ಅಭಿವೃದ್ಧಿಗಾಗಿ ಕಾಯುತ್ತಿದೆ ಕಲ್ಯಾಣಪುರದ ಐತಿಹಾಸಿಕ ಅಗಸನಕರೆ 


Team Udayavani, Jun 1, 2017, 2:23 PM IST

2805mle2.jpg

ಮಲ್ಪೆ:  ಇದೀಗ ಎಲ್ಲೆಡೆ ಕುಡಿಯುವ ನೀರಿನ ಬರ, ಅದೆಷ್ಟೋ ಕೆರೆಗಳು ಬತ್ತಿ ಬಿರುಕು ಬಿಟ್ಟಿವೆ. ಆದರೆ ಕಲ್ಯಾಣಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಅಗಸನ ಕೆರೆಯಲ್ಲಿ ಮಾತ್ರ ಮಳೆ ಬರಲಿ ಬಾರದೇ ಇರಲಿ ಸದಾ ಜೀವ ಸೆಲೆಯಾಗಿಯೇ ಇರುತ್ತದೆ.

ನೀರು ಮಲಿನಗೊಂಡಿದೆ
ಸುಮಾರು 500ರಿಂದ 600 ವರ್ಷಗಳ ಹಿಂದಿನ ಐತಿಹಾಸಿಕ ಅಗಸನ ಕೆರೆ ಸರಿಯಾದ ನಿರ್ವಹಣೆಯಿಲ್ಲದೆ ಇಂದು ತ್ಯಾಜ್ಯಗಳಿಂದ ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ. ಸುತ್ತಮುತ್ತಲ ವಸತಿ ಪ್ರದೇಶದ, ಚರಂಡಿ ಕೊಳಚೆ ನೀರು ನೇರ ಬಂದು ಕೆರೆಯನ್ನು ಸೇರುವುದರಿಂದ ಕೆರೆಯ ನೀರು ಮಲಿನಗೊಂಡಿದೆ. ಇದರಿಂದ ಪರಿಸರ ಎಲ್ಲೆಡೆ  ಗಬ್ಬು ವಾಸನೆ ಬರುತ್ತಿದೆ.  ಹಿಂದೆ ಈ ಕೆರೆ ಸುಮಾರು  3.57 ಎಕ್ರೆ ವಿಸ್ತೀರ್ಣದಲ್ಲಿತ್ತು. ಇದೀಗ ಒತ್ತುವರಿವಾಗಿ ಕೆರೆ ಕಿರಿದಾಗುತ್ತಾ ಬಂದಿದೆ. ಹಿಂದೆ ಕುಡಿಯಲು ಯೋಗ್ಯವಾದ ಸುತ್ತಮುತ್ತಲಿನ ಜನರಿಗೆ ಗೃಹ ಬಳಕೆಗೂ ಅನುಕೂಲವಾಗಿತ್ತು. 

ಕೆರೆಯಲ್ಲಿ  ತ್ಯಾಜ್ಯ ರಾಶಿ 
ಈ ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯ ನಡೆದಿಲ್ಲ.  ಹಲವಾರು ವರ್ಷ ಹಿಂದೆ ಹೂಳು ತೆಗೆಯಲಾಗಿದ್ದರೂ  ಹೂಳನ್ನು ಕೆರೆಯ ಸಮೀಪವೇ ಸುರಿದಿದ್ದರಿಂದ ಅದು ಮತ್ತೆ ಕೆರೆಯ ಪಾಲಾಗಿದೆ ಎನ್ನಲಾಗಿದೆ. ಕೆರೆಯ ತೀರದ ಸುತ್ತ ತ್ಯಾಜ್ಯರಾಶಿ ಶೇಖರಣೆಗೊಂಡಿದೆ. ಜತೆಗೆ ಪ್ಲಾಸ್ಟಿಕ್‌, ಕೋಳಿ ತ್ಯಾಜ್ಯ, ಇತರ ತ್ಯಾಜ್ಯಗಳ ದೊಡ್ಡ ದೊಡ್ಡ ಮೂಟೆಗಳು ಕೆರೆಯ ಒಡಲು ಸೇರಿದ್ದು ಕೆರೆ ಪಾತ್ರವೇ ಹಾಳಾಗಿದೆ. ಕೆರೆಯ ಹೆಚ್ಚುವರಿ ನೀರು ತೋಡಿನ ಮೂಲಕ ಹರಿದು ಹೋಗುತ್ತಿರುವುದರಿಂದ ಸಮೀಪದ ಬಾವಿಯ ನೀರು ಹಾಳಾಗುತ್ತಿದೆ. ಕೆಲವರು ಸತ್ತ ನಾಯಿ, ಬೆಕ್ಕುಗಳನ್ನು ಗೋಣಿಚೀಲದಲ್ಲಿ ತಂದು ಇಲ್ಲಿಗೆ ಹಾಕುತ್ತಾರೆ. ರಸ್ತೆಯ ಪಕ್ಕದಲ್ಲೇ ಕೆರೆ ಇರುವುದರಿಂದ ಜನರು ಸುಲಭದಲ್ಲಿ ತ್ಯಾಜ್ಯವನ್ನು ಕೆರೆಗೆ ಎಸೆದು ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಪಂಚಾಯತ್‌ ಕೆರೆಗೆ ತ್ಯಾಜ್ಯ ಎಸೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ರಾತ್ರಿ ವೇಳೆ ಕದ್ದು ಮುಚ್ಚಿ ಎಸೆಯುವವರನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ. 
 
ಏನು ಮಾಡಬೇಕು

ಕೆರೆಯಲ್ಲಿ ತುಂಬಿದ್ದ ಹೂಳನ್ನು ತೆಗೆಯಬೇಕು. ತ್ಯಾಜ್ಯಗಳಿಂದ ಮಲಿನಗೊಂಡ ಕೆರೆಯನ್ನು  ಸ್ವತ್ಛಗೊಳಿಸಬೇಕು. ಕೆರೆ ಸುತ್ತ ದಂಡೆಯನ್ನು ಕಟ್ಟಿ  ಡ್ರೈನೇಜ್‌ ನೀರು ಕೆರೆಗೆ ಹರಿಯದಂತೆ ವ್ಯವಸ್ಥೆ ಮಾಡಬೇಕು. ಮಳೆಯ ನೀರು ಮಾತ್ರ ಕೆರೆಯಲ್ಲಿ ಶೇಖರಣೆಯಾಗ ಬೇಕು.  ನೀರು ಫಿಲ್ಟರ್‌ ಆಗಲು ಮತ್ತು ಹರಿವು ಹೆಚ್ಚಲು ಕೆರೆಯ ಅಡಿಭಾಗದಲ್ಲಿ 2 ಅಡಿಗಳಷ್ಟು  ಕಲ್ಲು ಮಿಶ್ರಿತ ದಪ್ಪ ಮರಳನ್ನು ಸುರಿದರೆ ವರ್ಷಪೂರ್ತಿ ಶುದ್ಧ ನೀರನ್ನು ಪಡೆಯಲು ಸಾಧ್ಯವಿದೆ. ಜತೆಗೆ ಪ್ರವಾಸಿ ತಾಣವನ್ನಾಗಿಯೂ ಅಭಿವೃದ್ಧಿ ಪಡಿಸಬಹುದೆಂಬುದು ನಾಗರಿಕರ ಅಭಿಪ್ರಾಯ. 

ನಿರೀಕ್ಷೆ  
ನೀರಿನ ಶೇಖರಣೆ ಮತ್ತು ಅಂತರ್ಜಲ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಕೆರೆಗಳನ್ನು ಪುನಶ್ಚೇತನಗೊಳಿಸಿ ಅಭಿವೃದ್ದಿ ಪಡಿಸುವಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ದೊಡ್ಡ  ಕ್ರಾಂತಿಯನ್ನು ಮಾಡಿದ್ದು ಜನಜನಿತವಾಗಿದ್ದು ಇಲ್ಲಿನ  ಕೆರೆಯ ಅಭಿವೃದ್ಧಿ ಆಗಬಹುದೆಂಬ ನಿರೀಕ್ಷೆ ಜನರಲ್ಲಿದೆ. 

ವಿದೇಶಿ ಹಕ್ಕಿಗಳ ಕಲರವ
ಹಿಂದೆ ಈ ಕೆರೆಯಲ್ಲಿ ಅಗಸರು ಬಟ್ಟೆ ಒಗೆಯುತ್ತಿದ್ದರಿಂದ ಈ ಕೆರೆಗೆ ಅಗಸನ ಕೆರೆ ಎಂದು ಹೆಸರು ಬಂದಿದೆ ಎನ್ನಲಾಗಿದೆ. ಮಳೆಗಾಲದಲ್ಲಿ ಕೆರೆಯ ಸುತ್ತ ವಿದೇಶಿ ಹಕ್ಕಿಗಳದ್ದೇ ಕಲರವ. ವಿವಿಧ ಬಣ್ಣಗಳ ವಿವಿಧ ಜಾತಿಯ ಹಕ್ಕಿಗಳು ಇಲ್ಲಿ ಕಾಣ ಸಿಗುತ್ತದೆ. ದಿನಬೆಳಗಾದರೆ ಹಕ್ಕಿಗಳು ಮರದ ಮೇಲೆ, ಹರಿವ ನೀರಿಗೆ ಇಳಿದು ಜಲಚರಕ್ಕೆ ಬೇಟೆಯಾಡುತ್ತವೆ.  ಈಗಲೂ ಕೂಡ ಕೆರೆಯಲ್ಲಿ ವಿವಿಧ ಜಾತಿಯ ಹಕ್ಕಿಗಳು ಈಜಾಡುತ್ತಿರುವುದನ್ನು ಕಾಣಬಹುದಾಗಿದೆ. 

ಯಾವಾಗ ಮನೆ ಮನೆಗೆ ನಳ್ಳಿ ನೀರಿನ ಜೋಡಣೆ ವ್ಯವಸ್ಥೆ ಆಯಿತೋ ಅಂದಿನಿಂದಲೇ ಜನರು ಕೆರೆ, ಬಾವಿಗಳ ಮಹತ್ವವನ್ನು ಕಳೆದುಕೊಂಡಿದ್ದಾರೆ. ನಮ್ಮ ಊರಿಗೆ ಇದುವರೆಗೆ ಅಂತಹ ನೀರಿನ ಬರಗಾಲ ಬಂದಿಲ್ಲ. ಹಾಗಾಗಿ ಇಲ್ಲಿನ ಜನರಿಗೆ ನೀರಿನ ಬೆಲೆ ಗೊತ್ತಿಲ್ಲ. ಜಲಕ್ಷಾಮ ಬರಬೇಕು ಆಗ ಮಾತ್ರ ಕಷ್ಟ ಗೊತ್ತಾಗುತ್ತದೆ. 
– ರವಿ ಕಲ್ಯಾಣಪುರ, ಸ್ಥಳೀಯರು

ತನ್ನೂರಿನ ಅಗಸನಕೆರೆಯ ಅಭಿವೃದ್ಧಿ ತನ್ನ ಕನಸಿನ ಯೋಜನೆ.  ಕೆರೆಯ ಸುತ್ತ ವಾಕಿಂಗ್‌ ಟ್ರಾÂಕ್‌, ಪಾರ್ಕ್‌ ನಿರ್ಮಿಸುವ ಯೋಜನೆ ಇದೆ.  ತಾನು ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಆವಧಿಯಲ್ಲಿ ಪ್ರಾಧಿಕಾರದ ವತಿಯಿಂದ ಈ ಕೆರೆ ಅಭಿವೃದ್ಧಿಗೆ 50 ಲಕ್ಷ ರೂ. ಇಟ್ಟಿದ್ದೇನೆ. ಹೆಚ್ಚುವರಿ ಅನುದಾನದ ಅಗತ್ಯವಿತ್ತು. ಕೆಲವೊಂದು ತಾಂತ್ರಿಕ ಕಾರಣದಿಂದ ಹಿನ್ನಡೆಗೊಂಡಿತು. ಯಾವ ಮೂಲಗಳಿಂದ ಅನುದಾನವನ್ನು ತರಿಸಲು ಸಾಧ್ಯವಿದೆಯೋ ಎಂದು  ಸಚಿವರೊಂದಿಗೆ ಚರ್ಚಿಸಿ ಅಭಿವೃದ್ಧಿ ಪಡಿಸುವಲ್ಲಿ ಪ್ರಯತ್ನಿಸಲಾಗುವುದು.
 – ಜನಾರ್ದನ ತೋನ್ಸೆ, ಜಿ.ಪಂ. ಸದಸ್ಯ 

– ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.