Kapu ಗ್ಯಾರಂಟಿ ಯೋಜನೆ: ಶೋಭಾಗೆ ಲಕ್ಷ್ಮೀ ಸವಾಲು
Team Udayavani, Sep 2, 2023, 11:55 PM IST
ಕಾಪು: ರಾಜ್ಯ ಸರಕಾರದ ಉಚಿತ ಯೋಜನೆಗಳನ್ನು ಟೀಕಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯ ಅರಿಗೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿನ ತಿರುಗೇಟು ನೀಡಿದ್ದಾರೆ.
ಉಚ್ಚಿಲದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು ಶೋಭಾ ಕರಂದ್ಲಾಜೆಯವರೇ ನಿಮಗೆ ಧೈರ್ಯವಿದ್ದರೆ ಉಡುಪಿಗೆ ಬಂದು ಪತ್ರಿಕಾಗೋಷ್ಠಿ ಕರೆದು ರಾಜ್ಯ ಸರಕಾರದ ಗ್ಯಾರಂಟಿಗಳನ್ನು ರದ್ದು ಮಾಡುವಂತೆ ಹೇಳಿ ಎಂದು ಸವಾಲು ಹಾಕಿದರು.
ಶೋಭಾ ನನಗಿಂತ ಹಿರಿಯರು. ಎರಡು ಮೂರು ಬಾರಿ ಮಂತ್ರಿಯಾಗಿದ್ದಾರೆ. ಹಾಲಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರಿಗೆ ಹೆಚ್ಚು ತಿಳಿಸಿದೆ. ವಾಸ್ತವದ ಅರಿವಿದೆ. ಈಗ ಚುನಾವಣೆ ಹತ್ತಿರವಿದೆ. ಹಾಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ವಿಪಕ್ಷದವರಾಗಿ ನಮ್ಮ ಯೋಜನೆಗಳನ್ನು ಟೀಕೆ ಮಾಡುತ್ತಾರೆ. ಆದರೆ ಅವರು ಗ್ಯಾರಂಟಿಗಳನ್ನು ನಿಲ್ಲಿಸುವಂತೆ ಉಡುಪಿಗೆ ಬಂದು ಪ್ರಸ್ ಮೀಟ್ ಕರೆದು ಒತ್ತಾಯಿಸಲಿ ಎಂದರು.