ಕೈತಪ್ಪಿದ ತಾಲೂಕು: ಹೆಬ್ರಿ ಬಂದ್, ರಸ್ತೆ ತಡೆ ಪ್ರತಿಭಟನೆ
Team Udayavani, Mar 18, 2017, 1:10 PM IST
ಹೆಬ್ರಿ: ಬಹುಕಾಲದ ಬೇಡಿಕೆಯಾಗಿರುವ ಹೆಬ್ರಿ ತಾಲೂಕು ಘೋಷಣೆಯನ್ನು ಈ ಬಾರಿಯ ಬಜೆಟ್‌ನಲ್ಲೂ ಘೋಷಿಸದಿರುವುದನ್ನು ಖಂಡಿಸಿ ಶುಕ್ರವಾರ ಹೆಬ್ರಿ ತಾಲೂಕು ಹೋರಾಟ ಸಮಿತಿ, ಬಿಜೆಪಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಹೆಬ್ರಿ ಬಂದ್, ರಸ್ತೆತಡೆ ಮೂಲಕ ಪ್ರತಿಭಟಿಸಲಾಯಿತು.
ಬಳಿಕ ಹೆಬ್ರಿ ಬಸ್ ತಂಗುದಾಣದಲ್ಲಿ ಪ್ರತಿಭಟನ ಸಭೆ ನಡೆಯಿತು. ಹೋರಾಟಗಾರ ಕಾರ್ಕಳ ಎಪಿಎಂಸಿ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿಮಾತನಾಡಿ, ಗ್ರಾಮೀಣ ಪ್ರದೇಶ ಹಾಗೂ ಭೌಗೋಳಿಕವಾಗಿ ಅರ್ಹತೆಯಿರುವ ಹೆಬ್ರಿಯನ್ನು ತಾಲೂಕು ಮಾಡಿ ಎಂದು 57 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರಕಾರ ನಿರ್ಲಕ್ಷ್ಯ ತೋರಿರುವುದು ತೀರ ಖಂಡನೀಯ. ಹೆಬ್ರಿ ತಾಲೂಕು ಮಾಡುವ ವರೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಹೆಬ್ರಿಯ ಪ್ರಮುಖ ಬೀದಿಗಳಲ್ಲಿ ಪ್ರತಿಭಟನ ಮೆರವಣಿಗೆ ನಡೆಯಿತು. ವ್ಯಾಪಾರಿಗಳು ಸುಮಾರು 2 ಗಂಟೆ ಕಾಲ ಅಂಗಡಿಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲ ನೀಡಿದರು.ಉಡುಪಿಗೆ ಸಮೀಪದ ಕಾಪುವನ್ನು ತಾಲೂಕು ಮಾಡಿರುವುದು ಖಂಡನೀಯ. ಕೇವಲ ಕೆಲವೇ ವ್ಯಕ್ತಿಗಳ ಸ್ವಯಂಪ್ರತಿಷ್ಠೆಗೋಸ್ಕರ ಕಾಪುವನ್ನು ತಾಲೂಕಾಗಿ ಘೋಷಣೆ ಮಾಡಲಾಗಿದೆ ಎಂದು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸರ್ ಅಹಮದ್ ಹೇಳಿದರು. ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಭಾಸ್ಕರ್ ಜೋಯಿಸ್ ಮಾತನಾಡಿದರು.
ಹೆಬ್ರಿ ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ, ತಾ.ಪಂ. ಸದಸ್ಯಧಿರಾದ ಅಮೃತ ಕುಮಾರ್ ಶೆಟ್ಟಿ, ಚಂದ್ರಧಿಶೇಖರ ಶೆಟ್ಟಿ, ರಮೇಶ್ ಕುಮಾರ್, ಪ್ರಸನ್ನ ಶೆಟ್ಟಿ, ಹೋರಾಟ ಸಮಿತಿ ಸದಸ್ಯ ನವೀನ್ ಅಡ್ಯಂತಾಯ, ಸುರೇಂದ್ರ ಶೆಟ್ಟಿ, ಲಕ್ಷ್ಮೀ ದಯಾನಂದ, ನಂದಕುಮಾರ್ ಹೆಗ್ಡೆ, ಸಮೃದ್ಧಿ ಪ್ರಕಾಶ್ ಶೆಟ್ಟಿ, ಗಣೇಶ ಜರ್ವತ್ತು, ಡಿ.ಜಿ. ರಾಘವೇಂದ್ರ, ಶ್ರೀಕರ ಭಾರಧ್ವಾಜ್ ಕಬ್ಬಿನಾಲೆ, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ
ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ
ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ
ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.