ಹೊಂಡಗುಂಡಿಗಳಿಂದ ಕೂಡಿದ ಕಾಂತಾವರ -ಕೆಪ್ಲಾಜೆ ರಸ್ತೆ
Team Udayavani, Jun 23, 2019, 5:10 AM IST
ಬೆಳ್ಮಣ್: ಕಾರ್ಕಳ ತಾಲೂಕಿನ ಕಾಂತಾವರ ಹೈಸ್ಕೂಲಿನಿಂದ ಕೆಪ್ಲಾಜೆ ಮಾರಿಗುಡಿಯಾಗಿ ಕಡಂದಲೆ ಹಾಗೂ ಪಾಲಡ್ಕವನ್ನು ಸಂಪರ್ಕಿಸುವ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆೆ.
ಮನವಿಗಳಿಗೆ ಮನ್ನಣೆ ಇಲ್ಲ
ಈ ರಸ್ತೆ ಹಲವಾರು ವರ್ಷಗಳಿಂದ ನಾದುರಸ್ತಿಯಲ್ಲಿದ್ದು ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರಗಳ ಹೊಂಡಗಳು ನಿರ್ಮಾಣಗೊಂಡಿದ್ದು ಸಣ್ಣಪುಟ್ಟ ವಾಹನಗಳು ಕೂಡ ಓಡಾಟ ನಡೆಸುವುದೇ ಅಸಾಧ್ಯವಾಗಿದೆ. ರಸ್ತೆ ಬಗ್ಗೆ ಪಂಚಾಯತ್‌ನಿಂದ ಹಿಡಿದು ಶಾಸಕರವರೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಈ ಭಾಗದ ಜನ ದೂರಿದ್ದಾರೆ. ಕಾಂತಾವರ ಹೈಸ್ಕೂಲಿನಿಂದ ಸಾಗು ಕೆಪ್ಲಾಜೆ ಮಾರಿಗುಡಿ ವರೆಗಿನ ಸುಮಾರು ಮೂರೂವರೆ ಕಿ.ಮೀ. ಉದ್ದದ ರಸ್ತೆ ತೀರ ಹದಗೆಟ್ಟಿದೆ.
20 ವರ್ಷಗಳ ಹಿಂದೆ ಡಾಮರು ಕಂಡಿತ್ತು
ಈ ಮಾರಿಗುಡಿ ರಸ್ತೆಗೆ ಡಾಮರು ಹಾಕಲ್ಪಟ್ಟು 20 ವರ್ಷಗಳೇ ಕಳೆದಿವೆ. ಬಳಿಕ ಎರಡು ಮೂರು ಬಾರಿ ಬರೀ ತೇಪೆ ಹಾಕಲಾಗಿದೆ. ಕಳೆದ ಹಲವು ವರ್ಷಗಳಿಂದ ತೇಪೆಯೂ ಹಾಕಿಲ್ಲ. ಇದರಿಂದ ಮೂರೂವರೆ ಕಿ.ಮೀ. ಉದ್ದದ ರಸ್ತೆ ಹದಗೆಟ್ಟಿದೆ.
ಪೇಟೆ ತಲುಪಲು ಹತ್ತಿರ
ಕಾಂತಾವರದಿಂದ ಕೆಪ್ಲಾಜೆ ಮಾರಿಗುಡಿ ಮಾರ್ಗವಾಗಿ ಮುಂದೆ ಪಾಲಡ್ಕವಾಗಿ ಮೂಡುಬಿದಿರೆ ಸಾಗಲು ಹಾಗೂ ಕಡಂದಲೆಯಾಗಿ ಸಚ್ಚೇರಿಪೇಟೆ, ಕಿನ್ನಿಗೋಳಿ, ಮೂಲ್ಕಿ ರೈಲು ನಿಲ್ದಾಣ ಮತ್ತು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ಇದು ಹತ್ತಿರದ ರಸ್ತೆಯಾಗಿದೆ.
ಮಳೆಗಾಲದಲ್ಲಿ ಕಾಲುನಡಿಗೆಯಲ್ಲಿ ಸಂಚಾರ ನಡೆಸುವ ಮಂದಿ ಜತೆಯಲ್ಲಿ ಶಾಲೆ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕೆಸರು ನೀರಿನಲ್ಲೇ ನಡೆಯಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಬೇಡಿಕೆ ಇರಿಸಿದ್ದಾರೆ.
ಈ ರಸ್ತೆಯ ದುರವಸ್ಥೆ ಕಂಡು ಇಲ್ಲಿ ಯಾರೂ ಬಸ್ಸು ಹಾಕಲು ಮನಸ್ಸು ಮಾಡುತ್ತಿಲ್ಲ. ರಿಕ್ಷಾ, ಕಾರು, ಇತರ ಬಾಡಿಗೆ ವಾಹನ ಮತ್ತು ಬೈಕ್ ನಂತಹ ಸಣ್ಣ ಪುಟ್ಟ ವಾಹನ ಮಾತ್ರ ಸಂಚಾರ ನಡೆಸುತ್ತವೆೆ. ಹೊಂಡ-ಗುಂಡಿಯಿರುವುದರಿಂದ ಈಗ ಪಾದಚಾರಿಗಳಿಗೂ ಕಷ್ಟಕರವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.