ದಶಕದ ರವಿವಾರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ
ಕಲ್ಯಾಣಪುರ ಹೊಸ ಮಾರುಕಟ್ಟೆ ಯಲ್ಲಿ ವ್ಯಾಪಾರ ಪ್ರಾರಂಭ
Team Udayavani, Jan 4, 2021, 1:22 PM IST
ಉಡುಪಿ, ಜ. 3: ಗೋಪಾಲಪುರ ವಾರ್ಡ್ನಲ್ಲಿ ನಿರ್ಮಾಣಗೊಂಡ ಕಲ್ಯಾಣಪುರದ ನೂತನ ಮಾರುಕಟ್ಟೆಯಲ್ಲಿ ರವಿವಾರ ಸಂತೆ ನಡೆಯಿತು. ಮಾರುಕಟ್ಟೆಯಲ್ಲಿ ಸುಮಾರು 150ಕ್ಕೂ ಅಧಿಕ ವ್ಯಾಪಾರಿಗಳು ಹಣ್ಣು, ತರಕಾರಿ, ಒಣ ಮೆಣಸು ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡಿದರು. ಬೆಳಗ್ಗೆ 5ರಿಂದ ಪ್ರಾರಂಭವಾದ ಸಂತೆ 12 ಗಂಟೆವರೆಗೂ ಗ್ರಾಹಕರು ವಸ್ತುಗಳ ಖರೀದಿಗೆ ಬರುತ್ತಿದ್ದರು. ಹಳೆ ಮಾರುಕಟ್ಟೆಯಲ್ಲಿ ಹಸಿ ಹಾಗೂ ಒಣ ಮೀನು ಮಾರಾಟಗಾರರು ವ್ಯಾಪಾರ ಮಾಡುತ್ತಿದ್ದಾರೆ.
ಹಳೆ ಸಮಸ್ಯೆಗೆ ಮುಕ್ತಿ :
ಹಳೆ ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಕೊರತೆ ಯಿದ್ದ ಹಿನ್ನೆಲೆ ವ್ಯಾಪಾರಸ್ಥರು ರಾ.ಹೆ. ಸರ್ವಿಸ್ ರಸ್ತೆಯ ಎರಡೂ ಬದಿಗಳಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುವುದರಿಂದ ಗ್ರಾಹಕರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ವಸ್ತುಗಳನ್ನು ಖರೀದಿಸುತ್ತಿದ್ದರು. ಇದರಿಂದ ರಾ.ಹೆ.ಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ತೀರ ಗೊಂದಲವಾಗುತ್ತಿತ್ತು. ಇದರಿಂದ ಪ್ರತಿ ರವಿವಾರ ಜಂಕ್ಷನ್ನಲ್ಲಿ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆ ಇರುತ್ತಿತ್ತು. ಇದೀಗ ಮಾರುಕಟ್ಟೆಯನ್ನು ಬೇರೆಡೆಗೆ ವರ್ಗಾಯಿ ಸಿರುವುದರಿಂದ ಈ ಸಮಸ್ಯೆಗೆ ಮುಕ್ತಿ ದೊರೆತಂತಾಗಿದೆ.
ಮೀನುಗಾರರಿಗೆ ಸಮಸ್ಯೆ :
ಸಂತೆಗೆ ಹೋದವರು ರಸ್ತೆದಾಟಿ ಬಂದು ಮೀನು ಖರೀದಿಸಲು ಬರುತ್ತಿಲ್ಲ ಎನ್ನುವ ಗೋಳು ಇಲ್ಲಿನ ಮಹಿಳೆಯರದು. ಹೇಗಾದರೂ ಮಾಡಿ ಮೀನು ಮಾರಾಟಗಾರರಿಗೆ ಸಮೀಪದ ಸ್ಥಳದಲ್ಲಿ ವ್ಯಾಪಾರಕ್ಕೆ ಅನುವು ಮಾಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.
ಒಳರಸ್ತೆ-ಟ್ರಾಫಿಕ್ ಸಮಸ್ಯೆ : ಜಂಕ್ಷನ್ ಟ್ರಾಫಿಕ್ ಸಮಸ್ಯೆಗೆ ಈಗ ಮುಕ್ತಿ ಸಿಕ್ಕಿದೆ. ಆದರೆ ಸಂತೆಕಟ್ಟೆಯಿಂದಮಿಲಾಗ್ರಿಸ್ ಸೇರಿದಂತೆ ಇತರ ಕಡೆಗಳಿಗೆ ತೆರಳುವ ಮಾರ್ಗದಲ್ಲಿ ಟ್ರಾμಕ್ಜಾಮ್ ಉಂಟಾಗಿದೆ. ರಸ್ತೆಯ ಉದ್ದಕ್ಕೂ ವಾಹನಗಳನ್ನು ಪಾರ್ಕ್ ಮಾಡ ಲಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ವಾಹನ ಸವಾರರ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.
12.50 ಲ.ರೂ. ಆದಾಯ : ಪ್ರತೀ ವಾರ ಕಲ್ಯಾಣಪುರ ಸಂತೆಗೆಬರುವ ವ್ಯಾಪಾರಿಗಳಿಂದ 100 ರೂ.ವರೆಗೆ ಸುಂಕ ಪಡೆಯಲಾಗುತ್ತದೆ.ಇಲ್ಲಿ ಸಂಗ್ರಹವಾಗುವ ಹಣದಿಂದನಗರಸಭೆಗೆ ಪ್ರತಿವರ್ಷ 12.50ವರೆಗೆ ಆದಾಯ ಸಲ್ಲಿಕೆಯಾಗುತ್ತದೆ.ಇದರ ಉಸ್ತುವಾರಿಯನ್ನು ತಿಮ್ಮಪ್ಪಶೆಟ್ಟಿ ವಹಿಸಿಕೊಂಡಿದ್ದಾರೆ. ಈ ಹಿಂದೆ6.50 ಲ.ರೂ. ಸುಂಕ ನಗರಸಭೆಗೆ ಪಾವತಿಯಾಗುತ್ತಿತ್ತು.
ಕಳೆದ 10 ವರ್ಷದಿಂದ ಸಂತೆಕಟ್ಟೆಗೆ ಮನೆಯಲ್ಲಿ ಬೆಳೆದಿರುವ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಿದ್ದೇನೆ. ಹೊಸ ಮಾರುಕಟ್ಟೆಯಲ್ಲಿ ಉತ್ತಮ ವ್ಯವಸ್ಥೆ ನೀಡಿದ್ದಾರೆ. ಜನರು ಮುಂಜಾನೆಯಿಂದಲೇ ಬಂದು ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಳೆ ಬಂದರೂ ಇನ್ನು ಯಾವುದೇ ಸಮಸ್ಯೆ ಇಲ್ಲ.-ಗೋಪಾಲ ನಾಯಕ್, ಕರ್ಜೆ ಬ್ರಹ್ಮಾವರ.
ಕಳೆದ 30 ವರ್ಷದಿಂದ ಕಲ್ಯಾಣಪುರದ ರವಿವಾರದ ಸಂತೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದೇನೆ. ಇದೀಗ ಹೊಸ ಮಾರುಕಟ್ಟೆಗೆ ಎಲ್ಲ ವರ್ಗಾವಣೆಗೊಂಡಿರುವುದರಿಂದ ಜನರು ರಸ್ತೆ ದಾಟಿ ಬಂದು ಇಲ್ಲಿ ಮೀನು ಖರೀದಿಸುತ್ತಿಲ್ಲ. ಇಂದು ತಂದ ಮೀನು ಎಲ್ಲವೂ ಮಾರಾಟವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. -ಶಾಂತಾ, ಮೀನು ಮಾರಾಟ ಮಹಿಳೆ, ಸಂತೆಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.