ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !
Team Udayavani, May 16, 2021, 2:48 PM IST
ಕಾಪು : ಕಾಪು ಲೈಟ್ ಹೌಸ್ ಗಿಂತ 15 ಕಿ.ಮೀ ದೂರದ ಕಾಪು ಪಾರ್ ಬಂಡೆಗೆ ಸಿಲುಕಿ ಪ್ರಾಣ ರಕ್ಷಣೆಗೆ ಒದ್ದಾಡುತ್ತಿರುವ 9 ಮಂದಿಯ ರಕ್ಷಣೆಗೆ ಇನ್ನೂ ರಕ್ಷಣಾ ಕಾರ್ಯಾಚರಣೆ ಪ್ರಾರಂಭಗೊಳ್ಳದೇ ಇರುವುದರಿಂದ ಆತಂಕ ಎದುರಾಗಿದೆ.
ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯದ ಪರಿಣಾಮ ಸಮುದ್ರ ಮಧ್ಯದಲ್ಲೇ 9 ಮಂದಿ ಜೀವ ಭಯದಿಂದ ಒದ್ದಾಡುವಂತಾಗಿದೆ.
ನವಮಂಗಳೂರು ಬಂದರಿಗೆ ಪ್ರವೇಶಿಸಬೇಕಿದ್ದ ಕೋರಂಗಲ್ ಬೋಟ್ ಚಂಡ ಮಾರುತದ ಪ್ರತಾಪಕ್ಕೆ ಸಿಲುಕಿ ಕಾಪುಲೈಟ್ ಹೌಸ್ ಬಳಿಯ ಕಾಪು ಪಾರ್ ಬಂಡೆಗೆ ಸಿಲುಕಿ ಅಪಘಾತಕ್ಕೀಡಾಗಿತ್ತು.
ಬೋಟ್ ಅಪಘಾತಕ್ಕೀಡಾದ ವಿಚಾರ ರವಿವಾರ ಬೆಳಗ್ಗೆ 8.30 ಕ್ಕೆ ಕರಾವಳಿ ಕಾವಲು ಪಡೆ ಪೊಲೀಸರಿಗೆ ವರದಿಯಾಗಿದ್ದು, ಬಳಿಕ ರಕ್ಷಣಾ ಕಾರ್ಯಾಚರಣೆ ಗೆ ಸಿದ್ಧತೆಗಳು ನಡೆದಿದ್ದವು.
ಇದನ್ನೂ ಓದಿ : ಕಾಪು ಲೈಟ್ ಹೌಸ್ ನಿಂದ 15 ಕಿ. ಮೀ. ದೂರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬೋಟ್ ಸಿಬ್ಬಂದಿಗಳು
ರಕ್ಷಣಾ ಕಾರ್ಯಾಚರಣೆ ನಡೆಸುವ ಬಗ್ಗೆ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ನಡೆಸಲಿದೆ ಎಂದು ಕೀ ರೋಜ್ ಕಂಪೆನಿಯ ಪ್ರಬಂಧಕ ವೇಲು ತಿಳಿಸಿದ್ದರು. ಆದರೆ ಮಧ್ಯಾಹ್ನದ ವರೆಗೂ ರಕ್ಷಣಾ ಕಾರ್ಯಾಚರಣೆ ನಡೆಯದೇ ಇದ್ದುದರಿಂದ ಬೋಟ್ ನಲ್ಲಿ ಇರುವವರ ಆತಂಕ ಮತ್ತಷ್ಡು ಹೆಚ್ಚಾಗಿದೆ.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಉಡುಪಿ ಎಸ್ಪಿ ವಿಷ್ಣುವರ್ಧನ್, ಎಡಿಸಿ ಸದಾಶಿವ ಪ್ರಭು, ಅಡಿಷನಲ್ ಎಸ್ಪಿ ಕುಮಾರಚಂದ್ರ, ಸಿಐ ಪ್ರಕಾಶ್, ಕರಾವಳಿ ಕಾವಲು ಪಡೆಯ ಅಧಿಕಾರಿಗಳಾದ ನಾಗರಾಜ್, ಸುಜಾತ, ಕಾಪು ಎಸ್ಸೈ ರಾಘವೇಂದ್ರ ಮೊದಲಾದವರು ಭೇಟಿ ನೀಡಿದರಾದರೂ ಮಧ್ಯಾಹ್ನದವರೆಗೂ ಯಾವುದೇ ರೀತಿಯ ರಕ್ಷಣಾ ಕಾರ್ಯಾಚರಣೆ ನಡೆಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.