ಕೀನ್ಯಾದಲ್ಲಿ ಕನ್ನಡದ ಕಂಪು, ರಾಜ್ ಹಾಡು
Team Udayavani, May 14, 2019, 6:00 AM IST
ಉಡುಪಿ: ಕನ್ನಡದ ಕಂಪು ಕಿನ್ಯಾ ದೇಶದಲ್ಲೂ ಹರಡಿದೆ. ಕೀನ್ಯಾ ದೇಶದಲ್ಲಿರುವ ರಾಯಭಾರ ಕಚೇರಿಯಲ್ಲಿ ಕನ್ನಡದ ಸಂಸ್ಕೃತಿ ಅನಾವರಣಗೊಂಡಿದೆ.
ನಮ್ಮ ನಾಡಿನ ಸಂಪ್ರದಾಯ ಮಣ್ಣಿನ ಸೊಗಡನ್ನು ಕಂಡು ಕೀನ್ಯಾ ದೇಶವಲ್ಲದೆ ಹಲವು ದೇಶಗಳ ಜನ ಕೊಂಡಾಡಿದ್ದಾರೆ. ಶನಿವಾರ ಕಿನ್ಯಾದಲ್ಲಿರುವ ಭಾರತ ರಾಯಭಾರಿ ಕಚೇರಿಯಲ್ಲಿ ದಕ್ಷಿಣ ಭಾರತ ರಾಜ್ಯಗಳ ಸಾಂಸ್ಕೃತಿಕ ವಿನಿಮಯ ಹಾಗೂ ಆಹಾರ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಅಯೋಜಿಸಿದ್ದ ಭಾರತದ ರಾಯಭಾರಿ ಕಚೇರಿಯಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕ ರಾಜ್ಯಗಳು ತಮ್ಮ ನಾಡಿನ ವೈಶಿಷ್ಟ್ಯಗಳು ಹಾಗೂ ಸಂಸ್ಕೃತಿಯ ಪ್ರದರ್ಶನವನ್ನು ಮಾಡಿದರು.
ಕರ್ನಾಟಕದ ತಿನಿಸುಗಳಾದ ಬಿಸಿಬೇಳೆ ಬಾತ್, ಲೆಮೆನ್ ರೈಸ್, ನಿಪ್ಪಟ್ಟು, ಮೊಸರನ್ನ, ಕರಾವಳಿಯ ಖಾದ್ಯಗಳಾದ ನೀರುದೋಸೆ, ಚಿಕ್ಕನ್ ಕರಿ, ತೆಂಗಿನ ಕಾಯಿ ಹೋಳಿಗೆಯನ್ನು ತಯಾರಿಸಲಾಗಿತ್ತು. ಕನ್ನಡಿಗರು ಮಾತ್ರವಲ್ಲದೆ ನಾನಾ ದೇಶದ ರಾಯಭಾರಿಗಳು ತಿಂದು ಖುಷಿಪಟ್ಟರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ| ರಾಜ್ ಕುಮಾರ್ ಹಾಡುಗಳು ಮೆಚ್ಚುಗೆ ಗಳಿಸಿದವು. ರಾಜ್ ಕಾಮತ್ ರಾಜ್‌ರವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಹಾಡಿದರು.
ಕಿನ್ಯಾದಲ್ಲಿ ನೆಲೆಸಿರುವ ಕಾರ್ಕಳ ಮೂಲದ ಅನೆಕೆರೆ ರಾಜ್ ಕಾಮತ್ ಹಾಗೂ ಯೋಗಿನಿ ಪ್ರಭು ಕಾರ್ಯಕ್ರಮದ ನೇತೃತ್ವ ವಹಿಸಿದರು. ನಾಲ್ಕು ವರುಷಗಳ ಹಿಂದೆ ಉದ್ಯೋಗಕ್ಕಾಗಿ ತೆರಳಿದ ರಾಜ್ ಕಾಮತ್ ಕಿನ್ಯಾದಲ್ಲಿರುವ ಕನ್ನಡಿಗರನ್ನು ಸೇರಿಸಿ ಕನ್ನಡ ಸಾಂಸ್ಕೃತಿಕ ಸಂಘದಲ್ಲಿ ಸಕ್ರಿಯರಾಗಿದ್ದಾರೆ. ತಾನು ಕೆಲಸಕ್ಕಿರುವ ಕಂಪೆನಿಯಲ್ಲಿರುವ ಇತರ ರಾಜ್ಯ, ದೇಶಗಳ ಜನರಿಗೂ ಕನ್ನಡ ಕಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಕಿನ್ಯಾ ದೇಶದ ಜನರಿಗೆ ಕನ್ನಡ ಕಲಿಸಿ ಕನ್ನಡದಲ್ಲೇ ಮಾತನಾಡಿಸುತ್ತಾರಂತೆ. ಸ್ವತಃ ಗಾಯಕರಾಗಿರುವ ರಾಜ್ ಕಾಮತ್‌ರಿಗೆ ರಾಜ್ ಕುಮಾರ್ ಮೇಲೆ ಅಪಾರವಾದ ಗೌರವ. ಹೀಗಾಗಿ ಕಿನ್ಯಾ ಹುಡುಗರಿಗೆ ರಾಜ್ ಕುಮಾರ್ ಹಾಡುಗಳು ಮತ್ತು ನೃತ್ಯವನ್ನು ಕಲಿಸಿಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.