ಕಪ್ಪೆಟ್ಟು ಅಂಬೇಡ್ಕರ್ ಭವನ ಕಾಮಗಾರಿ ಕುಂಠಿತ: ಮನವಿ
Team Udayavani, Jul 21, 2017, 6:55 AM IST
ಉಡುಪಿ: ಅನುದಾನದ ಕೊರತೆಯಿಂದ ಅಂಬಲಪಾಡಿ ಕಪ್ಪೆಟ್ಟುವಿನ ಪರಿಶಿಷ್ಟ ಜಾತಿಯ ಸಮುದಾಯ ಮಂದಿರ (ಅಂಬೇಡ್ಕರ್ ಭವನ) ಕಾಮಗಾರಿಯು ಕುಂಠಿತಗೊಂಡಿದೆ.
ಸರಕಾರದಿಂದ 10 ಲ.ರೂ., ಲೋಕಸಭಾ ಸದಸ್ಯರಿಂದ 2.5 ಲ.ರೂ., ರಾಜ್ಯಸಭಾ ಸದಸ್ಯರಿಂದ 5 ಲ.ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಖರ್ಚಾಗಿದೆ. ಇನ್ನೂ ಹೆಚ್ಚುವರಿಯಾಗಿ 30 ಲ.ರೂ. ಅನುದಾನ ಬೇಕಿದೆ. ಈ ನಿಟ್ಟಿನಲ್ಲಿ ಸಭೆ ಕರೆದು ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಮನವಿ ಇತ್ತು ಗಮನಕ್ಕೆ ತರಲಾಯಿತು. ಅನುದಾನ ನೀಡುವುದಾಗಿ ಸಚಿವರು ಭರವಸೆ ಇತ್ತಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.
ಜೀಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ, ನಗರಸಭೆ ಸದಸ್ಯ ಗಣೇಶ್ ನೆರ್ಗಿ, ರಮೇಶ್ ಪಾಲನ್, ದಲಿತ ಮುಂದಾಳು ಸುಂದರ ಕಪ್ಪೆಟ್ಟು, ಸಮುದಾಯ ಭವನದ ಅಧ್ಯಕ್ಷ ಮಂಜುನಾಥ ಅಮೀನ್ ಕಪ್ಪೆಟ್ಟು, ಸದಸ್ಯರಾದ ಸಂತೋಷ್ ಕಪ್ಪೆಟ್ಟು, ಮಾಧವ ಕಪ್ಪೆಟ್ಟು, ಉದಯಕುಮಾರ್ ಕಪ್ಪೆಟ್ಟು, ಕುಮಾರ್ ಕಪ್ಪೆಟ್ಟು, ಜಗನ್ನಾಥ ಟೀಚರ್, ಸತೀಶ್ ಕೆ., ಉಮೇಶ್ ಬಿ., ರತ್ನಾಕರ ಕೆ., ಸುನೀಲ್ ಕುಮಾರ್ ಕೆ., ನವೀನ್ ಕೆ. ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.