ಕಾಪು ಪೇಟೆಯ ವಿವಿಧೆಡೆ ದಾಳಿ, ಪರಿಶೀಲನೆ
Team Udayavani, Sep 19, 2019, 5:15 AM IST
ಕಾಪು: ಉಡುಪಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಮತ್ತು ಕಾಪು ಪೊಲೀಸ್ ಇಲಾಖೆಯು ಜಂಟಿಯಾಗಿ ಕಾಪು ಪೇಟೆಯ ವಿವಿಧ ಅಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ಕೋಟ್ಪಾ ಕಾಯ್ದೆ ಜಾರಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಲಾಯಿತು.
ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸಿ ಕಾಪು ಪೇಟೆಯಲ್ಲಿ ತಂಬಾಕು ಪದಾರ್ಥಗಳಾದ ಬೀಡಿ, ಸಿಗರೇಟು, ನಶ್ಯಾ, ಗುಟ್ಕಾ ಮೊದಲಾದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಮತ್ತು ಬಾರ್ – ರೆಸ್ಟೋರೆಂಟ್ಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಕಾಯ್ದೆ ಉಲ್ಲಂಘಿಸುತ್ತಿದ್ದ 10 ಅಂಗಡಿಗಳಿಗೆ ತಲಾ 400 ರೂ. ಗಳಂತೆ ದಂಡ ವಿಧಿಸಲಾಯಿತು.
ಫಲಕ ನೀಡಿ ಎಚ್ಚರಿಕೆ ಜಾಗೃತಿ : ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿರುವುದು ಮಾತ್ರವಲ್ಲದೇ ಅಲ್ಲಿ ಆಹಾರ ಸಂರಕ್ಷಣೆ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ಎಚ್ಚರಿಕೆಯ ಬಗ್ಗೆ ಅಳವಡಿಸಬೇಕಾದ ಬೋರ್ಡಗಳನ್ನು ನೀಡಲಾಯಿತು.
ಉಡುಪಿ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ| ವಾಸುದೇವ, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರತ್ನಾ, ಹಿರಿಯ ಆಹಾರ ನಿರೀಕ್ಷಕ ವೆಂಕಟೇಶ್, ಆರೋಗ್ಯಾಧಿಕಾರಿ ದೇವಪ್ಪ ಪಟಾಗಾರ್, ಜಿಲ್ಲಾ ಕಾರ್ಮಿಕ ಇನ್ಸ್ಪೆಕ್ಟರ್ ಜೀವನ್, ಕಾಪು ಪೊಲೀಸ್ ಠಾಣಾ ಎಎಸ್ಸೆ ರಾಜೇಂದ್ರ ಮಣಿಯಾಣಿ, ಬೀಟ್ ಸಿಬಂದಿ ಲಕ್ಷ್ಮಣ್, ಮಂಜುಳಾ ಶೆಟ್ಟಿ, ಶೈಲಾ ಶಾಮನೂರ್ ಜೊತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.