ಹೊಳೆ ಹರಿವಿನ ದಿಕ್ಕನ್ನೇ ಬದಲಿಸಿದ ಉತ್ತರಾ ನೆರೆ:ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ
Team Udayavani, Sep 21, 2020, 8:16 AM IST
ಕಾಪು:ರವಿವಾರ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆ ಸೋಮವಾರ ಸ್ವಲ್ಪ ಕಡಿಮೆಯಾಗಿದೆ. ಹಲವೆಡೆ ನೆರೆ ನೀರು ನಿಧಾನವಾಗಿ ತಗ್ಗುತ್ತಿದ್ದು, ಮಳೆಯಿಂದಾದ ಹಾನಿಯ ದೃಶ್ಯಗಳು ಕಂಡುಬರುತ್ತಿದೆ.
ಕಾಪು ಲೈಟ್ ಹೌಸ್ ಬಳಿಯ ಹೊಳೆಯಿಂದ ನೆರೆ ನೀರು ದಿಕ್ಕು ಬದಲಿಸಿ ಸಮುದ್ರ ಸೇರುತ್ತಿದ್ದು ಪ್ರಸಿದ್ದ ಲೈಟ್ ಹೌಸ್‌ನ್ನು ಸಂಪರ್ಕಿಸುವ ಕಾಲು ದಾರಿಯ ಮಾರ್ಗವು ಸಂಪೂರ್ಣ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ಕಾಪು ಬೀಚ್‌ನಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಲೈಟ್ ಹೌಸ್‌ನ ಹಿಂಭಾಗದಲ್ಲಿ ಸಮುದ್ರ ಮತ್ತು ಹೊಳೆ ನೀರಿನ ಸಂಗಮ ಪ್ರದೇಶವಿದ್ದು, ಭಾರೀ ಮಳೆಯಿಂದಾಗಿ ರವಿವಾರ ಸಂಜೆಯ ವೇಳೆ ಹೊಳೆ ಹರಿಯುವ ದಿಕ್ಕು ಬದಲಾಗಿದೆ.
ಇದನ್ನೂ ಓದಿ:ಜಿಲ್ಲೆಯಲ್ಲಿ ಇನ್ನು 2 ದಿನ ರೆಡ್ ಅಲರ್ಟ್: 700 ಕುಟುಂಬಗಳ ಸ್ಥಳಾಂತರ: ಉಡುಪಿ ಜಿಲ್ಲಾಧಿಕಾರಿ
ಹೊಳೆಯ ಹಿಂದಿನ ದಾರಿಯ ಬದಲಾಗಿ ಹರಿದು ಬಂದು ನೀರು ಲೈಟ್ ಹೌಸ್‌ನ ಮುಂಭಾಗದಿಂದಲೇ ಸಮುದ್ರವನ್ನು ಸೇರುತ್ತಿರುವುದರಿಂದ ಲೈಟ್ ಹೌಸ್ ಗೆ ತೆರಳುವ ಸಂಪರ್ಕ ಕೊಂಡಿ, ಶೌಚಾಲಯ ಬಳಿಯ ಸಿಮೆಂಟ್ ಸ್ಲಾಬ್, ಪಾತ್ ವೇ, ಲೈಟ್ ಹೌಸ್ ಪ್ರವೇಶದ ಮೆಟ್ಟಿಲುಗಳು ಸಂಪೂರ್ಣ ಕೊಚ್ಚಿ ಹೋಗಿವೆ.
ಕಾಪು ಪಡು ಗ್ರಾಮ, ಗರಡಿ ಪ್ರದೇಶ, ಸುಬ್ಬಯ್ಯ ತೋಟ, ಬೈರು ಗುತ್ತು ತೋಟ ಸೇರಿದಂತೆ ಎಲ್ಲೆಡೆ ಸಂಗ್ರಹವಾಗಿ, ಈ ಹೊಳೆಯ ಮೂಲಕ ರಭಸವಾಗಿ ಹರಿದು ಬರುತ್ತಿರುವ ಮಳೆ ನೀರು ಲೈಟ್ ಹೌಸ್‌ನ ಮುಂಭಾಗದಿಂದಲೇ ಸಮುದ್ರ ಸೇರುತ್ತಿರುವುದರಿಂದ ಕಾಪು ಲೈಟ್ ಹೌಸ್‌ಗೆ ಹೋಗುವ ಸಂಪರ್ಕ ಕಡಿತಕ್ಕೊಳಗಾಗಿದ್ದು, ಸೋಮವಾರವೂ ಮಳೆ ಮುಂದುವರಿದರೆಮತ್ತಷ್ಟು ಅಪಾಯ ಹೆಚ್ಚುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಭಾರಿ ಮಳೆಗೆ ಭದ್ರಾವತಿಯ ಹೊಸ ಸೇತುವೆ ಮುಳುಗಡೆ: ವಾಹನ ಸಂಚಾರ ಬಂದ್
ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಪುರಸಭಾ ಸದಸ್ಯರು ಮತ್ತು ಲೈಟ್ ಹೌಸ್ ಡಿಪಾರ್ಟ್‌ಮೆಂಟ್‌ನ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಮುಂಜಾನೆಯಿಂದಲೇ ಇಲ್ಲಿನ ಹಾನಿಯ ದೃಶ್ಯ ವೀಕ್ಷಣೆಗೆ ಜನ ಆಗಮಿಸಲಾರಂಭಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.