ಕಲ್ಯಾ: ಅಭಿವೃದ್ಧಿ ಕಾಣದ ಮಲ್ಲಯಬೆಟ್ಟು ರಸ್ತೆ
Team Udayavani, Jul 11, 2019, 5:09 AM IST
ಪಳ್ಳಿ: ಕಲ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಯಬೆಟ್ಟು ಸಂಪರ್ಕಿಸುವ ರಸ್ತೆಯ ಸುಮಾರು 400 ಮೀ. ರಸ್ತೆ ಡಾಮರು ಕಾಣದೆ ಸಂಚಾರಕ್ಕೆ ಕಷ್ಟವಾಗಿದೆ.
ಕಲ್ಯಾ ಮಲ್ಲಯಬೆಟ್ಟು ಕುಂಟಾಡಿ ಸಂಪರ್ಕ ರಸ್ತೆ ಅವಿಭಜಿತ ಪಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಂದರ್ಭ 8 ವರ್ಷಗಳ ಹಿಂದೆ ಡಾಮರೀಕರಣಗೊಂಡಿತ್ತು. ಒಟ್ಟು 4.56 ಕಿಮೀ ಉದ್ದವನ್ನು ಹೊಂದಿದ್ದು, ರೂ. 1.54 ಕೋಟಿ ವೆಚ್ಚದಲ್ಲಿ ಡಾಮರು ಕಂಡಿತ್ತು. ಆದರೆ ಮಧ್ಯೆ ಸುಮಾರು 400 ಮೀ. ವ್ಯಾಪ್ತಿಯಲ್ಲಿ ಡಾಮರು ಹಾಕಲು ಅರಣ್ಯ ಇಲಾಖೆ ಅಡ್ಡಿಯಾಗಿತ್ತು. ಆ ಸಂದರ್ಭ ಪಂಚಾಯತ್ ಅಧ್ಯಕ್ಷರು ಕಾಮಗಾರಿ ನಡೆಸಲು ಅರಣ್ಯ ಇಲಾಖೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಅದರಂತೆ ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ನಿರ್ಣಯ ಕೈಗೊಂಡು ಅದರ ಪ್ರತಿಯನ್ನು ಅರಣ್ಯಾಧಿಕಾರಿಗಳಿಗೆ ನೀಡಲಾಗಿತ್ತು. ಆದರೆ ಆ ಬಳಿಕ ಇಲಾಖೆ ಯಾವುದೇ ಕ್ರಮ ಕೈಗೊ ಂಡಿಲ್ಲ.
ಗ್ರಾಮ ಸಭೆಯಲ್ಲಿ ಪ್ರಸ್ತಾಪ
ಪಳ್ಳಿ ಪಂಚಾಯತ್ನಿಂದ ಕಲ್ಯಾ ಬೇರ್ಪಡೆಗೊಂಡು ಹೊಸ ಪಂಚಾಯತ್ ಆದ ಬಳಿಕ ಪ್ರತಿ ಗ್ರಾಮಸಭೆಯಲ್ಲಿ ರಸ್ತೆ ಅಭಿವೃದ್ಧಿ ವಿಚಾರ ಪ್ರಸ್ತಾವವಾಗುತ್ತಲೇ ಇತ್ತು. ನಿರ್ಣಯ ಕೂಡ ಕೈಗೊಂಡು ಅರಣ್ಯ ಇಲಾಖೆಗೆ ಸಲ್ಲಿಸಲಾಗಿತ್ತು. ಇತ್ತೀಚೆಗೆ ಅದು ಅಭಿವೃದ್ಧಿಗೊಳ್ಳದ ರಸ್ತೆಗಳ ಬಗ್ಗೆ ಆನ್ಲೈನ್ನಲ್ಲಿ ನೋಂದಾಯಿಸುವಂತೆ ಇಲಾಖೆ ಸೂಚಿಸಿತ್ತು.
ಘನ ವಾಹನ ಸಂಚಾರ
ಈ ರಸ್ತೆಯ ಮೂಲಕ ಕಲ್ಲಿನ ಕೋರೆಗಳ ಲಾರಿಗಳು ಸಂಚರಿಸುತ್ತಿದ್ದು, ಸುರಕ್ಷತೆ ನಿಯಮಗಳನ್ನು ಹೊಂದಿಲ್ಲ ದಿರುವುದು ಜನರಿಗೆ ಭೀತಿ ಉಂಟುಮಾಡಿದೆ. ವಾಹನ ಸಂಚಾರ ಬಗ್ಗೆ ನಿಷೇಧ ಫಲಕ ಅಳವಡಿಸಲಾಗಿದ್ದರೂ ಸಂಚಾರ ನಿಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.