ್ ಮಾಡಲಾಗುತ್ತದೆ. ಅದರ ಆಧಾರದ ಮೇಲೆ ಪ್ರತಿ ರೈತನಹೆಸರಿಗೆ ಒಂದು ಯುನೀಕ್ ಐಡಿ ಕಾರ್ಡ್ ಕೊಡಲಾಗುತ್ತದೆ. ಕೃಷಿ ಇಲಾಖೆಯ ಯಾವುದೇ ಸೌಲಭ್ಯಗಳನ್ನು ಪಡೆಯಲು ಈ ಕಾರ್ಡ್ ಅಗತ್ಯ.
ನೋಂದಣಿ ಹೀಗೆ
ಜಮೀನಿನ ಆರ್‌ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಖಾತೆದಾರನ ಫೋಟೋ ಇವಿಷ್ಟನ್ನು ರೈತಸಂಪರ್ಕ ಕೇಂದ್ರಕ್ಕೆ ನೀಡಿ ಕೆ-ಕಿಸಾನ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬಹುದು. ಪ. ಜಾತಿ ಮತ್ತು ಪ.ಪಂಗಡದವರಿಗೆ ಜಾತಿ ಪ್ರಮಾಣ ಪತ್ರ ಅಗತ್ಯ.
ಪ್ರಯೋಜನವೇನು?
ಒಮ್ಮೆ ನೋಂದಾಯಿಸಿಕೊಂಡರೆ ವಿವಿಧ ಯೋಜನೆಗಳಿಗೆ ರೈತರು ಪದೇಪದೇ ದಾಖಲೆ ಕೊಡುವ ಅಗತ್ಯವಿಲ್ಲ. ಆಧಾರ್ ಅಥವಾ ಯುನೀಕ್ ಐಡಿ ನಮೂದಿಸಿದರೆ ಸಾಕು. ಇದರಿಂದ ತಾರತಮ್ಯ, ದುರ್ಬಳಕೆ ತಡೆಯಬಹುದು.
ಸ್ಥಳದಲ್ಲೇ ನೋಂದಣಿ
ನೋಂದಣಿ ಕಡ್ಡಾಯವಾಗಿದ್ದು, ಮುಂಗಾರು ಕೃಷಿ ಸಲಕರಣೆಗಳನ್ನು ಖರೀದಿಸುವ ರೈತರಿಗೆ ಸಮಸ್ಯೆ ಆಗಬಾರದು ಎಂದು ಕೃಷಿಕೇಂದ್ರಕ್ಕೆ ಆಗಮಿಸುವ ಸಂದರ್ಭದಲ್ಲೇ ದಾಖಲೆನೀಡಿದರೆ ನೋಂದಣಿ ವ್ಯವಸ್ಥೆ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.