ಕಾಪು ಸುಗ್ಗಿ ಮಾರಿಪೂಜೆ ; ಪುರಸಭೆಯಿಂದ ಸ್ವತ್ಛತೆಗೆ ಆದ್ಯತೆ


Team Udayavani, Mar 28, 2019, 6:30 AM IST

kapu-marigudi

ಕಾಪು : ಎರಡು ದಿನಗಳ ಕಾಲ ಜರಗಿದ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಸಂಬಂಧಿಸಿ ಕಾಪು ಪುರಸಭೆ ಕೈಗೊಂಡಿದ್ದ ಮಾದರಿ ಮುನ್ನೆಚ್ಚರಿಕಾ ಕ್ರಮಗಳಿಗೆ ಎಲ್ಲರಿಂದ ಪ್ರಶಂಸೆ ದೊರಕಿದೆ. ಈ ಬಾರಿಯ ಸುಗ್ಗಿ ಮಾರಿಪೂಜೆ ಸಂದರ್ಭ ಸುಮಾರು 7 ಟನ್‌ನಷ್ಟು ಹಸಿ ಮತ್ತು ಒಣ ಕಸ ಸಂಗ್ರಹವಾಗಿದ್ದು, ಶೇ. 95ರಷ್ಟು ಪ್ಲಾಸ್ಟಿಕ್‌ ರಹಿತವಾಗಿ ಮಾರಿಪೂಜೆಯನ್ನು ಆಚರಿಸಲಾಗಿದೆ.

ಕಾಪು ಪುರಸಭೆ ವತಿಯಿಂದ ಮೂರು ಮಾರಿಗುಡಿಗಳ ಆಸುಪಾಸಿನಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ 24 ಗಿ 7 ಮಾದರಿಯ ಸ್ವತ್ಛತಾ ಕಾರ್ಯಕ್ರಮ ನಡೆಸಲಾಗಿತ್ತು. ಸಂಪೂರ್ಣ ಸ್ವತ್ಛತೆಯ ಚಿಂತನೆಯೊಂದಿಗೆ 20 ಮಂದಿ ಪೌರ ಕಾರ್ಮಿಕರು, 2 ವಾಹನಗಳ ಸಹಿತವಾಗಿ ನಡೆಸಿರುವ ಮಾದರಿ ಕಾರ್ಯ ನಿರ್ವಹಣೆಗೆ ಶ್ಲಾಘನೆ ವ್ಯಕ್ತವಾಗಿದೆ.

ಸ್ವತ್ಛ ಕಾಪು – ಸುಂದರ ಕಾಪು ಘೋಷಣೆಯೊಂದಿಗೆ ಸ್ವತ್ಛತೆಗೆ ಆದ್ಯತೆ ನೀಡುತ್ತಾ ಬರುತ್ತಿರುವ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸ್ವತ್ಛತೆ, ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣ, ತ್ಯಾಜ್ಯ ಮುಕ್ತ ಕಾಪು ರಚನೆಯೂ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸುಗ್ಗಿ ಮಾರಿಪೂಜೆಯ ಸಂದರ್ಭದಲ್ಲಿ ಕಾಪುವಿಗೆ ಬಂದ ಲಕ್ಷಾಂತರ ಮಂದಿ ಭಕ್ತಾಧಿಗಳಲ್ಲಿಯೂ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಅವರ ನೇತೃತ್ವದಲ್ಲಿ ಸ್ವತ್ಛತೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಯಿತು.

24 x 7 ಮಾದರಿಯಲ್ಲಿ ಕಾರ್ಯನಿರ್ವಹಣೆ
ಕಾಪು ಪೇಟೆ ಮತ್ತು ಮೂರು ಮಾರಿಗುಡಿಗಳ ವಠಾರದಲ್ಲಿ ತೆರೆಯಲಾಗಿದ್ದ ಅಂಗಡಿ ಮತ್ತು ಸ್ಟಾಲ್‌ಗ‌ಳ ಸಹಿತವಾಗಿ ವಿವಿಧೆಡೆಗಳಲ್ಲಿ ಕಸ ಮತ್ತು ತ್ಯಾಜ್ಯ ಸಂಗ್ರಹಣೆಗಾಗಿ 50 ಡ್ರಮ್‌ಗಳನ್ನು ಇಡಲಾಗಿತ್ತು. ಜನರಿಗೆ ಸ್ವತ್ಛತೆಯ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 85ಕ್ಕೂ ಅಧಿಕ ಫಲಕಗಳನ್ನು ಅಳವಡಿಸಲಾಗಿತ್ತು. ಇದರೊಂದಿಗೆ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಅವರ ನೇತೃತ್ವದಲ್ಲಿ ಪರಿಸರ ಅಭಿಯಂತರ ರವಿಪ್ರಕಾಶ್‌, ಆರೋಗ್ಯ ನಿರೀಕ್ಷಕ ದಿನೇಶ್‌ ಕುಮಾರ್‌, ಬಿಲ್‌ ಕಲೆಕ್ಟರ್‌ಗಳಾದ ರಿತೇಶ್‌ ಮತ್ತು ಉಮೇಶ್‌ ಹಾಗೂ 6 ಮಂದಿ ಚಾಲಕರು, 20 ಮಂದಿ ಪೌರ ಕಾರ್ಮಿಕರು 24 ಗಿ 7 ಮಾದರಿಯಲ್ಲಿ ಸ್ವತ್ಛ ಕಾಪುವಿಗಾಗಿ ಶ್ರಮಿಸಿದ್ದಾರೆ.

ಎರಡು ದಿನದಲ್ಲಿ 7 ಟನ್‌ ಕಸ ಸಂಗ್ರಹ
ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ ನಡೆದ ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿ ಮತ್ತು ಅದರ ಸುತ್ತಮುತ್ತಲಿನಲ್ಲಿ 400ಕ್ಕೂ ಹೆಚ್ಚು ವಿವಿಧ ರೀತಿಯ ವ್ಯಾಪಾರ ಮಳಿಗೆಗಳು ತೆರೆದುಕೊಂಡಿದ್ದು, ಈ ಪ್ರದೇಶಗಳಿಂದ 4 ಟನ್‌ನಷ್ಟು ಹಸಿಕಸ ಮತ್ತು 3 ಟನ್‌ನಷ್ಟು ಒಣ ಕಸವನ್ನು ಸಂಗ್ರಹಿಸಲಾಗಿದೆ. ಇದನ್ನು ಘನ ಮತ್ತು ದ್ರವ ಸಂಪನ್ಮೂಲ ಘಟಕಕ್ಕೆ ಕೊಂಡೊಯ್ದು ಶೇಖರಣೆ ಮಾಡಲಾಗಿದೆ. ಮುಂದೆ ಅದನ್ನು ಸಂಪನ್ಮೂಲವಾಗಿ ಬಳಸಿಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.

15 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ ವಶಕ್ಕೆ
ಕಾಪು ಪುರಸಭೆಯ ಪ್ರದೇಶವನ್ನು ಈಗಾಗಲೇ ಪ್ಲಾಸ್ಟಿಕ್‌ ಮುಕ್ತ ವಲಯವನ್ನಾಗಿ ಘೋಷಿಸಲಾಗಿದ್ದು, ಮಾರಿಪೂಜೆಯ ಸಂದರ್ಭದಲ್ಲೂ ಪ್ಲಾಸ್ಟಿಕ್‌ ರಹಿತ ಮಾರಿಪೂಜೆ ನಡೆಸುವಂತೆ ಅಂಗಡಿ ಮಾಲಕರಿಗೆ, ಮಾರಿಗುಡಿಯ ಆಡಳಿತ ಮಂಡಳಿ ಮತ್ತು ಸಾರ್ವಜನಿಕರಿಗೆ ಪುರಸಭೆ ವತಿಯಿಂದ ಮನವಿ ಮಾಡಲಾಗಿತ್ತು. ಅದರಂತೆ ಶೇ. 95ರಷ್ಟು ಪ್ಲಾಸ್ಟಿಕ್‌ ರಹಿತವಾಗಿ ಮಾರಿಪೂಜೆ ಆಚರಿಸಲಾಗಿದೆ. ಶಿವಮೊಗ್ಗ, ದಾವಣಗೆರೆ, ಮಂಗಳೂರು ಮತ್ತು ಉಡುಪಿ ಕಡೆಗಳಿಂದ ಬಂದ ವ್ಯಾಪಾರಸ್ಥರಿಂದ 15 ಕೆ.ಜಿ. ಪ್ಲಾಸ್ಟಿಕ್‌ನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.

ಟಾಪ್ ನ್ಯೂಸ್

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dw

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

accident2

Gangolli: ಸ್ಕೂಟರ್‌ – ಬೈಕ್‌ ಢಿಕ್ಕಿ; ಗಾಯ

accident

Shirva: ರಿಕ್ಷಾ ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

7

Manipal: ಅಪಘಾತ ತಡೆಯಲು ಹೀಗೆ ಮಾಡಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

dw

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

8

Kasaragod: ಟ್ಯಾಂಕರ್‌ ಲಾರಿಯಿಂದ ರಸ್ತೆಗೆ ಹರಿದ ಎಣ್ಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.