ಕಾಪು: ಕೋವಿಡ್ 19 ಆತಂಕದಲ್ಲೂ ಪೌರ ಕಾರ್ಮಿಕರ ಕಾರ್ಯನಿಷ್ಠೆ
Team Udayavani, Mar 27, 2020, 5:27 AM IST
ಕಾಪು: ಎಲ್ಲೆಡೆ ಕೋವಿಡ್ 19 ಆತಂಕ, ಲಾಕ್‌ಡೌನ್ ಆದೇಶ ಪಾಲನೆಯಾಗು ತ್ತಿದ್ದು ಅದರ ನಡುವೆಯೂ ಪುರಸಭೆಯ ಪೌರ ಕಾರ್ಮಿಕರು ಮಾತ್ರ ಸ್ವತ್ಛತೆಯೇ ನಮ್ಮ ಉಸಿರು ಎಂಬ ಉದ್ದೇಶದಡಿ ಎಂದಿನಂತೆ ವಿವಿಧೆಡೆ ತೆರಳಿ ಕಸ, ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಮಾದರಿಯಾಗಿ ಮೂಡಿ ಬರುತ್ತಿದ್ದಾರೆ.
ಕಾಪು ಪುರಸಭೆಯ ಎಲ್ಲ ಪೌರ ಕಾರ್ಮಿಕರು ಕೂಡಾ ಕೋವಿಡ್ 19 ಆತಂಕದ ನಡುವೆಯೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. 24 ಮಂದಿ ಪೌರ ಕಾರ್ಮಿಕರು, ಅವರೊಂದಿಗೆ 5 ಮಂದಿ ಚಾಲಕರು ಪುರಸಭೆಯ ಪ್ರತಿ ವಾರ್ಡ್‌ಗಳಿಗೂ ತೆರಳಿ, ಅಲ್ಲಿ ಸಂಗ್ರಹವಾಗಿರುವ ಹಸಿ ಕಸ – ಒಣ ಕಸಗಳನ್ನು ಪುರಸಭೆ ನಿಗದಿ ಪಡಿಸಿರುವ ಕಾನೂನಿನಂತೆಯೇ ಸಂಗ್ರಹಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಅವರೊಂದಿಗೆ ಪುರಸಭೆ ತ್ಯಾಜ್ಯ ಸಂಗ್ರಹಣ ಯಾರ್ಡ್‌ನಲ್ಲಿ 4 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪೌರ ಕಾರ್ಮಿಕರಿಗೆ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಿ, ಕೈ ಗ್ಲೌಸ್‌ಗಳನ್ನು ಧರಿಸಿ ಕೆಲಸ ನಿರ್ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ. ಕೋವಿಡ್ 19 ವೈರಸ್ ರೋಗಾಣು ಹರಡುವಿಕೆ ಎಚ್ಚರ ವಹಿಸುವ ಬಗ್ಗೆ ಪೌರ ಕಾರ್ಮಿಕರೊಂದಿಗೆ ಸಭೆ ನಡೆಸಿ ವಿಶೇಷ ಮಾಹಿತಿ ನೀಡಲಾಗಿದೆ.
ಗ್ಲೌಸ್‌ಗಳನ್ನು ನೀಡದಿರಿ
ಸರಕಾರದ ನಿರ್ದೇಶನದಂತೆ ಹಿಂದಿನಂತೆಯೇ ಪುರಸಭೆ ವ್ಯಾಪ್ತಿಯಲ್ಲಿ ಎಲ್ಲರೀತಿಯ ಕಸ-ತ್ಯಾಜ್ಯಗಳನ್ನೂ ಪೌರ ಕಾರ್ಮಿಕರು ಸಂಗ್ರಹಿಸುತ್ತಿದ್ದಾರೆ. ಆದರೆ ಮನೆಗಳಲ್ಲಿ ಬಳಸಿರುವ ಗ್ಲೌಸ್‌ಗಳನ್ನು ತ್ಯಾಜ್ಯ ಸಂಗ್ರಹಣೆಯ ವಾಹನಗಳಿಗೆ ನೀಡದಂತೆ ನಾಗರಿಕರಿಗೆ ಸೂಚನೆ ನೀಡಲಾಗಿದೆ. ಪೌರ ಕಾರ್ಮಿಕರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಜನರಲ್ಲಿ ವಿವಿಧ ರೀತಿಯ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗಿದೆ. ಸಾರ್ವಜನಿಕರು ಕೂಡಾ ಪೌರ ಕಾರ್ಮಿಕರನ್ನು ಕೂಡಾ ನಮ್ಮಂತೆಯೇ ಎಂದು ತಿಳಿದು ಅವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕಿದೆ.
– ವೆಂಕಟೇಶ್ ನಾವುಡ, ಮುಖ್ಯಾಧಿಕಾರಿ, ಕಾಪು ಪುರಸಭೆ
ನಿತ್ಯದಂತೆ ಕೆಲಸ
ಕಾಪು ಪುರಸಭೆ ವ್ಯಾಪ್ತಿಯ ಜನರ ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ಕೆಲಸವನ್ನು ಮುಂದುವರಿಸುತ್ತಿದ್ದೇವೆ. ನಮ್ಮ ಆರೋಗ್ಯದ ದೃಷ್ಟಿಯಿಂದ ಸ್ಯಾನಿಟೈಸರ್, ಹ್ಯಾಂಡ್ ವಾಶ್‌ಗೆ ಬೇಕಾದ ಲಿಕ್ವಿಡ್, ಸೋಪು, ಮಾಸ್ಕ್, ಕೈ ಗ್ಲೌಸ್ ಇತ್ಯಾದಿ ಅಗತ್ಯದ ವಸ್ತುಗಳನ್ನು ಪುರಸಭೆ ವತಿಯಿಂದಲೇ ನೀಡಿದ್ದಾರೆ. ಪ್ರತೀ ನಿತ್ಯದಂತೆ ಬೆಳಗ್ಗೆ 6 ಗಂಟೆಯಿಂದ ಕಸ ಗುಡಿಸುವಿಕೆ ಸಹಿತವಾಗಿ ನಾವು ಖುಷಿಯಿಂದ ದಿನ ನಿತ್ಯದಂತೆ ಕೆಲಸ ನಿರ್ವಹಿಸುತ್ತಿದ್ದೇವೆ. ಪುರಸಭೆ ಮುಖ್ಯಾಧಿಕಾರಿ ಸಹಿತವಾಗಿ ಅಧಿಕಾರಿಗಳು ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ. ಜನರ ಪೂರ್ಣ ಸಹಕಾರವೂ ಅಗತ್ಯವಾಗಿದೆ.
-ಪೌರ ಕಾರ್ಮಿಕರು, ಕಾಪು ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.